Breaking News

ವಸತಿ ಯೋಜನೆಯ ಫಲಾನುಭವಿ ಆಯ್ಕೆ ವಿಧಾನ ಸರಿಯಾದ ರೀತಿಯಲ್ಲಿ ನಡೆಯಬೇಕು :ಜಿಪಂ ಸಿಇಓ ರಾಹುಲ್ ಶಿಂಧೆ

ಬೆಳಗಾವಿ: ಬರಗಾಲ ಹಾಗೂ ಚುನಾವಣೆ ಎರಡನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆಯಾಗದಂತೆ ನೋಡಿಕೊಂಡಿರುವುದು ಹಾಗೂ ಸ್ವೀಪ್ ಕಾರ್ಯಕ್ರಮಗಳನ್ನು ಅಚ್ಚುಕಟ್ಟಾಗಿ ಹಮ್ಮಿಕೊಂಡು ಮತದಾನ ಪ್ರಮಾಣ ಹೆಚ್ಚಾಗಿರುವುದಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹಲ್ ಶಿಂಧೆ ಅಭಿನಂದನೆಗಳನ್ನು ತಿಳಿಸಿದರು.

ಬೆಳಗಾವಿ ಸುವರ್ಣಸೌಧ, ಸೆಂಟ್ರಲ್ ಹಾಲ್ ನಲ್ಲಿ ಶುಕ್ರವಾರ (ಜೂ.7) ತಾಲ್ಲೂಕು ಪಂಚಾಯತ್ ಮತ್ತು ಗ್ರಾಮ ಪಂಚಾಯತಗಳಿಗೆ ಸಂಬಂಧಪಟ್ಟ ವಿಷಯಗಳ ಕುರಿತಾದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಸತಿ ಯೋಜನೆಯ ಫಲಾನುಭವಿ ಆಯ್ಕೆ ವಿಧಾನ ಸರಿಯಾದ ರೀತಿಯಲ್ಲಿ ಆಗಬೇಕು. ವಸತಿ ಯೋಜನೆಯ ಫಲಾನುಭವಿ ಆಯ್ಕೆಯಲ್ಲಿ ಮತ್ತು ಮನೆಯ ಜಿ.ಪಿ.ಎಸ್ ಮಾಡುವ ಸಂದರ್ಭದಲ್ಲಿ ದುಡ್ಡು ಕೇಳುತ್ತಾರೆ ಎಂಬ ದೂರುಗಳು ಕೇಳಿ ಬರುತ್ತಿದ್ದು, ಅಂತಹ ದೂರುಗಳು ಜಿಪಂ ವರಗೆ ಬಂದಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ತಿಳಿಸಿದರು. ಎಲ್ಲ ಗ್ರಾಮ ಪಂಚಾಯತಿಗಳು ತಮ್ಮ ಗ್ರಾಮ ಪಂಚಾಯತಿಗಳ ಹಂತದಲ್ಲಿ ವಸತಿ ರಹಿತ ಜನರ ಹೆಸರುಗಳ ಪಟ್ಟಿಯನ್ನು ಸಿದ್ದಪಡಿಸುವುದು ಹಾಗೂ ಗ್ರಾಮ ಪಂಚಾಯತಿ ಹಂತದಲ್ಲಿ ಸರ್ಕಾರಿ ಜಮೀನು ಇದ್ದಂತಹ ಸಂದರ್ಭದಲ್ಲಿ ಸರ್ವೇ ನಂಬರ ಮತ್ತು ಉತಾರ ಸಹಿತ ಸರ್ಕಾರಿ ಜಮೀನನ್ನು ವಸತಿ ನಿವೇಶನಕ್ಕೆ ಕಾಯ್ದಿರಿಸಲು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಪ್ರಸ್ತಾವನೆಯನ್ನು ಸಲ್ಲಿಸುವುದು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳು ಗ್ರಾಮ ಪಂಚಾಯತಿಗಳು ಸಲ್ಲಿಸಿದ ಪ್ರಸ್ತಾವನೆಯನ್ನು ಸದರಿ ಜಮೀನಿನನ್ನು ವಸತಿ ನಿವೇಶನಕ್ಕೆ ಕಾಯ್ದಿರಿಸಲು ತಹಶೀಲ್ದಾರರವರಿಗೆ ಪತ್ರ ಬರೆದು ಅದರ ಪ್ರತಿಯನ್ನು ಜಿಪಂ ಬೆಳಗಾವಿಗೆ ಕಳುಹಿಸಲು ಸೂಚನೆ ನೀಡಿದರು.

