ಗಂಗಾವತಿ: ತಾಲೂಕಿನ ಜ್ಞಾನ ಸಂಯೋಜಕೀಯರ ಸಭೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕೊಪ್ಪಳ ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರಾದ ಪ್ರಕಾಶ ರಾವ್ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಜ್ಞಾನ ವಿಕಾಸ ಕಾರ್ಯಕ್ರಮಗಳ ಬಗ್ಗೆ, ಕೇಂದ್ರಗಳ ಗುಣಮಟ್ಟ ಕಾಪಾಡುವಲ್ಲಿ ಸಂಯೋಜಕೀಯರ ಪಾತ್ರ, ಮತ್ತು ಗುಣಮಟ್ಟ ಕಾರ್ಯಕ್ರಮಗಳನ್ನು ಮಾಡುವ ಬಗ್ಗೆ ಮಾಹಿತಿ ಮಾರ್ಗದರ್ಶನವನ್ನು ನೀಡಿದರು. ಕೊಪ್ಪಳ ಪ್ರಾದೇಶಿಕ ಕಚೇರಿಯ ಜ್ಞಾನ ವಿಕಾಸ ವಿಭಾಗದ ಯೋಜನಾಧಿಕಾರಿಗಳಾದ ಶ್ರೀಮತಿ ಸುಧಾ ಗವಾಕರ್, ಕ್ರಿಯಾಯೋಜನೆ ಅನುಷ್ಠಾನದ ಬಗ್ಗೆ, ಕೇಂದ್ರದ ದಾಖಲಾತಿಗಳ ಬಗ್ಗೆ, ಕೇಂದ್ರದ ಆಡಿಟ್, ಗ್ರಂಥಾಲಯ ಬಳಕೆಯ ಬಗ್ಗೆ, ವಾತ್ಸಲ್ಯ ಕಾರ್ಯಕ್ರಮ, ಮೆನ್ಸ್ಟ್ರಾಲ್ ಕಪ್ ಬಳಕೆಯ ಬಗ್ಗೆ, ವಿಶೇಷ ಕಾರ್ಯಕ್ರಮಗಳ ಬಗ್ಗೆ, ಸವಿವರವಾಗಿ ಮಾಹಿತಿ ಮಾರ್ಗದರ್ಶನ ನೀಡಿದರು. ತಾಲೂಕಿನ ಯೋಜನಾಧಿಕಾರಿ ಗಳಾದ ಬಾಲಕೃಷ್ಣ ಹಿರಿಂಜ, ಜ್ಞಾನ ವಿಕಾಸ ಕಾರ್ಯಕ್ರಮ ಬೆಳೆದು ಬಂದ ಬಗ್ಗೆ, ತಾಲೂಕಿನಲ್ಲಿ ಗುಣಮಟ್ಟ ಕೇಂದ್ರಗಳನ್ನು ಮಾಡುವ ಬಗ್ಗೆ, ಕಾರ್ಯಕ್ರಮದ ಅನುಷ್ಠಾನ, ಇನ್ನಿತರ ವಿಚಾರಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ ನೀಡಿದರು. ಸಭೆಯಲ್ಲಿ ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶ್ರೀಮತಿ ಶಾರದ, ತಾಲೂಕಿನ ಜ್ಞಾನ ವಿಕಾಸ ಸಂಯೋಜಕೀಯರು ಉಪಸ್ಥಿತಿ ಇದ್ದರು.
ಜ್ಞಾನ ವಿಕಾಸ ಸಂಯೋಜಕೀಯರು ಹಮ್ಮಿಕೊಂಡ ಸಭೆ ಯಶಸ್ವಿ
ಜಾಹೀರಾತು