Breaking News

ಮರಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ


ಮರಳಿಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶ್ರೀ ಸ್ವಾಮಿ ವಿವೇಕಾನಂದ ಸೇವಾ ಸಂಘ, ಶ್ರೀರಾಮನಗರ, ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ಶ್ರೀ ಶರಣಬಸವೇಶ್ವರ ಯುವಕ ಸಂಘ ಮರಳಿ, ಮಾರುತಿ ಕಣ್ಣಿನ ಆಸ್ಪತ್ರೆ ಗಂಗಾವತಿ ಇವರ ಸಂಯುಕ್ತ ಆಶ್ರಯದಲ್ಲಿ ಸುಮಾರು 295 ಜನ ರೋಗಿಗಳಿಗೆ ಉಚಿತ ತಪಾಸಣೆ ಮಾಡಲಾಯಿತು. 180ಜನ ನರರೋಗ, ಹೃದಯ ರೋಗ, ಕಿಡ್ನಿಯಲ್ಲಿ ಕಲ್ಲು, ಕ್ಯಾನ್ಸರ್ ರೋಗ, ಎಲುಬು ಕೀಲುಗಳ ತೊಂದರೆಯ ರೋಗಿಗಳಿಗೆ ಸಪ್ತಗಿರಿ ಆಸ್ಪತ್ರೆ ಬೆಂಗಳೂರಿನ ನುರಿತ ವೈದ್ಯರಿಂದ ಹಾಗೂ ಸುಮಾರು 115 ಜನ ಕಣ್ಣಿನ ತೊಂದರೆಯಿದ್ದ ರೋಗಿಗಳಿಗೆ ಡಾ.ರಾಶಿ, ಮಾರುತಿ ಕಣ್ಣಿನ ಆಸ್ಪತ್ರೆ ಗಂಗಾವತಿ ಇವರಿಂದ ಉಚಿತ ಚಿಕಿತ್ಸೆ ನೀಡಲಾಯಿತು.
ಗಾರಪಾಟಿ ರಾಮಕೃಷ್ಣ, ರಮೇಶ್ ಕುಲಕರ್ಣಿ, ಶರಣಪ್ಪ ಕೋಟಿ, ಶರಣಪ್ಪ ದಿನಸಮುದ್ರ, ಪ್ರಕಾಶ್ ಕರಿಶೆಟ್ಟಿ, ವೀರೇಶ ಮ್ಯಾಗೇರಿ, ದುರ್ಗಾರಾವು, ಗಂಗಾಮತ ಸಮಾಜ ಅಧ್ಯಕ್ಷ ಎಂ ಹೊನ್ನಪ್ಪ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಉಮಲೂಟಿ ಬಸಪ್ಪ, ಮಂಜುನಾಥ ಹೊಸಕೇರಿ, ಆಯುಷ್ಮಾನ ಆರೋಗ್ಯ ಕೇಂದ್ರ ಮರಳಿಯ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

ಜಾಹೀರಾತು

About Mallikarjun

Check Also

ಒಳಮೀಸಲಾತಿಯ ಸಮರ್ಪಕ ಅನುಷ್ಠಾನಕ್ಕಾಗಿಪರಿಶಿಷ್ಟ ಜಾತಿ ಗಣತಿಯ ಜಾತಿ ಕಾಲಂ ನಲ್ಲಿ ‘ಮಾದಿಗ’ ಎಂದು ಬರೆಸಿರಿ: ಯಲ್ಲಪ್ಪ ಕಟ್ಟಿಮನಿ

For proper implementation of internal reservation, write ‘Madiga’ in the caste column of the Scheduled …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.