Breaking News

ಬಸವರಾಜು ಎಂ ಎಸ್ ಅವರಿಗೆ ಎಂಎಲ್‌ಸಿ ಸ್ಥಾನ ನೀಡಲಿ: ಈಶ್ವರ್ ಸಿರಿಗೇರಿ

ಈ ಬಾರಿ ವಿಧಾನ ಪರಿಷತ್ ಸ್ಥಾನ ಬಲಗೈ ಸಮುದಾಯದ ಬಸವರಾಜು ಎಂ.ಎಸ್. ಅವರಿಗೆ ನೀಡಲಿ: ಈಶ್ವರ್ ಸಿರಿಗೇರಿ

ಬೆಂಗಳೂರು, ಮೇ 27: ವಿಧಾನಸಭೆಯಿಂದ ಬರುವ ನಾಲ್ಕನೇ ಎಂಎಲ್ ಸಿ ಚುನಾವಣೆಗೆ ಕರ್ನಾಟಕ ಸರ್ಕಾರದ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಬಸವರಾಜು ಎಂ.ಎಸ್ ಅವರಿಗೆ ಕಾಂಗ್ರೆಸ್ ನಿಂದ ಟಿಕೆಟ್ ನೀಡಬೇಕು ಮತ್ತು ಅವರು ನಿಗಮದ ಅಧ್ಯಕ್ಷರಾಗಿದ್ದ ಸಂದರ್ಭದಲ್ಲಿ ಹಲವಾರು ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ ಪರಿಶಿಷ್ಟ ಜಾತಿಯ ಸಮುದಾಯ ಅಭಿವೃದ್ಧಿಗೆ ಕಾರಣೀಭುತಾರಾಗಿದ್ದಾರೆ. ಹಿರಿಯ ನುರಿತ ದಲಿತ ನಾಯಕರಾಗಿದ್ದು ಇವರ ಆಯ್ಕೆ ಸೂಕ್ತ ಎಂದು ಕರ್ನಾಟಕ ರಾಜ್ಯ ಛಲವಾದಿ ಪ್ರತಿಷ್ಠಾನದ ರಾಜ್ಯ ಪ್ರದಾನ ಕಾರ್ಯದರ್ಶಿ ಹಾಗೂ ಯುವ ಮುಖಂಡ ಈಶ್ವರ್ ಸಿರಿಗೇರಿ ರವರು ಆಗ್ರಹಿಸಿದ್ದಾರೆ.

ಬಸವರಾಜು ಎಂ.ಎಸ್. ಅವರು ವಿದ್ಯಾರ್ಥಿ ದಿನಗಳಿಂದಲೂ ಹೋರಾಟ ಮನೋಭಾವ ಹಾಗೂ ಸೇವಾ ಮನೋಭಾವ ಎರಡೂ ಅಂಶಗಳನ್ನು ಗುರುತಿಸಿ ಕಾಂಗ್ರೆಸ್ ಪಕ್ಷ ಹಲವು ಸಲ ಅವಕಾಶಗಳನ್ನು ನೀಡಿದೆ ಮತ್ತು ಎಲ್ಲಾ ಹಿರಿಯ ನಾಯಕರ ಒಲವು ಸಹಮತ ಇರುವ ಪ್ರಾಮಾಣಿಕ ವ್ಯಕ್ತಿ ನಿಸ್ವಾರ್ಥ ಸೇವೆ ಸಲ್ಲಿಸಲು ಕಂಕಣ ಬದ್ಧರಾಗಿದ್ದಾರೆ.

ಸೋಮವಾರ ನಡೆದ ಕರ್ನಾಟಕ ರಾಜ್ಯ ಛಲವಾದಿ ಪ್ರತಿಷ್ಠಾನದ ಸಭಾಘೋಷ್ಠಿಯಲ್ಲಿ ಸದಸ್ಯರುಗಳೊಂದಿಗೆ ಚರ್ಚಿಸಿ ಈಶ್ವರ್ ಸಿರಿಗೇರಿ ಕಾಂಗ್ರೆಸ್ ಹಿರಿಯ ನಾಯಕರಲ್ಲಿ ಈ ಮನವಿ ಮಾಡಿದ್ದಾರೆ.

