Breaking News

ಮೇ ೩೦ ಕ್ಕೆ ಪ್ರಜ್ವಲ್ ಬಂಧನಕ್ಕೆ ಒತ್ತಾಯಿಸಿ ಹಾಸನಛಲೋ:ಭಾರಧ್ವಜ್


ಗಂಗಾವತಿ: ಸಂಸದ ಪ್ರಜ್ವಲ್ ರೇವಣ್ಣ ಬಂಧನ ವಿಳಂಬ ಖಂಡಿಸಿ ಸಂತ್ರಸ್ತ ಮಹಿಳೆಯರಿಗೆ ನ್ಯಾಯ ಒದಗಿಸಲು ಒತ್ತಾಯಿಸಿ ರಾಜ್ಯದಾದ್ಯಂತ ನೂರಾರು ಸಂಘಟನೆಗಳು ಒಟ್ಟಾಗಿ ಮೇ.೩೦ ರಂದು ಹಾಸನಕ್ಕೆ ತೆರಳುತ್ತಿದ್ದು ಗಂಗಾವತಿ ತಾಲೂಕಿನಿಂದ ೧೦೦ ಕ್ಕು ಹೆಚ್ಚು ಸಿಪಿಐಎಂಎಲ್ ಕಾರ್ಯಕರ್ತರು ಹೋರಾಟಕ್ಕೆ ಹೋಗುತ್ತಿದ್ದೇವೆ ಎಂದು ಸಿಪಿಐಎಂಎಲ್ ರಾಜ್ಯ ಸ್ಥಾಯಿ ಸಮಿತಿ ಸದಸ್ಯ ಜೆ. ಭಾರಧ್ವಜ್ ಹೇಳಿದರು. ಅವರು ಮಂಗಳವಾರ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದರು.
ಮಾಜಿ ಪ್ರಧಾನಿ ದೇವೆ ಗೌಡರ ಕುಟುಂಬದ ಬಗೆಗೆ ನಮಗೆ ಅಪಾರ ಗೌರವವಿತ್ತು ಆದರೆ, ಮೊಮ್ಮಗನ ಈ ದುಷ್ಕೃತ್ಯ ಅವರ ಅಷ್ಟು ದಿನದ ರಾಜಕೀಯ ಜೀವನಕ್ಕೆ ಮಸಿ ಬಳೆದಿದೆ, ಸಿಡಿ ಪ್ರಕರಣದಲ್ಲಿ ಸಿಲುಕಿರುವ ಸಂತ್ರಸ್ತೆಯರಿಗೆ ನ್ಯಾಯ ಸಿಗಬೇಕು, ಸಿಡಿಯನ್ನು ಸಾರ್ವಜನಿಕವಾಗಿ ಹಂಚಿದವರಿಗೂ, ಈ ಕೃತ್ಯ ಸಾರ್ವಜನಿಕಗೊಳ್ಳಲು ಕಾರಣವಾದ ಡಿ.ಕೆ ಶಿವಕುಮಾರ್ ಅವರಿಗು, ಡ್ರೆöÊವರ್ ಕಾರ್ತಿಕ್ ಗೌಡ ಅವರಿಗು ಶಿಕ್ಷೆಯಾಗಬೇಕಿದ್ದು, ಎಸ್‌ಐಟಿ ಪ್ರಾಮಾಣಿಕ ತನಿಖೆ ಮಾಡುವ ಮೂಲಕ ತಪ್ಪತಸ್ಥರು ಜೈಲು ಸೇರಬೇಕು ಎಂದು ಅಕ್ರೋಶ ವ್ಯಕ್ತಪಡಿಸಿದರು.
ಕೊಪ್ಪಳ ಜಿಲ್ಲಾ ಕಾರ್ಯದರ್ಶಿ ವಿಜಯ್ ಕುಮಾರ್ ಮಾತನಾಡಿ, ದಾವಣಗೆರೆ ಚನ್ನಗೆರೆಯಲ್ಲಿ ಜರುಗಿದ ಲಾಕಪ್ ಡೆತ್ ತನಿಖೆಗೊಳ್ಳಬೇಕು ಉದ್ರಿಕ್ತರು ಜೈಲಿಗೆ ಕಲ್ಲು ಹೊಡೆದು ದ್ವಂಸ ಮಾಡಿದ ಕ್ರಮ ಅಕ್ಷಮ್ಯ, ಸಾರ್ವಜನಿಕ ಶಾಂತಿ ಭಂಗಕ್ಕೆ ಕಾರಣವಾಗುವ ಯಾವುದೇ ಶಕ್ತಿಯನ್ನು ನಾವು ಖಂಡಿಸುತ್ತೇವೆ. ಮಹಿಳೆಯರ ಮಾನ ಹರಣಕ್ಕೆ ಕಾರಣವಾದ ಪ್ರಜ್ವಲ್ ಹಾಗು ಈ ವಿಷಯ ಸಾರ್ವಜನಿಕವಾಗಿ ಬಹಿರಂಗಗೊಳ್ಳಲು ಬೆನ್ನಿಗೆ ನಿಂತು ಹಣ ನೀಡಿದ ದುಷ್ಟರನ್ನು ಎಸ್‌ಐಟಿ ಕೂಡಲೆ ಬಂಧಿಸಬೇಕೆAದು ಅಗ್ರಹಿಸಿದರು.
ರಾಜ್ಯ ಸಮಿತಿ ಸದಸ್ಯ ಸಣ್ಣ ಹನುಮಂತಪ್ಪ ಹುಲಿ ಹೈದರ್ ಮಾತನಾಡಿ, ಸಾಹಸ್ರಾರು ಸಂಖ್ಯೆಯಲ್ಲಿ ಎಡ ಪಂಥಿಯ ವಿಚಾರವಾದಿಗಳು ಹಾಸನಕ್ಕೆ ತೆರಳುತ್ತಿದ್ದು, ಮಹರಾಜಾ ಪಾರ್ಕ್ನಿಂದ ಜಿಲ್ಲಾಧಿಕಾರಿ ಕಚೇರಿ ಬಳಿಯ ಬಸ್ ನಿಲ್ದಾಣದಲ್ಲಿ ಬೃಹತ್ ಬಹಿರಂಗ ಸಭೆ ಏರ್ಪಡಲಿದ್ದು ಪೆಂಡ್ರೆöÊವ್ ರೋವಾರಿಗಳ ವಿರುದ್ಧ ಕಹಳೆ ಮೊಳಗಿಸಲಿದ್ದೇವೆ ಎಂದರು.

About Mallikarjun

Check Also

ಮದಭಾವಿ ಗ್ರಾಮದಲ್ಲಿ ಉಜ್ವಲ ಗ್ಯಾಸ್ ವಿತರಣಾ ಸಮಾರಂಭ

ಕಾಗವಾಡ ಮತಕ್ಷೇತ್ರದ ಮದಭಾವಿ ಗ್ರಾಮದ ಕಾಂಗ್ರೆಸ್ ಪಕ್ಷದ ಕಾರ್ಯಲಯದಲ್ಲಿ ಕೇಂದ್ರ ಸರಕಾರದ ಮೂರನೇ ಬಾರಿಗೆ ಪ್ರಧಾನಮಂತ್ರಿ ಆಗಿ ನರೇಂದ್ರ ಮೋದಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.