Breaking News

ಅಂಗನವಾಡಿ ಕೇಂದ್ರಕ್ಕೆ ಕುಡಿಯುವ ಕೂಲ್ ವಾಟರ್ ಕ್ಯಾನ್ ನೀಡಿ ಹುಟ್ಟುಹಬ್ಬವನ್ನು ಆಚರಣೆ:

ಗಂಗಾವತಿ: ನಗರದಶ್ರೀವೀರಮಹೇಶ್ವರ ಜಂಗಮ ಸಮಾಜ ಸಂಘದ ಉಪಾಧ್ಯಕ್ಷರಾದ ಎಸ್.ಬಿ.ಹಿರೇಮಠ ಇವರು ತಮ್ಮ 65 ನೇ ವರ್ಷದ ಜನ್ಮದಿನದ ಪ್ರಯುಕ್ತ,34 ನೇ ವಾರ್ಡ್ ಹಿರೇಜಂತಕಲ್ ಕಂಬಳಿಮಠದ ಹತ್ತಿರ ಇರುವ 3ನೇ ಅಂಗನವಾಡಿ ಕೇಂದ್ರದ ಪುಟ್ಟ ಪುಟ್ಟ ಮಕ್ಕಳಿಗೆ ಕುಡಿಯುವ ಕೂಲ್ ವಾಟರ್ ಕ್ಯಾನ್ ನೀಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಅತ್ಯಂತ ಸರಳವಾಗಿ ಮುಗ್ದತೆಯಿಂದ ಇರುವ ಮಕ್ಕಳೊಂದಿಗೆ ಹುಟ್ಟು ಹಬ್ಬವನ್ನು ಆಚರಣೆ ಮಾಡಿಕೊಂಡರು, ಸಮಾಜದಲ್ಲಿ ಕೆಲವರು ತಮ್ಮ ಹುಟ್ಟು ಹಬ್ಬವನ್ನು ಅತ್ಯಂತ ವಿಶೇಷವಾಗಿ ಮತ್ತು ವೈಭವವಾಗಿ ಆಚರಿಸಿಕೊಳ್ಳುತ್ತಾರೆ ಇನ್ನು ಕೆಲವರು ಸ್ವರ್ಗದಂತೆ ಆಚರಿಸಿಕೊಳ್ಳುತ್ತಾರೆ ಆದರೆ, 65 ವರ್ಷ ವಯಸ್ಸಿನ ಎಸ್.ಬಿ.ಹಿರೇಮಠ್ ಇವರು ಮಾತ್ರ ಸಮಾಜದಲ್ಲಿ ನನ್ನದು ಎನ್ನುವ ಒಂದು ಸಣ್ಣ ಕೊಡುಗೆಯನ್ನು ಸಮಾಜಕ್ಕೆ ನೀಡಬೇಕೆಂಬ ಹೆಬ್ಬಯಕೆಯಿಂದ, ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ, ಅಲ್ಲಿ ಬೇಕಾಗಿರುವ ವಸ್ತುಗಳನ್ನು ನೀಡಿ, ಇದೇ ನನ್ನ ಹುಟ್ಟು ಹಬ್ಬದ ಆಚರಣೆ ಎಂದು ಅಂಗನವಾಡಿಯ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಸಂತಸ ವ್ಯಕ್ತಪಡಿಸಿದರು. ಇವರ ಈ ಇಳಿ ವಯಸ್ಸಿನ ನಗು ಮುಖದಲ್ಲಿ ಅದೇನೋ ಒಂದು ತರ ಉತ್ಸಾಹ, ಉಲ್ಲಾಸ ತುಂಬಿತುಳುಕುತ್ತಿತ್ತು. ಈ ರೀತಿ ಹುಟ್ಟುಹಬ್ಬಗಳನ್ನು ಆಚರಿಸುವುದು ಅತ್ಯಂತ ವಿರಳ.
ಈ ಸಂದರ್ಭದಲ್ಲಿ ಶ್ರೀ ವೀರಮಹೇಶ್ವರ ಜಂಗಮ ಸಮಾಜದ ಕಾರ್ಯದರ್ಶಿ ಆದಯ್ಯ ಸ್ವಾಮಿ ಹಿರೇಮಠ, ಮಂಜುನಾಥ ಸ್ವಾಮಿ ಕೆಂಬಾವಿಮಠ, ಚನ್ನಪ್ಪ, ಅಂಗನವಾಡಿ ಶಿಕ್ಷಕಿ ಸುನಿತ ಅರುಣುಕುಮಾರ,ಹಾಗೂ ಮಕ್ಕಳು ಸೇರಿದಂತೆ ಇತರರು ಇದ್ದರು.

ಜಾಹೀರಾತು

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.