ಜಿ.ಪಂ.ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ್ ಅಡವಿಠ ಮಾತನಾಡಿ ಜಿಲ್ಲೆಯ ಎಲ್ಲ ತಾಲೂಕುಗಳಿಗೆ ಹೋಲಿಕೆ ಮಾಡಿದ್ದಲ್ಲಿ ಸವದತ್ತಿ, ಯರಗಟ್ಟಿ ಮತ್ತು ಹುಕ್ಕೇರಿ ತಾಲೂಕು ಪಂಚಾಯತಗಳು ಕರ ವಸೂಲಿ ಉತ್ತಮ ರೀತಿಯಲ್ಲಿ ಮಾಡಿದ್ದಾರೆ. ಅದೇ ರೀತಿ ರಾಮದುರ್ಗ ತಾಲೂಕಿನ ಆಯ್ದ ಗ್ರಾಮ ಪಂಚಾಯತಿಗಳಾದ ಸಂಗಳ, ಬನ್ನೂರ, ಹೊಸಕೇರಿ, ಇಡಗಲ್ ಮತ್ತು ಓಬಳಾಪೂರ ಹಾಗೂ ಕಿತ್ತೂರ ತಾಲೂಕಿನ ಉಗರಕೊಡ, ದೇಗಾಂವ ಗ್ರಾಮ ಪಂಚಾಯತಗಳು ಕರ ವಸೂಲಿ ಕಡಿಮೆ ಮಾಡಿರುವುದರಿಂದ ಅವರಿಗೆ ಕರ ವಸೂಲಾತಿ ಹೆಚ್ಚಿನ ಪ್ರಮಾಣದಲ್ಲಿ ಮಾಡಲು ಸಹಾಯಕ ನಿರ್ದೇಶಕರು(ಪಂ.ರಾಜ್) ಮತ್ತು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ಕ್ರಮವಹಿಸಲು ನಿರ್ದೇಶನ ನೀಡಿ, ಪ್ರಸಕ್ತ ಸಾಲಿನ ಡಿಸೆಂಬರ ವರ್ಷದ ಅಂತ್ಯದ ವರೆಗೆ ಪ್ರತಿ ಶತ 100% ರಷ್ಟು ಪ್ರಗತಿ ಸಾಧಿಸಲು ತಿಳಿಸಿದರು.
ಕರ ವಸೂಲಾತಿಯನ್ನು ಪಂಚಾಯತಿ ಸಿಬ್ಬಂದಿ ಇಲ್ಲವೆ ಸ್ವ-ಸಹಾಯ ಸಂಘದ ಸದಸ್ಯರ ಮೂಲಕ ಮಾಡಿಸಲು ತಿಳಿಸಿದರು.

