ಕುಕನೂರು : ಕೊಪ್ಪಳ ಜಿಲ್ಲೆಯ ಕುಕನೂರು ತಾಲೂಕಿನ ವೀರಾಪೂರ ಗ್ರಾಮದ ಶ್ರೀ ಗಾಳೆಮ್ಮ ದೇವಿಯ ಹಾಗೂ ದುರ್ಗಾ ದೇವಿ ಜಾತ್ರಾ ಮಹೋತ್ಸವವು ದಿ.07.06.2024ರ ಶುಕ್ರವಾರದಿಂದ ದಿ.11.06 ಮಂಗಳವಾರದವರೆಗೆ ಜಾತ್ರಾ ಮಹೋತ್ಸವದ ಕಾರ್ಯಕ್ರಮಗಳು ಜರುಗುವವು.
ದಿ. 07 ರ ಶುಕ್ರವಾರದಂದು ಬೆಳಿಗ್ಗೆ 8 ಗಂಟೆಗೆ ಶ್ರೀ ದೇವಿಯ ಕಂಕಣ ಕಟ್ಟುವ ಕಾರ್ಯಕ್ರಮ ಜರುಗಲಿದೆ.
ದಿ. 10ರಂದು ಸೋಮವಾರ ರಾತ್ರಿ ಅಗ್ನಿ ಹಚ್ಚುವ ಕಾರ್ಯಕ್ರಮ ನಡೆಯಲಿದೆ, ರಾತ್ರಿ 11ಗಂಟೆಗೆ ಭಕ್ತರಿಂದ ಮದ್ದು ಸುಡುವ ಕಾರ್ಯಕ್ರಮ, ನಂತರ ದುರ್ಗಾದೇವಿ ಭಜನಾ ಸಂಘದವರಿಂದ ಶಿವಾನುಭವ ಗೋಷ್ಠಿ ನಡೆಯಲಿದೆ.
11ರಂದು ಮಂಗಳವಾರ ಭಕ್ತರಿಂದ ವಿಷೇಶ ಪೂಜಾ ವಿಧಿ ವಿಧಾನಗಳು ನೆರವೆರುವವು. ಅಂದು ಬೆಳಿಗ್ಗೆ 4ಗಂಟೆಗೆ ಡೊಳ್ಳು ವಾಧ್ಯದೊಂದಿಗೆ ಬಸವರಾಜ ಹೂಗಾರ ಇವರ ಮನೆಯಿಂದ ಮಾಲೆ ತರುವುದು, ನಂತರ ಹಿರೇಗೌಡ್ರ ಮನೆಯಿಂದ ವಿಧಿ ವಿಧಾನಗಳೊಂದಿಗೆ ಉಡಿ ತುಂಬುವುದು, ನಂತರ 5.30ಕ್ಕೆ ಗಂಗಾ ಪೂಜೆ, ಹಾಗೂ ಬೆಳಗ್ಗೆ 8 ಗಂಟೆಗೆ ಅಗ್ನಿ ಪ್ರವೇಶ ಜರುಗುವುದು. ನಂತರ ಶ್ರೀ ದೇವಿಗೆ ಹರಕೆ ತೀರಿಸುವುದು. ಮತ್ತು ಮಧ್ಯಾಹ್ನ 12ಗಂಟೆಗೆ ಅನ್ನ ಸಂತರ್ಪಣೆ ನಡೆಯುವುದು.
ನಂತರ ಸಾಯಂಕಾಲ 4 ಗಂಟೆಗೆ ಗಂಗಾಪೂಜೆ ನೆರವೇರಿಸಿ ಊರಿನ ಪ್ರಮುಖ ಬೀದಿಗಳಲ್ಲಿ ಡೊಳ್ಳು ವಾದ್ಯಗಳೊಂದಿಗೆ ಶ್ರೀ ದೇವಿಯ ಮೆರವಣಿಗೆ ನಡೆಯುವುದು, ನಂತರ ರಾತ್ರಿ 9ಗಂಟೆಗೆ ಅನ್ನ ಸಂತರ್ಪಣೆ ನೆರವೇರುವುದು. ರಾತ್ರಿ 10.30ಕ್ಕೆ ಗ್ರಾಮದವರಿಂದ ಕಡ್ಲಿಮಟ್ಟಿ ಸ್ಟೇಷನ್ ಮಾಸ್ತರ ಬಯಲಾಟ ಪ್ರದರ್ಶನ ನಡೆಯುವುದು ಎಂದು ಕಮಿಟಿಯವರು, ಮುಖಂಡರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವರದಿ : ಪಂಚಯ್ಯ ಹಿರೇಮಠ