Breaking News

ಅಂಜಲಿ ಕೊಲೆ ಆರೋಪಿಗೆ ಕಠಿಣ ಶಿಕ್ಷೆ  ವಿಧಿಸುವಂತೆ ಗಂಗಾಮತ ಸಮಜದಿಂದ ಒತ್ತಾಯ

Gangamat Samaj insists that the accused of Anjali’s murder should be punished severely

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ.ಮೇ.15: ಹುಬ್ಬಳ್ಳಿಯ ವೀರಾಪೂರ ಓಣಿಯ ಅಂಜಲಿ ಅಂಬಿಗೇರ ಎನ್ನುವ ಯುವತಿಯನ್ನು ಕೊಲೆ ಮಾಡಿರುವ ಆರೋಪಿಯನ್ನು ಕಠಿಣ ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ತಹಶಿಲ್ದಾರರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಗಂಗಾಮತ ಸಮಾಜ (ಬೆಸ್ತ) ಸಂಘದ ವತಿಯಿಂದ ಗುರುವಾರದಂದು ಮನವಿ ಸಲ್ಲಿಸಲಾಯಿತು.

ಮನವಿ ಸಲ್ಲಿಸಿ ಮಾತನಾಡಿದ ಗಂಗಾಮತ ಸಮಾಜದ ಯುವ ಮುಖಂಡ ಶಿವಕುಮಾರ ಅರಿಕೇರಿ ಅವರು, ಹುಬ್ಬಳ್ಳಿಯ ನೇಹಾ ಹಿರೇಮಠ ಅವರ ಬರ್ಬರ ಹತ್ಯೆ ಮಾಸುವ ಮುನ್ನವೇ ಹುಬ್ಬಳ್ಳಿಯಲ್ಲಿ ಪ್ರೀತಿ ನಿರಾಕರಿಸಿದಕ್ಕೆ ಗಂಗಾಮತ ಸಮಾಜದ ಯುವತಿ ಕೊಲೆ ನಡೆದಿದೆ. ಹುಬ್ಬಳ್ಳಿ ನಗರದ ವೀರಾಪುರ ಓಣಿ ಗುಡಿಓಣಿ ನಿವಾಸಿಯಾದ ಅಂಜಲಿ ಅಂಬಿಗೇರ (20) ಎಂಬಾಕೆಯೇ ಕೊಲೆಗೀಡಾದ ಯುವತಿಯಾಗಿದ್ದಾಳೆ. ಈಕೆಗೆ ಅದೇ ಏರಿಯಾದ ಗಿರೀಶ್ ಸಾವಂತ (21) ಎಂಬ ಯುವಕ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿದ್ದಾನೆ. ಗಿರೀಶ್ ಸಾವಂತ ಎಂಬಾತ ಕಳೆದ ಹಲವಾರು ದಿನಗಳಿಂದ ಅಂಜಲಿಗೆ ಪ್ರೀತಿಸವಂತೆ ಪೀಡಿಸುತ್ತಿದ್ದ. ಆದರೆ ಅಂಜಲಿ ಪ್ರೀತಿ ನಿರಾಕರಿಸಿದಕ್ಕೆ ಬುಧವಾರ ಬೆಳಂಬೆಳ್ಳಗ್ಗೆ ಗುಡಿ ಓಣಿಯಲ್ಲಿನ ಅಂಜಲಿ ನಿವಾಸಕ್ಕೆ ನುಗ್ಗಿದ್ದಾನೆ. ಮನೆಯ ಬಾಗಿಲು ಬಡಿದು ಏಕಾಏಕಿ ಅಂಜಲಿ ಹೊಟ್ಟೆಗೆ ಚಾಕು ಇರಿದು ಕೊಲೆ ಮಾಡಿ ಪರಾರಿಯಾಗಿದ್ದಾನೆ. ಈ ಕೃತ್ಯದಿಂದ ಸಮಾಜಕ್ಕೆ ಭಾರೀ ಆಘಾತ ಆಗಿದೆ. ಅಷ್ಟೆ ಅಲ್ಲದೆ ತಂದೆ, ತಾಯಿಯನ್ನು ಕಳೆದುಕೊಂಡಿದ್ದ ಅಂಜಲಿ ಅಜ್ಜಿಯ ಮನೆಯಲ್ಲಿ ಆಶ್ರಯ ಪಡೆದುಕೊಂಡಿದ್ದಳು. ಅಂಜಲಿಗೆ ಇಬ್ಬರು ಸಹೋದರಿಯರು ಇದ್ದು, ಅಂಜಲಿಯೇ ಕುಟುಂಬ ನಿರ್ವಹಣೆ ಮಾಡುತ್ತಿದ್ದಳು. ಅವಳ ಹತ್ಯೆಯಿಂದ ಕುಟುಂಬ ಬೀದಿಗೆ ಬರಬೇಕಾದ ಪರಿಸ್ಥಿತಿ ನಿಮಾ೯ಣವಾಗಿದೆ. ಕೆಲ ದಿನಗಳ ಹಿಂದೆ ಆರೋಪಿ ಗಿರೀಶ್ ಸಾವಂತ ಅಂಜಲಿಗೆ ಕರೆ ಮಾಡಿ, ನೇಹಾ ಮಾದರಿಯಲ್ಲಿ ನಿನ್ನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ. ಈ ಕುರಿತಂತೆ ಅಂಜಲಿ ತನ್ನ ಅಜ್ಜಿಯೊಂದಿಗೆ ಪೋಲಿಸ್ ಠಾಣೆಗೆ ತೆರಳಿ ದೂರು ನೀಡಿದ್ದರು. ಆದರೆ ಪೊಲೀಸ್ ರು ಗಿರೀಶ್ ಸಾವಂತನನ್ನು ಅಂದೇ ಬಂಧಿಸಿ ಕಾನೂನು ಕ್ರಮಕೈಗೊಂಡಿದ್ದರೆ ಅಂಜಲಿ ಕೊಲೆ ತಪ್ಪಿಸಬಹುದಾಗಿತ್ತು. ಆದರೆ ಪೊಲೀಸ್ ರ ನಿರ್ಲಕ್ಷ್ಯದಿಂದಾಗಿ ಕೊಲೆ ನಡೆದಿದ್ದು, ಅಮಾಯಕ ಅಂಜಲಿಯ ಬಲಿಯಾಗಿದೆ. ಕೂಡಲೇ ಬೇಜವಾಬ್ದಾರಿ ವರ್ತನೆ ತೋರಿದ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಕಾನೂಕು ಕ್ರಮ ಕೈಗೊಳ್ಳಬೇಕು. ರಾಜ್ಯ ಗೃಹ ಇಲಾಖೆ ಹಾಗೂ ಮಾನ್ಯ ಮುಖ್ಯಮಂತ್ರಿಗಳು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಯನ್ನು ಬಂಧನ ಮಾಡಿ, ಕಠಿಣ ಶಿಕ್ಷೆಗೆ ಒಳ ಪಡಿಸಬೇಕು. ಅಲ್ಲದೆ ಹತ್ಯೆಯಾಗಿರುವ ಯುವತಿಯ ಕುಟುಂಬಕ್ಕೆ 25 ಲಕ್ಷ ರೂಪಾಯಿ ಪರಿಹಾರವನ್ನು ನೀಡಿ, ಅಗತ್ಯ ರಕ್ಷಣೆ ನೀಡಬೇಕು ಎಂದು ಒತ್ತಾಯಿಸಿದರು.