ಮುಂದುವರೆದು, ಬೆಳಗಾವಿ ತಾಲೂಕಿನಲ್ಲಿ ಸೋಲಾರ್, ವಿಂಡಮಿಲ್, ಇಂಡಸ್ಟ್ರೀ, ಪ್ರಾವೆಟ್ ಇನಸ್ಟಿಟ್ಯೂಷನ್ ಗಳು ಸ್ಥಿರ ಆದಾಯಗಳಾಗಿದ್ದು ಇವುಗಳಲ್ಲಿ ಕರ ವಸೂಲಾತಿಗೆ ಪಂಚಾಯತ ಅಭಿವೃದ್ದಿಗೆ ಸೂಚನೆ ನೀಡಿದರು. ಇಂಡಸ್ಟ್ರೀ ಪ್ರದೇಶಗಳಾದ ಹೊನಗಾ, ಸಂತಿ ಬಸ್ತವಾಡ ಕರ ವಸೂಲಾತಿಗೆ ಏನಾದರೂ ತೊಂದರೆಯಿದ್ದಲ್ಲಿ ನೇರವಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಂಪರ್ಕಿಸಲು ಪಂಚಾಯತ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.

ಜಿ.ಪಂ.ಯೋಜನಾ ನಿರ್ದೇಶಕರು ಡಾ.ಕೃಷ್ಣರಾಜು ಮಾತನಾಡಿ ಸಾಮಾಜಿಕ ಲೆಕ್ಕ ಪರಿಶೀಲನಾ ಶುಲ್ಕ ರೂ.20,000/- ಗಳನ್ನು ಪ್ರತಿಯೊಂದು ಗ್ರಾಮ ಪಂಚಾಯತಗಳು ಪ್ರತಿ ವರ್ಷ ನಿರ್ದೇಶನಾಲಯಕ್ಕೆ ವರ್ಗಾವಣೆ ಮಾಡುವುದು ಹಾಗೂ ಮನರೇಗಾ ಮತ್ತು 15ನೇ ಹಣಕಾಸು ಯೋಜನೆಯ ಕಡತಗಳನ್ನು ಸಾಮಾಜಿಕ ಲೆಕ್ಕ ಪರಿಶೋಧನೆಗೆ ಕಡ್ಡಾಯವಾಗಿ ಒದಗಿಸಲು ಸೂಚಿಸಿದರು. ಒಂದು ವೇಳೆ ಕಡತ ನೀಡದೆಯಿದ್ದ ಪಕ್ಷದಲ್ಲಿ ಅವ್ಯವಹಾರ ನಡೆದಿದೆ ಎಂದು ಭಾವಿಸಲಾಗುವುದು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಮುಂದುವರೆದು, ರಾಯಬಾಗ ತಾಲೂಕಿನ ನಿಡಗುಂದಿ, ಹಂದಿಗುಂದ, ಶಿರಗೂರು ರಾಮದುರ್ಗ ತಾಲೂಕಿನ ಓಬಳಾಪೂರ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮ ಪಂಚಾಯತಿಗಳು ಗ್ರಾಮ ಸಭೆ ಮಾಡಿರುವುದಿಲ್ಲ ಈ ಗ್ರಾಮ ಪಂಚಾಯತಗಳು ಗ್ರಾಮ ಸಭೆಯನ್ನು ಅತೀ ತುರ್ತಾಗಿ ಜರುಗಿಸಿ ಶೇ.100% ರಷ್ಟು ಪ್ರಗತಿ ಸಾಧಿಸಲು ತಿಳಿಸಿದರು.

ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ರೇಖಾ ಡೊಳ್ಳಿನವರ ಮಾತನಾಡಿ ಗ್ರಾಮ ಪಂಚಾಯತ ಸಿಬ್ಬಂದಿಗಳ ಅನುಮೋದನೆಗೆ ಸಂಬಂಧಿಸಿದಂತೆ ಗ್ರಾಮ ಪಂಚಾಯತಿಗಳು ನೀಡುವ ದಾಖಲಾತಿಗಳು ಹುದ್ದೆಗಳ ಹೆಸರುಗಳಲ್ಲಿ ವ್ಯತ್ಯಾಸ ಕಂಡು ಬರುತ್ತಿದ್ದು ಅವುಗಳನ್ನು ಸರಿಪಡಿಸುವುದು ಹಾಗೂ ಸರಿಯಾದ ದಾಖಲಾತಿಗಳನ್ನು ಜಿಪಂ ಒದಗಿಸಲು ಸೂಚಿಸಿದರು.

