Breaking News

ಜಮೀನಿನಲ್ಲಿ ಸ್ವಂತ ಹಣದಿಂದ ಕೃಷಿ ಹೊಂಡ ನಿರ್ಮಾಣ ನಾಡಿದ ನಿವೃತ ಶಿಕ್ಷಕರಾದ ಮಾದಯ್ಯ .

ವರದಿ : ಬಂಗಾರಪ್ಪ ಸಿ .

ಹನೂರು : ತಾಲೂಕಿನ ಮಹದೇಶ್ವರ ಬೆಟ್ಟ ಗ್ರಾಮ ಪಂಚಾಯತಿಯ ಹಳೆಯೂರು ಗ್ರಾಮದಲ್ಲಿ ನಿವೃತ್ತ ಶಿಕ್ಷಕ ಮಾದಯ್ಯರವರು ನಿರ್ಮಾಣ ಮಾಡಿರುವ ಕೃಷಿ ಹೊಂಡ ಬರಗಾಲದಿಂದ ಹೊರಬಂದು ಮಳೆ ಬಂದು ಪ್ರಯೋಜನಕ್ಕೆ ಬಂದಿದೆ .
ಸರ್ಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಳ್ಳದೆ ದುರುಪಯೋಗ ಮಾಡಿಕೊಳ್ಳುವ ಈ ಕಾಲಘಟ್ಟದಲ್ಲಿ ಇಲ್ಲೊಬ್ಬ ನಿವೃತ್ತ ಶಿಕ್ಷಕರಾದ ಎಂ ಮಾದಯ್ಯರವರು ತನ್ನ ಸ್ವಂತ ಹಣದಿಂದ ಕೃಷಿ ಹೊಂಡ ನಿರ್ಮಾಣ ಮಾಡಿ ನೀರು ಶೇಖರಣೆ ಮಾಡಿ ಯಶಸ್ವಿಯಾಗಿ ಬೆರೋಬ್ಬರಿಗೆ ಮಾದರಿಯಾಗಿದ್ದಾರೆ . ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ಮಗ್ಗುಲಲ್ಲೇ ಇರುವ ಹಳೆಯೂರು ಗ್ರಾಮದವರು .
ತೀವ್ರ ಬರಗಾಲದ ಹಿನ್ನೆಲೆಯಿಂದ ಮಳೆ ಇಲ್ಲದೆ ಕಂಗಾಲಾಗಿ ಅಂತರ್ಜಲ ಕುಂಠಿತಗೊಂಡು ಕುಡಿಯುವ ನೀರಿಗಾಗಿ ಜನ ಜಾನುವಾರುಗಳಿಗೆ ಸಮಸ್ಯೆ ಉಂಟಾಗಬಾರದು ಎಂಬ ಮುಂದಾಲೋಚನೆಯಿಂದ ತಮ್ಮ ಜಮೀನಿನಲ್ಲಿ ಸ್ವಂತ ಖರ್ಚಿನಲ್ಲಿ ಕೃಷಿ ಹೊಂಡ ನಿರ್ಮಾಣ ಮಾಡಿಕೊಂಡಿದ್ದು, ಬುಧವಾರ ಬಿದ್ದ ಮಳೆಗೆ ಕೃಷಿ ಹೊಂಡ ತುಂಬಿದ ಪರಿಣಾಮ ಮಾದಯ್ಯ ಅವರು ಹರ್ಷ ವ್ಯಕ್ತ ಪಡಿಸಿದ್ದಾರೆ.
ಸ್ಥಳಕ್ಕೆ ಬೇಟಿ ನೀಡಿದ ಪತ್ರಕರ್ತರೋಂದಿಗೆ ಮಾತನಾಡಿದ ಅವರು, ಕೃಷಿ ಹೊಂಡದಿಂದ ಶೇಖರಣೆಗೊಂಡ ನೀರನ್ನು ಸ್ವಂತ ಉದ್ದೇಶಕ್ಕೆ ಬಳಕೆ ಮಾಡಿಕೊಂಡು ಉಳಿಕೆ ನೀರನ್ನು ಪಕ್ಕದ ರೈತರಿಗೆ ನೀಡವುದಾಗಿ ಹೇಳಿದರು. ಕೃಷಿ ಹೊಂಡ ನಿರ್ಮಾಣ ಮಾಡಿರುವುದರಿಂದ ಅಕ್ಕಪಕ್ಕದ ಜಾನುವಾರುಗಳು ನೀರು ಕುಡಿಯಲು ಇಲ್ಲಿಗೆ ಬರುತ್ತಿರುವುದು ಸಂತಸ ತಂದಿವೆ. ಇದರಿಂದ ನನಗೆ ಆತ್ಮ ತೃಪ್ತಿ ತಂದಿದೆ. ರೈತರು ಎಲ್ಲ ಕೆಲಸಕ್ಕೂ ಸರ್ಕಾರಿ ಅನುದಾನಗಳನ್ನೇ ಕಾಯದೆ ಅವಶ್ಯಕತೆ ಇದ್ದಲ್ಲಿ ತಮ್ಮ ಜಮೀನು, ತೋಟಗಳಲ್ಲಿ ಕೆರೆ,ಬೋರ್ ವೆಲ್ ಮತ್ತು ಕೃಷಿ ಹೊಂಡಗಳನ್ನು ತೆಗೆಸಿ ಬಳಸಿಕೊಳ್ಳಬೇಕು. ತಮ್ಮಲ್ಲಿ ನೀರು ಶೇಖರಣೆ ಹೆಚ್ಚಾದಲ್ಲಿ ಬೇರೆಯವರಿಗೆ ನೀಡುವುದು ಎಂದು ಸಲಹೆ ನೀಡೋಣವೆಂದು ತಿಳಿಸಿದರು.

About Mallikarjun

Check Also

ಸಾರಾಯಿಮುಕ್ತಗ್ರಾಮವನ್ನಾಗಿ ಮಾಡಬೇಕು – ಮೈಲಾರಪ್ಪಡಿಎಸ್ಎಸ್ಒತ್ತಾಯ.

ಕೊಪ್ಪಳ ; ಇಂದರಗಿ ಗ್ರಾಮವನ್ನು ಸಾರಾಯಿ ಮುಕ್ತ ಗ್ರಾಮವನ್ನಾಗಿ ಮಾಡಬೇಕು – ಮೈಲಾರಪ್ಪ ಡಿಎಸ್ಎಸ್. ಒತ್ತಾಯಿಸಿದರು. ಕೊಪ್ಪಳ ತಾಲೂಕಿನ ಇಂದರಗಿ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.