ವರದಿ : ಬಂಗಾರಪ್ಪ ಸಿ .
ಹನೂರು : ನಮ್ಮ ದೇಶವು ಅತಿ ಹೆಚ್ಚು ಹಳ್ಳಿಗಳಿಂದ ಹಾಗೂ ನಾನಾ ಸಂಸ್ಕೃತಿಗಳಿಂದ ಕೂಡಿದೆ ,ಪ್ರತಿಯೊಂದು ಸಮುದಾಯವು ಅವರವರ ನಂಬಿಕೆಗಳಿಗೆ ತಕ್ಕಂತೆ ಆಚರಿಸುತ್ತಾರೆ ಎಂದು ಉದ್ಯಮಿ ಪೊನ್ನಾಚಿ ರಂಗಸ್ವಾಮಿ ತಿಳಿಸಿದರು.
ಹನೂರು ತಾಲ್ಲೂಕಿನ ಕುರಟ್ಟಿ ಹೊಸೂರು ಸೇರಿದಂತೆ ಮುನಿಶೇಟ್ಟಿ ದೊಡ್ಡಿಯ ಯಲ್ಲಿಯು ಸಹ ಹಬ್ಬಗಳನ್ನು ಆಚರಿಸುತ್ತಿರುವುದು ಸಂತೋಷದ ವಿಷಯವಾಗಿದೆ ಇದರಿಂದ ಗ್ರಾಮದಿಂದ ತೆರಳಿ ಪಟ್ಟಣ ಸೇರಿದ ಎಲ್ಲಾ ಯುವಕರಿಗೆ ನಮ್ಮ ಹಳ್ಳಿಗಳಲ್ಲಿ ಗ್ರಾಮೀಣ ಸೊಗಡಿನ ಬಗ್ಗೆ ಅರಿವು ಮೂಡಿಸಲಾಗುತ್ತದೆ ಇದರಿಂದ ನಮ್ಮೇಲ್ಲರಿಗೂ ಇಂತಹ ಶುಭ ಸಮಾರಂಭಗಳಿಗೆ ಹಾಗಮಿಸುವುದೆ ಒಂದು ಸಂತೋಷದ ಸಂಗತಿ ಎಂದರು . ಇದೇ ಸಂದರ್ಭದಲ್ಲಿ ಮುನಿಶೇಟ್ಟಿದೊಡ್ಡಿಯ ಶಿವಕುಮಾರ್ ಎಂಬುವವರು ಗ್ರಾಮದ ಹಬ್ಬಕ್ಕೆ ಆಗಮಿಸಿದ ಎಲ್ಲಾ ಮುಖಂಡರಿಗೂ ತಮ್ಮ ಸ್ವಗೃಹದಲ್ಲಿ ಸನ್ಮಾನಿಸಿ ಆತ್ಮೀಯವಾಗಿ ಬೀಳ್ಕೊಟ್ಟರು . ಇದೇ ಸಮಯದಲ್ಲಿ ಕೌದಳ್ಳಿ ಗ್ರಾ ಪ ಮಾಜಿ ಅದ್ಯಕ್ಷರಾದ ಸ್ವಾಮಿ , ಸದಸ್ಯರುಗಳಾದ ಶಿವಕುಮಾರ್ , ಪ್ರವೀಣ್ , ಕರ್ನಾಟಕ ಪತ್ರಕರ್ತರ ಸಂಘ ಹನೂರು ಘಟಕದ ಅದ್ಯಕ್ಷರಾದ ಬಂಗಾರಪ್ಪ ಸಿ , ಎಲ್ಲೆಮಾಳದ ನಾಗೇಶ್ , ಶೆಟ್ಟಳ್ಳಿ ಮಂಜುನಾಥ್ ,ರಂಗಸ್ವಾಮಿ ,ಶಿವಕುಮಾರ್ ,ಶಂಭು,ಹೂಗ್ಯಂ ಮುಖಂಡರುಗಳಾದ ರಾಮಕೃಷ್ಣ ,ವೆಂಕಟರಾಜು,ಶ್ರಿರಂಗಶೆಟ್ರು , ಸದಸ್ಯರಾದ ಬಸವರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು .
ಹಳ್ಳಿಗಳಲ್ಲಿ ಹಬ್ಬಗಳ ಆಚರಣೆಯಿಂದ ಗ್ರಾಮಸ್ಥರಿಗೆ ನೆಮ್ಮದಿ ಹಾಗೂ ಸಂತೋಷದ ವಾತವರ್ಣ ನಿರ್ಮಾಣ :ಉದ್ಯಮಿ ರಂಗಸ್ವಾಮಿ ಅಭಿಮತ.
ಜಾಹೀರಾತು