
ಕುಕನೂರು : ಈಶಾನ್ಯ ಪದವೀಧರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಚಂದ್ರಶೇಖರ ಪಾಟೀಲ್ ಸತತ ಎರಡನೇ ಬಾರಿ ಭರ್ಜರಿ ಜಯ ಸಾಧಿಸಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯ ಗಗನ ನೋಟಗಾರ ಹರ್ಷ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲೆ ಕುಕನೂರು ಪಟ್ಟಣದ ವೀರಭದ್ರಪ್ಪ ವೃತ್ತದಲ್ಲಿ ವಿಜಯೋತ್ಸವ ಸಂಭ್ರಮವನ್ನು ಆಚರಿಸಿ ಸಿಹಿ ವಿತರಿಸಿ ಮಾತನಾಡಿ ಇತ್ತೀಚೆಗೆ ನಡೆದ ಲೋಕಸಭೆ ಚುನಾವಣೆಯಲ್ಲಿಯೂ ಕಲ್ಯಾಣ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದರು, ಸದ್ಯ ಪರಿಷತ್ ಚುನಾವಣೆಯಲ್ಲಿಯೂ ಜಯಭೇರಿ ಬಾರಿಸಿದೆ ಎಂದರು.
ನಂತರದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಸಿದ್ದಯ್ಯ ಕಳ್ಳಿಮಠ ಮಾತನಾಡಿದರು.
ಈ ಸಂದರ್ಭದಲ್ಲಿ ಮುಖಂಡರಾದ, ರೆಹಮಾನ್ ಸಾಬ್ ಮಕ್ಕಪ್ಪನವರ್, ಸಿರಾಜ್ ಕರಮುಡಿ, ಸಂಗಪ್ಪ ಗುತ್ತಿ, ರಫೀಸಾಬ ಹಿರ್ಯಾಳ, ಮಲಿಯಪ್ಪ ಅಣ್ಣಿಗೇರಿ , ದೇವಪ್ಪ ಸೋಬಾನದ, ಪರಶುರಾಮ್ ಸಕ್ರಣ್ಣವರ್, ರಷೀದ್ ಸಾಬ ಉಮಚಗಿ, ಯಮನೂರಪ್ಪ ಗೊರ್ಲೆಕೊಪ್ಪ, ನಿಂಗಪ್ಪ ಗೊರ್ಲೆಕೊಪ್ಪ, ಮಹಾಂತೇಶ ಜಂಗ್ಲಿ, ನೂರುದ್ದಿನಸಾಬ ಗುಡಿಹಿಂದಲ್ , ರಾಘವೇಂದ್ರ ಕಾತರಕಿ, ಬಸವರಾಜ ಮಾಸೂರ ಸೇರಿದಂತೆ ಇತರರು ಇದ್ದರು.