ಜಿ.ಪಂ ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಮಾತನಾಡಿ ಜಿಲ್ಲೆಯ ಆಯ್ದ ತಾಲೂಕಿನ ಸುಮಾರು 51 ಗ್ರಾಮ ಪಂಚಾಯತಗಳಿಗೆ ಶಿಕ್ಷಣ ಪೌಂಡೇಶನನಿಂದ ಗ್ರಾ.ಪಂ. ಗ್ರಂಥಾಲಯಕ್ಕೆ ಅಗತ್ಯ ಸಾಮಾಗ್ರಿಗಳಾದ ಟಿ.ವಿ, ಮೊಬೈಲ್, ಕಂಪ್ಯೂಟರ, ಲ್ಯಾಪಟಾಪ್ ಹಾಗೂ ಕ್ರೋಮ್ ಬುಕ್ ಪೂರೈಕೆ ಮಾಡಲಾಗಿದ್ದು ಅದರಲ್ಲಿ 49 ಗ್ರಾಮ ಪಂಚಾಯತಿಯ ಗ್ರಂಥಾಲಯಗಳಲ್ಲಿ ಇಂಟರನೆಟ್ ಸಂಪರ್ಕಗಳಿರುವುದಿಲ್ಲ ಹಾಗೂ 5 ಗ್ರಾಮ ಪಂಚಾಯತಿಗಳಲ್ಲಿ ವಿದ್ಯುತ ಸಂಪರ್ಕವಿರುವುದಿಲ್ಲ ಎಲ್ಲ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಇದರ ಮೇಲೆ ನಿಗಾ ವಹಿಸಿ ಎರಡು ದಿನಗಳ ಒಳಗಾಗಿ ಸಮಸ್ಯೆಯನ್ನು ಬಗೆಹರಿಸಿ ಕಾರ್ಯನಿರ್ವಾಹಕ ಅಧಿಕಾರಿಗಳ ಮೂಲಕ ವರದಿಯನ್ನು ಜಿ.ಪಂ ಗೆ ಸಲ್ಲಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಜಿ.ಪಂ ಉಪಕಾರ್ಯದರ್ಶಿ(ಆಡಳಿತ) ರೇಖಾ ಡೊಳ್ಳಿನವರ, ಉಪಕಾರ್ಯದರ್ಶಿ(ಅಭಿವೃದ್ಧಿ) ಬಸವರಾಜ ಅಡವಿಮಠ, ಯೋಜನಾನಿರ್ದೇಶಕ (ಡಿ.ಆರ್.ಡಿ.ಎ) ಡಾ:ಎಮ್. ಕೃಷ್ಣರಾಜು, ಮುಖ್ಯ ಲೆಕ್ಕಾಧಿಕಾರಿ ಪರಶುರಾಮ ದುಡಗುಂಟಿ, ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಜಿಲ್ಲೆಯ ಎಲ್ಲ ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಪಂಚಾಯ ರಾಜ್ ಮತ್ತು ಜಿಲ್ಲೆಯ ಎಲ್ಲ ತಾಲೂಕಿನ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

About Mallikarjun

Check Also

ಗೊರ್ಲೆಕೊಪ್ಪಗ್ರಾಮದಲ್ಲಿ ಮದ್ಯದಂಗಡಿ ತೆರೆಯದಂತೆ:ಮಹಿಳೆಯರ ಆಗ್ರಹ

ಕೊಪ್ಪಳ : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ಗೊರ್ಲೆ ಕೊಪ್ಪ ಗ್ರಾಮದಲ್ಲಿ ಮದ್ಯದ ಅಂಗಡಿ ಪ್ರಾರಂಭಿಸಲು ಹೊರಟಿರುವ ಮದ್ಯದ ಲೈಸೆನ್ಸ್ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.