ನಂತರ ಗಂಗಾಮತ ಸಮಾಜದ ಜಿಲ್ಲಾ ಉಪಾಧ್ಯಕ್ಷ ಹಾಗೂ ನಗರಸಭೆ ಸದಸ್ಯ ಪರುಶುರಾಮ ಮಡ್ಡೇರ, ಶ್ರೀನಿವಾಸ ದೇವಿಕೇರಿ ಮಾತನಾಡಿದರು.

ಈ ಸಂಧರ್ಭದಲ್ಲಿ ಗಂಗಾಮತ ಸಮಾಜದ ಶ್ರೀನಾಥ್, ಗೋಪಾಲ್, ಸಿದ್ದಪ್ಪ, ಹರೀಶ್, ಎನ್.ಮಂಜುನಾಥ, ವೀರೇಶ, ಈ.ಧನರಾಜ್, ಚಂದ್ರಶೇಖರ ಮುಕ್ಕುಂದಿ, ದೇವರಾಜ್, ಆಕಾಶ್, ರಾಜಾಹುಸೇನ್, ರಾಘು, ಬಿ. ಬಸವರಾಜ್, ಸಿದ್ದು ಹೊಸಳ್ಳಿ, ಕುಮಾರ್ ಹೂಗಾರ್, ರಂಜಿತ್   ಸೇರಿದಂತೆ ಇನ್ನಿತರರು ಇದ್ದರು.

About Mallikarjun

Check Also

ಶ್ರೀ ಶಾರದಾಂಬೆಗೆ ಶರನ್ನವರಾತ್ರಿಯ ಸಂಭ್ರಮ.

Sharannavarathri celebrations for Shri Sharadambrama ಗಂಗಾವತಿ: ಸರ್ವ ಜನಾಂಗದ ಮಹಿಳೆಯರ ಪಾಲ್ಗೊಳ್ಳುವಿಕೆಯಿಂದಾಗಿ ಶಾರದಾ ಶರನ್ನವರಾತ್ರಿಯ ಪ್ರಥಮ ದಿನದಂದು ದಾಖಲೆಯ …

Leave a Reply

Your email address will not be published. Required fields are marked *