ಗಂಗಾವತಿ: ಇಲ್ಲಿನ ಹೆಚ್ಚುವರಿ ನ್ಯಾಯಾಲಯದಲ್ಲಿ ಸತತ ಮೂರು ವರ್ಷಗಳಿಂದ ನ್ಯಾಯಾಧೀಶೆಯಾಗಿ ಸೇವೆ ಸಲ್ಲಿಸುತ್ತಿದ್ದ, ನ್ಯಾಯಾಧೀಶೆ ಗೌರಮ್ಮ ದಂಪತಿಗೆ ವಕೀಲರ ಸಂಘದಿಂದ ಬುಧವಾರ ಬೀಳ್ಕೊಡಲಾಯಿತು. ಇವರಿಗೆ ಗಂಗಾವತಿಯಿಂದ ಬೆಳಗಾವಿಗೆ ವರ್ಗಾವಣೆಯಾಗಿದ್ದು, ಇವರು ತಮ್ಮ ಸೇವಾ ಅವಧಿಯಲ್ಲಿ ತ್ವರೀತ
ಗತಿಯಲ್ಲಿ ಪ್ರಕರಣಗಳ ವಿಲೇವಾರಿಗೆ ಪ್ರಯತ್ನಿಸುವ ಮೂಲಕ ಕಕ್ಷಿದಾರರಿಗೆ, ವಕೀಲರಿಗೆ ನೆರವಾಗಿದ್ದಾರೆ ಎಂದು ಗಂಗಾವತಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಪ್ರಸಂಶ ವ್ಯಕ್ತಪಡಿಸಿದರು.
ಬೆಳಗಾವಿ ನ್ಯಾಯಾಲಯಕ್ಕೆ ವರ್ಗಾವಣೆಯಾದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಗೌರಮ್ಮ ಅವರಿಗೆ ಸಂಘದಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಮಾತನಾಡಿದರು.
ನ್ಯಾಯಾಧೀಶ ಗೌರಮ್ಮನವರು ತಮ್ಮ ಸೇವಾ ಅವಧಿಯಲ್ಲಿ ಗಂಗಾವತಿ ಮತ್ತು ಸಿವಿಲ್ ಹೆಚ್ಚುವರಿ ಜವಾಬ್ದಾರಿಯಾಗಿ ಕಳೆದ ಕಾರಟಗಿ ನ್ಯಾಯಾಲಯದಲ್ಲಿ ವರ್ಷದಿಂದ ನ್ಯಾಯಾಧೀಶೆಯಾಗಿ ಸೇವೆ ನಿರ್ವಹಿಸುವ ಮೂಲಕ ತ್ವರಿತ ಗತಿಯಲ್ಲಿ ಕಡತಗಳ ಅವಧಿಯಲ್ಲಿ ತ್ವರಿತ ವಿಲೇವಾರಿಗೆ ಯತ್ನಿಸಿದ್ದಾರೆ. ನ್ಯಾಯಾಲಯದಲ್ಲಿ ವಕೀಲರು ಮಾತ್ರವಲ್ಲ, ಕ್ಷಕಿದಾರರಿಗೆ ಸಹ ಅನುಕೂಲ ಕಲ್ಪಿಸಿಕೊಟ್ಟಿದ್ದಾರೆ. ಇದರಿಂದ ನೂರಾರು ಬಡ ಜನ ಕಕ್ಷಿದಾರರಿಗೆ ಅಮೂಲ್ಯ ಸಮಯ ಮತ್ತು ಹಣದ ಉಳಿತಾಯವಾಗಿದೆ ಎಂದು ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಮುಸಾಲಿ ಪ್ರಶಂಸೆ ವ್ಯಕ್ತಪಡಿಸಿದರು. ತಾಲ್ಲೂಕು ಕಾರ್ಯಕ್ರಮ ಉದ್ದೇಶಿಸಿ ಬುಧವಾರ ಮುಖ್ಯ ಅತಿಥಿಗಳಾಗಿ ಬೀಳ್ಕೊಡುಗೆ ಪಾಲ್ಗೊಂಡಿದ್ದ ಒಂದನೆ ಹೆಚ್ಚುವರಿ ನ್ಯಾಯಾಧೀಶ ಸದಾನಂದ ನಾಯಕ, ಹಿರಿಯ ಶ್ರೇಣಿ ನ್ಯಾಯಾಧೀಶ ರಮೇಶ ಗಾಣಿಗೇರ, ವಕೀಲರ ಸಂಘದ ಕಾರ್ಯದರ್ಶಿ ಎಚ್.ಎಂ. ಮಂಜುನಾಥ ಮಾತನಾಡಿದರು. ಸರ್ಕಾರಿ ಅಭಿಯೋಜಕಿ ನಾಗಲಕ್ಷ್ಮಿ ಇದ್ದರು.
ಈ ಸಂದರ್ಭದಲ್ಲಿ ನ್ಯಾಯಾಧೀಶೆ ಗೌರಮ್ಮ ಹಾಗೂ ಅವರ ಪತಿ ವಕೀಲ ಸಾಗರ್ ಅವರನ್ನು ಸಹ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮ ದಲ್ಲಿ ಹಿರಿಯ ವಕೀಲರಾದ ನಾಗರಾಜ್ ಜವಳಿ, ಹಾಷ್ಟು ದ್ದೀನ್, ವೈಜನಾಥ ಸ್ವಾಮಿ, ವಿ.ಎನ್. ಪಾಟೀಲ್, ಎಚ್.ಸಿ ಯಾದವ,ಎಚ್. ಬಸವನಗೌಡ, ಸೌಭಾಗ್ಯ ಎಸ್.ಎನ್. ನಾಯಕ್, ಹನುಮೇಶ ಕುಂಬಾರ್, ವಿರೂಪಾಕ್ಷಪ್ಪ ಭಾವಿಕಟ್ಟಿ, ಶರತ್ ದಂಡಿನ್, ಲಕ್ಷ್ಮಿ, ಅಕ್ಕಮಹಾದೇವಿ, ಅನಿತಾ ಜಿ. ಕವಿತಾ, ವಿಜಯಲಕ್ಷ್ಮಿ, ಮಾಲತಿ, ರೋಜಾ, ಭಾನು ಬೇಗಂ, ಮಲ್ಲಮ್ಮ, ಶರಣಮ್ಮ ನ್ಯಾಯಾಧೀಶ ಸದಾನಂದ ಇತರರಿದ್ದರು.