ಬಸವರಾಜು ಎಂ.ಎಸ್. ಅವರು ಸದಾಕಾಲವೂ ಸಮರ್ಪಿತ ಕಾಂಗ್ರೆಸ್ ಪಕ್ಷದ ಸಕ್ರಿಯ ಕಾರ್ಯಕರ್ತರು, ಪಕ್ಷದ ಮೌಲ್ಯಗಳನ್ನು ಕ್ರಿಯಾಶೀಲವಾಗಿ ಎತ್ತಿ ಹಿಡಿದ ನಾಯಕ, ಪರಿಶಿಷ್ಟ ಜಾತಿಯ ಪ್ರತಿನಿಧಿ ಆಗಿದ್ದಾರೆ.

ವಿಧಾನ ಪರಿಷತ್ತಿನ ಸದಸ್ಯರಾಗಿ ಕಾರ್ಯ ಮಾಡಲು ಸೇವಾ ಗುಣಗಳು ಹೊಂದಿರುವ ಬಸವರಾಜು ಎಂ ಎಸ್ ಯೋಗ್ಯರಾಗಿದ್ದಾರೆ ಅವರಿಗೆ ಸೇವೆ ಸಲ್ಲಿಸಲು ಇದೊಂದು
ಅವಕಾಶ ನೀಡಬೇಕಿದೆ. ಎಂದು ಈಶ್ವರ್ ಸಿರಿಗೇರಿ ಹೇಳಿದರು.

ಇವರ ಶೈಕ್ಷಣಿಕ ಮತ್ತು ಕೌಶಲ್ಯತೆ ಎರಡರಲ್ಲೂ ದೂರದೃಷ್ಟಿವುಳ್ಳ ಬಸವರಾಜು ಎಂ.ಎಸ್. ಅವರು ರಾಜಕೀಯ ದೃಷ್ಟಿಕೋನ ನೋಡಿದರೆ ಕರ್ನಾಟಕ ಸರ್ಕಾರದ ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ (2016) ಸೇವೆ ಸಲ್ಲಿಸಿದ್ದಾರೆ.

2010ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿಯಾಗಿ, 2008ರಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸದಸ್ಯರಾಗಿ, 1996ರಲ್ಲಿ ರಾಜ್ಯ ಯುವ ಕಾಂಗ್ರೆಸ್ ನ ಕಾರ್ಯದರ್ಶಿಯಾಗಿ, 1993ರಲ್ಲಿ ಬೆಂಗಳೂರು ನಗರ ಯುವ ಕಾಂಗ್ರೆಸ್ ಕಾರ್ಯದರ್ಶಿಯಾಗಿ, 1982ರಲ್ಲಿ ಎನ್ ಎಸ್ ಯು ಐ ಕಾರ್ಯದರ್ಶಿಯಾಗಿ, ಸೇವೆ ಸಲ್ಲಿಸಿದ್ದಾರೆ.

ಶೈಕ್ಷಣಿಕ-ಆಡಳಿತಾತ್ಮಕವಾಗಿ ಈ ಹಿಂದೆಯೇ ಅಪಾರ ಅನುಭವ ಪಡೆದಿರುವ ಇವರು 2003ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ, 2000ರಲ್ಲಿ ಅಕಾಡೆಮಿಕ್ ಕೌನ್ಸಿಲ್ ಸದಸ್ಯರಾಗಿ, 2007ರಲ್ಲಿ ಕ್ರೈಸ್ಟ್ ಕಾಲೇಜು, ಬೆಂಗಳೂರು ಮತ್ತು 2007ರಲ್ಲಿ ಜ್ಯೋತಿ ನಿವಾಸ ಕಾಲೇಜಿನ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. 2007ರಲ್ಲಿ ಕರ್ನಾಟಕ ಬಿಲ್ಲುಗಾರಿಕೆ ಸಂಘದ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ. ನ್ಯಾಷನಲ್ ಕಾಲೇಜು ಬಸವನಗುಡಿ ವಿದ್ಯಾರ್ಥಿ ಸಂಘದ ಮಾಜಿ ಕಾರ್ಯದರ್ಶಿರಾಗಿ ಮತ್ತು ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಕ್ರಿಯಾ ಸಮಿತಿಯ ಮಾಜಿ ಸಂಚಾಲಕರಾಗಿ ತಮ್ಮ ವಿದ್ಯಾರ್ಥಿ ದಿನಗಳಲ್ಲಿ ಹಲವು ಹುದ್ದೆಗಳನ್ನು ಸಹ ನಿರ್ವಹಿಸಿದ್ದಾರೆ.

ಪ್ರಮುಖವಾಗಿ ಬಸವರಾಜು ಎಂ.ಎಸ್ ಅವರು ಸಮಸ್ತ ದಲಿತ ಸಮುದಾಯಗಳಿಗೆ ಹಾಗೂ ಹಿಂದುಳಿದ, ಅಲ್ಪಸಂಖ್ಯಾತ ಸಮುದಾಯಕ್ಕೆ ಅಭಿವೃದ್ಧಿಗಾಗಿ ತಮ್ಮ ಜೀವನವನ್ನೇ ಮೀಸಲಿಟ್ಟದ್ದಾರೆ.

