
ವರದಿ : ಬಂಗಾರಪ್ಪ ಸಿ.
ಹನೂರು: ಪಟ್ಟಣದ ದೇವಾಲಯಕ್ಕೆ ಅಪಾರ ಸಿವಿಲ್ ನ್ಯಾಯಾಧೀಶರು ಮತ್ತು ಜೆಎಂಎಫ್‌ಸಿ ಸಂಚಾರ ನ್ಯಾಯಾಲಯದ ನ್ಯಾಯಾ ಧೀಶ ರಾದ ರಘುರವರು ಶ್ರೀ ಬೆಟ್ಟಳ್ಳಿ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು.
ಹನೂರು ತಾಲ್ಲೂಕು ಕೇಂದ್ರವಾದ ನಂತರ ಹನೂರು ಪಟ್ಟಣದಲ್ಲಿ ಕಳೆದ ಮೇ 28ರಂದು ಕೋರ್ಟ್ ಕಲಾಪಗಳು ಪ್ರಾರಂಭವಾಗಿದ್ದವು. ಕೋರ್ಟ್‌ನ ಮೊಟ್ಟ ಮೊದಲ ನ್ಯಾಯಾಧೀಶರಾದ ರಘುರವರು ಮೈಸೂರಿಗೆ ವರ್ಗಾವಣೆ ಯಾಗಿರುವ ಹಿನ್ನೆಲೆಯಲ್ಲಿ ಮಂಗಳ ವಾರ ದೇವಾಲಯಕ್ಕೆ ಭೇಟಿ ನೀಡಿ
ಪೂಜಾ ಪಾಲ್ಗೊಂಡಿದ್ದರು. ಕಾರ್ಯದಲ್ಲಿ
ಆಡಳಿತ ಮಂಡಳಿಯಿಂದ ಸನ್ಮಾನ: ಜೆಎಂಎಫ್‌ಸಿ ಸಂಚಾರ ನ್ಯಾಯಾ ಲಯದ ನ್ಯಾಯಾಧೀಶರಾದ ರಘು ರವರು ದೇವಸ್ಥಾನದ ಕಚೇರಿಗೆ ಆಗಮಿಸಿದ ಹಿನ್ನೆಲೆಯಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಕಾರ್ಯ ದರ್ಶಿಗಳಾದ ಲಿಂಗರಾಜುರವರು ಸನ್ಮಾನಿಸಿ ಗೌರವಿಸಿದರು.
ದೇವಸ್ಥಾನದ ಪ್ರಧಾನ ಅರ್ಚಕರು ಗಳಾದ ಅರುಣ್ ರಾವ್ ಸಿಂಧೆ, ಜಯಂತ್ ರಾವ್ ಸಿಂಧೆ, ಇನ್ನಿತರರು ಹಾಜರಿದ್ದರು.