Breaking News

ಶಿಕ್ಷಣದಿಂದ ಜೀವನ ಶಿಕ್ಷಣದಿಂದ ಜೀವನ ಬದಲಾವಣೆ ಸಾಧ್ಯ: ಡಾ. ಜಯದೇವಿ ಗಾಯಕವಾಡ ಸಾಧ್ಯ: ಡಾ. ಜಯದೇವಿ ಗಾಯಕವಾಡ

ಬಸವಕಲ್ಯಾಣ: ಬುದ್ಧನ ಶಾಂತಿ ಮತ್ತು ಅಹಿಂಸೆ, ಬಸವಣ್ಣನವರ ಸಮಾನತೆ,ಅಂಬೇಡ್ಕರ್ ಅವರ ಸ್ವಾಭಿಮಾನ ಮತ್ತು ಶಿಕ್ಷಣ ಈ ಮೂರು ಅಂಶಗಳನ್ನು ಬುದ್ಧ ಬಸವ ಅಂಬೇಡ್ಕರ್ ಅವರ ತತ್ತ್ವ ಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನಿಜ ಜೀವನದಲ್ಲಿ ಶಿಕ್ಷಣವನ್ನು ಪಡೆದಾಗ ಮಾತ್ರ ಜೀವನದಲ್ಲಿ ಬದಲಾವಣೆ ಸಾಧ್ಯ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯೆ ಡಾ.ಜಯದೇವಿ ಗಾಯಕವಾಡ ಅಭಿಪ್ರಾಯಪಟ್ಟರು. ಸರ್ವೋದಯ ಕಾಲೋನಿಯಲ್ಲಿ ಸಿದ್ದಾರ್ಥ ಯುಥ್ ಕ್ಲಬ್ ಮತ್ತು ಕರ್ನಾಟಕ ಬೌದ್ಧ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತು ಇವುಗಳ ಸಂಯುಕ್ತ ಆಶ್ರಯದಲ್ಲಿ ಬುದ್ಧ ಬಸವ ಅಂಬೇಡ್ಕರ್ ಜಯಂತಿ ಹಾಗೂ ಎಸ್. ಎಸ್. ಎಲ್. ಸಿ ಮತ್ತು ಪಿ.ಯು.ಸಿಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಸನ್ಮಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸ ನೀಡುತ್ತ ಮಾತನಾಡಿದರು. ಭಾರತ ದೇಶದಲ್ಲಿ ವರ್ಣ ವ್ಯವಸ್ಥೆಯನ್ನು ಜಾತಿ ವ್ಯವಸ್ಥೆಯನ್ನು ವರ್ಗ ವ್ಯವಸ್ಥೆಯನ್ನು ಮೀರಿ ಸಾಮಾಜಿಕ ಸುಧಾರಣೆಯನ್ನು ತಂದ ಈ ಮಹಾತ್ಮರ ಜೀವನ ಸಾಧನೆ ಅವರ ತತ್ವ ಸಿದ್ಧಾಂತಗಳು ಅನುಕರಣೀಯ ಎಂದು ನುಡಿದರು.

ನಗರ ಸಭೆ ಎಇಇ ಮನೋಜಕುಮಾರ ಕಾಂಬಳೆ,ನಾಗನಾಥ ವಾಡೇಕರ್,ಕಲ್ಯಾಣರಾವ್ ರಾಮಬಾಣ,ಸಂಜು ಲಾಡೆ ,ಯುವ ನಾಯಕ ಸುರೇಶ ಮೊರೆ ಉಪಸ್ಥಿತರಿದ್ದರು. ಮನೋಹರ ಹೊಳ್ಕರ್ ಸ್ವಾಗತಿಸಿದರು. ಈಶ್ವರ ಹೆಬ್ಬಾಳ್ಕರ ಪ್ರಾಸ್ತಾ ವಿಕ ಮಾತನಾಡಿದರು.ಸಂಜೀವಕುಮಾರ ನಡುಕರ ನಿರೂಪಿಸಿದರು.ಶ್ರೀಮತಿ ಸುರೇಖಾ ವಂದಿಸಿದರು.

About Mallikarjun

Check Also

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.