ವಿಶೇಷವಾಗಿ ದಲಿತ ಸಮುದಾಯದ ಕೋಟಾದಲ್ಲಿ ಪರಿಶಿಷ್ಟ ಜಾತಿ (ಬಲಗೈ) ಸಮುದಾಯಕ್ಕೆ ಈ ಬಾರಿ ವಿಧಾನ ಪರಿಷತ್ ಸ್ಥಾನವನ್ನು ನೀಡಬೇಕೆಂದು ಅಖಿಲ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಡಾ.ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮತ್ತು ಶ್ರೀಮತಿ ಸೋನಿಯಾ ಗಾಂಧಿ ಅವರಿಗೆ, ರಾಷ್ಟ್ರೀಯ ಕಾಂಗ್ರೆಸ್ ಮುಖಂಡ ಶ್ರೀ ರಾಹುಲ್ ಗಾಂಧಿ, ರಾಷ್ಟ್ರೀಯ ಕಾಂಗ್ರೆಸ್ ನಾಯಕರಿಗೆ, ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರಿಗೆ, ಕೆಪಿಸಿಸಿ ರಾಜ್ಯಾಧ್ಯಕ್ಷರು ಹಾಗೂ ರಾಜ್ಯದ ಉಪಮುಖ್ಯಮಂತ್ರಿ ಶ್ರೀ ಡಿ.ಕೆ.ಶಿವಕುಮಾರ್ ಇವರುಗಳ ಬೆಂಬಲ ಸಹ ಬಸವರಾಜು ಎಂ.ಎಸ್ ಅವರಿಗೆ ಇದೆ. ಹಾಗೂ ಎಲ್ಲಾ ಕಾಂಗ್ರೆಸ್ ಪಕ್ಷದ ಮುಖಂಡರಿಗೆ, ಕಾರ್ಯಕರ್ತರಿಗೆ ಈ ಬಾರಿ ಎಂಎಲ್‌ಸಿ ಸ್ಥಾನವನ್ನು ಬಸವರಾಜು ಎಂ.ಎಸ್. ಅವರಿಗೆ ಕಾಂಗ್ರೆಸ್ ಪಕ್ಷದಿಂದ ಎಸ್ ಸಿ (ಬಲಗೈ) ಸಮುದಾಯದವರಿಗೆ ಎಂಬ ಕೂಗು ಹಿಂದಿನಿಂದಲೂ ಕೇಳಿ ಬರುತ್ತಿದ್ದು, ಇದಕ್ಕೆ ನ್ಯಾಯ ಸಿಗಲು ಬಸವರಾಜು ಎಂ.ಎಸ್. ಅವರಿಗೆ ಎಂಎಲ್‌ಸಿ ಸ್ಥಾನ ನೀಡಬೇಕೆಂದು ಕರ್ನಾಟಕ ರಾಜ್ಯ ಛಲವಾದಿ ಪ್ರತಿಷ್ಠಾನದ ರಾಜ್ಯ ಪ್ರಧಾನ ಕಾರ್ಯದರ್ಶಿ ಹಾಗೂ ಯುವ ಮುಖಂಡ ಈಶ್ವರ್ ಸಿರಿಗೇರಿ ಒತ್ತಾಯಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಛಲವಾದಿ ಪ್ರತಿಷ್ಠಾನದ ಗೌರವಾಧ್ಯಕ್ಷ ಡಾ. ಮಂಜುನಾಥ ಛಲವಾದಿ., ಡಾ.ಪ್ರವೀಣ್ ಛಲವಾದಿ, ದಲಿತ ಯುವ ಮುಖಂಡರು ಹಾಗೂ ರಾಜ್ಯ ವಿದ್ಯಾರ್ಥಿ ಯುವ ಮುಖಂಡ ಶ್ರೀಗುರುರಾಘವೇಂದ್ರ, ದಲಿತ ಮುಖಂಡರಾದ ಸಿ.ಲಿಂಗಪ್ಪ, ಅಮರೇಶ್ ಸಿ.ಎಂ, ಕರ್ನಾಟಕ ರಾಜ್ಯ ಛಲವಾದಿ ಪ್ರತಿಷ್ಠಾನದ ಸದಸ್ಯರಾದ ಡಾ.ನಾರಾಯಣ ಸ್ವಾಮಿ, ಡಾ.ಸಿ.ಆರ್. ಗೋಪಾಲ್, ಮಲ್ಲಪ್ಪ ಛಲವಾದಿ, ಡಾ. ಜಿ.ಎಂ. ವೆಂಕಟೇಶ್, ಶ್ರೀಧರ್, ಶಶಿಕುಮಾರ್, ರಾಯಚೂರು ಚನ್ನಬಸಪ್ಪ, ಮಹಾಲಿಂಗ, ಮುಷ್ಟಗಟ್ಟೆ ಶಿವಪ್ಪ, ಬೈರಾಪುರ ಹುಲುಗಪ್ಪ, ಈರಣ್ಣ ಎಲ್, ಶರಣಬಸವ, ಮಲ್ಲಿಕಾರ್ಜುನ, ರಮಣಪ್ಪ, ಅಂಬರೀಶ್ ಸಿ, ಸುಧಾಕರ್, ಖದರ್ ಲಿಂಗ, ಮೇಘನಾ, ಲಕ್ಷ್ಮಿ, ವೆನ್ನೆಲ, ಬಿ. ಲಕ್ಷ್ಮೀ, ಲವಕುಮಾರ್, ಸುಕಮುನಿ ಸಿ, ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ಆಶಾಕಾರ್ಯಕರ್ತೆಯರ  ಪ್ರಥಮ  ಸಮ್ಮೇಳನ:

 ಗಂಗಾವತಿ: ನಗರದಲ್ಲಿ  ನಗರ ಆಶಾ ಕಾರ್ಯಕರ್ತೆಯರ ಪ್ರಥಮ ಸಮ್ಮೇಳನ ಸರೋಜಮ್ಮ ಕಲ್ಯಾಣ ಮಂಟಪದಲ್ಲಿ  ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಂಘದ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.