Breaking News

ಗೊ ಡಿಜಿಟ್ ಜನರಲ್ ಇನ್ಷುರೆನ್ಸ್ ಲಿಮಿಟೆಡ್‌ನ ಷೇರುಗಳ ಪ್ರತಿ ಈಕ್ವಿಟಿ ಷೇರಿನ ಬೆಲೆ 258 ರೂ.ಗಳಿಂದ 272 ರೂ.ಗಳೆಂದು ನಿಗದಿ

ಮುಂಬಯಿ : ಬೆಂಗಳೂರು ಮೂಲದ ಮತ್ತು ಮುಂಚೂಣಿಯ ಡಿಜಿಟಲ್ ಸಂಪೂರ್ಣ ಶ್ರೇಣಿಯ ವಿಮಾ ಕಂಪನಿಗಳಲ್ಲಿ ಒಂದಾಗಿರುವ ಅಲ್ಲದೆ, ವಿಮಾ ಕ್ಷೇತ್ರದ ಹಿರಿಯರಾದ ಕಾಮೇಶ್ ಗೋಯೆಲ್ ಅವರು 2017ರಲ್ಲಿ ಸ್ಥಾಪಿಸಿದ ಗೊ ಡಿಜಿಟ್ ಜನರಲ್ ಇನ್ಷುರೆನ್ಸ್ ಲಿಮಿಟೆಡ್ ಈಗ ತನ್ನ ಷೇರುಗಳ ಪ್ರಥಮ ಸಾರ್ವಜನಿಕ ಕೊಡುಗೆ ನೀಡಲು ಮುಂದಾಗಿದ್ದು, ಪ್ರತಿ ಈಕ್ವಿಟಿ ಷೇರುಗಳ ಬೆಲೆ 258 ರೂ.ಗಳಿಂದ 272 ರೂ.ಗಳಂದು ನಿಗದಿ ಮಾಡಲಾಗಿದೆ. ಷೇರುಗಳ ಪ್ರಥಮ ಸಾರ್ವಜನಿಕ ