ಗಂಗಾವತಿ: 19 ನಗರದ ಆನೆಗೊಂದಿ ರಸ್ತೆಯಲ್ಲಿರುವ ಸರಕಾರಿ ಮಹಿಳಾ ಹೆರಿಗೆ ಆಸ್ಪತ್ರೆಯೂ ಮುಖ್ಯರಸ್ತೆಗೆ ಹೊಂದಿಕೊಂಡಿದ್ದು ದಿನನಿತ್ಯ ನೂರಾರು ಜನರು ಈ ಆಸ್ಪತ್ರೆಗೆ ಬರುತ್ತಾರೆ ಇಲ್ಲಿ ರಸ್ತೆಯು ಬಹಳ ಇಳಿ ಜಾರಿನಿಂದ ಕೂಡಿದ್ದು, ದಿನಾಲು ನೂರಾರು ವಾಹನಗಳು ಟಿಪ್ಪರ್ ಗಳು, ಲಾರಿಗಳು, ಟ್ರ್ಯಾಕ್ಟರ್ ಗಳು, ಬಸ್ಸುಗಳು ಸಾಕಷ್ಟು ಓಡಾಡುತ್ತಿವೆ. ಜೊತೆಗೆ ಈ ರಸ್ತೆಯ ಮೂಲಕ ಸರ್ಕಾರಿ ಡಿಗ್ರಿ ಕಾಲೇಜ್, ಐಟಿಐ ಕಾಲೇಜ್, ಇಂಜಿನಿಯರಿಂಗ್ ಕಾಲೇಜ್, ನರ್ಸಿಂಗ್ ಕಾಲೇಜ್, ಕಾನೂನು ಪದವಿ ಕಾಲೇಜ್, ರಾಮುಲು ಕಾಲೇಜ್ ಹೇಗೆ ಹಲವಾರು ಕಡೆ ಓಡಾಡಲು ವಿದ್ಯಾರ್ಥಿಗಳು ಟು ವೀಲರ್ ಬೈಕ್ ಗಳ ಮೂಲಕ ಓಡಾಡುತ್ತಿದ್ದು, ಇಲ್ಲಿ ತುಂಬಾ ಟ್ರಾಫಿಕ್ ಆಗುತ್ತಿದೆ. ಜೊತೆಗೆ ತಹಸಿಲ್ ಕಚೇರಿ ಕೂಡ ಇಲ್ಲೇ ಇರುವುದರಿಂದ ಸಾರ್ವಜನಿಕರು ಜನ ನಿತ್ಯ ತಮ್ಮ ಕಾರ್ಯ ಕೆಲಸಗಳಿಗೆ ಈ ಮುಖ್ಯ ರಸ್ತೆಯಲ್ಲಿ ಓಡಾಡಬೇಕಾಗಿದೆ ಇಷ್ಟೆಲ್ಲ ವಾಹನಗಳು ಓಡಾಡುತ್ತಿದ್ದರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ಅಪಘಾತಗಳು ಸಂಭವಿಸದಂತೆ ರಸ್ತೆಗೆ ಹಂಸ್ ಗಳನ್ನು ಬಳಸಬೇಕಾಗಿದೆ ಮುಂಜಾಗ್ರತವಾಗಿ ಸಂಬಂಧಪಟ್ಟ ಅಧಿಕಾರಿಗಳು ಜಾಗೃತವಹಿಸಿ ಈ ರಸ್ತೆಗೆ ಹಂಸ್ ಗಳನ್ನು ಬಳಸಬೇಕಾಗಿದೆ ಹೆರಿಗೆಗೆ ಬರುವ ಸಾಕಷ್ಟು ಸಾರ್ವಜನಿಕರಿಗೆ ಈ ಇಳಿಜಾರು ರಸ್ತೆಯಿಂದ ತೊಂದರೆಯಾಗದಲೆಂದು ವರದಿಯನ್ನು ಬರೆಯಲಾಗಿದೆ.
ಆಸ್ಪತ್ರೆಯಿಂದ ಹೊರಗಡೆ ಬರುವಾಗ ಮುಖ್ಯ ರಸ್ತೆಯಲ್ಲಿ ಓಡಾಡುವ ಟಿಪ್ಪರಗಳು, ಲಾರಿಗಳು, ಬಸ್ಸುಗಳು, ಆಟೋಗಳು, ಟು ವೀಲರ್ ಬೈಕ್ ಗಳು ಅತಿ ವೇಗದಿಂದ ಚಲಾಯಿಸುತ್ತಿರುತ್ತಾರೆ, ಇದರಿಂದ ಇಲ್ಲಿ ಅಪಘಾತಗಳಿಗೆ ಆಹ್ವಾನ ನೀಡಿದಂತಾಗುತ್ತದೆ ಹಾಗಾಗಿ ಜನರ ಜೀವದ ಸುರಕ್ಷತೆಗಾಗಿ ಸಂಬಂಧಪಟ್ಟ ಅಧಿಕಾರಿಗಳು ರಸ್ತೆಯಲ್ಲಿ ಎರಡು ಕಡೆ ಹಮ್ಸ್ ಗಳನ್ನು ಹಾಕಬೇಕೆಂದು ಸಾರ್ವಜನಿಕರ ಅನಿಸಿಕೆಯಾಗಿದೆ.
ಹೆರಿಗೆ ಆಸ್ಪತ್ರೆಯ ಮುಂದುಗಡೆ ಇರುವ ರಸ್ತೆಯಲ್ಲಿ ಹಮ್ಸ್ ಗಳನ್ನು ಹಾಕಿ
ಜಾಹೀರಾತು