ಕುಕನೂರು : ಕೊಪ್ಪಳ ಲೋಕಸಭಾ ಕ್ಷೇತ್ರ ರಾಜ್ಯದ 28 ಲೋಕಸಭಾ ಕ್ಷೇತ್ರಗಳ ಪೈಕಿ ಅತ್ಯಂತ ಕುತೂಹಲ ಕ್ಷೇತ್ರವಾಗಿತ್ತು. ಕೊಪ್ಪಳ ಮುಖ್ಯಮಂತ್ರಿ ಸಿದ್ದರಾಮಯ್ಯನವರ ತವರೂರು ಎಂದೆ ಭಾವಿಸಲಾಗಿತ್ತು.
ಈ ಭಾಗದಲ್ಲಿ ಸಿದ್ದರಾಮಯ್ಯನವರ ಕುಲಬಾಂಧವರಾದ ರಾಜಶೇಖರ್ ಹಿಟ್ನಾಳ ಇವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಲಾಗಿತ್ತು. ಅವರ ಗೆಲುವಿಗಾಗಿ ಮುಖ್ಯಮಂತ್ರಿಗಳು ಸಹ ಅತ್ಯಂತ ಮುತುವರ್ಜಿ ವಹಿಸಿದ್ದರು, ಈಗ ಅವರ ಗೆಲುವು ಭರ್ಜರಿಯಾಗಿ ಗೆಲ್ಲುತ್ತಿದ್ದಂತೆ ಕುಕನೂರು ಪಟ್ಟಣದಲ್ಲಿ ಸಿದ್ದಯ್ಯ ಕಳ್ಳಿಮಠ ಇವರ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ತಮ್ಮ ನಾಯಕ ರಾಜಶೇಖರ್ ಹಿಟ್ನಾಳ ಅವರ ಗೆಲುವಿಗೆ ಸಂಭ್ರಮಿಸಿ ಪರಸ್ಪರ ಬಣ್ಣವನ್ನು ಎರಚಿಕೊಂಡು, ಅತ್ಯಂತ ಉತ್ಸವದಿಂದ, ಸಡಗರದಿಂದ ವಿಜಯೋತ್ಸವವನ್ನು ಭರ್ಜರಿಯಾಗಿ ಆಚರಿಸಿದರು.
ನಂತರ ಸಿದ್ದಯ್ಯ ಕಳ್ಳಿಮಠ ಮಾತನಾಡಿ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಮಾಜಿ ಸಚಿವ ಬಸವರಾಜ ರಾಯರೆಡ್ಡಿಯವರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಆದೇಶದಂತೆ, ಇಡೀ ಜಿಲ್ಲೆಯ ಸಮಸ್ತ ಕಾಂಗ್ರೆಸ್ ಮುಖಂಡರು ಮತ್ತು ಲೋಕಸಭೆ ವ್ಯಾಪ್ತಿಯ ಎಲ್ಲಾ ಕಾಂಗ್ರೆಸ್ ಹಿರಿಯ ನಾಯಕರು ಒಗ್ಗಟ್ಟಿನಿಂದ ಈ ಚುನಾವಣೆಯಲ್ಲಿ ಹಗಲು ರಾತ್ರಿ ಕೆಲಸ ಮಾಡಲಾಗಿದೆ ಮತ್ತು ಪ್ರತಿ ನಿಮಿಷ, ಗಳಿಗೆಯನ್ನು ವೇಸ್ಟ್ ಮಾಡದೆ, ಪ್ರತಿಯೊಬ್ಬ ಮತದಾರರ ಮನೆಗೆ ಹೋಗಿ, ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ಬಗ್ಗೆ ಮನವರಿಕೆ ಮಾಡಿ ಜನರಿಂದ ಸಹಕಾರ ಪಡೆದು ಇಂದು ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ್ ಹಿಟ್ನಾಳ್ ಗೆಲುವಿಗೆ ಮುನ್ನಡೆ ಬರೆಯಲಾಗಿದೆ ಎಂದರು.
ನಂತರದಲ್ಲಿ ಮುಖಂಡ ಗಗನ ನೋಟಗಾರ ಮಾತನಾಡಿ ಇದು ಇಡೀ ಕೊಪ್ಪಳ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಕಾರ್ಯಕರ್ತರ ಗೆಲುವಾಗಿದೆ ಎಂದು ಸಂಭ್ರಮ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ, ಸಿರಾಜ್ ಕರಮುಡಿ, ರಫೀಸಾಬ ಹಿರ್ಯಾಳ, ಮಲಿಯಪ್ಪ ಅಣ್ಣಿಗೇರಿ , ರಷೀದ್ ಸಾಬ ಹಣಜಗಿರಿ, ಯಮನೂರಪ್ಪ ಗೊರ್ಲೆಕೊಪ್ಪ, ನಿಂಗಪ್ಪ ಗೊರ್ಲೆಕೊಪ್ಪ, ಮಹಾಂತೇಶ ಜಂಗ್ಲಿ, ನೂರುದ್ದಿನಸಾಬ, ರಾಘವೇಂದ್ರ ಕಾತರಕಿ, ಬಸವರಾಜ ಮಾಸೂರ ಸೇರಿದಂತೆ ಇತರರು ಇದ್ದರು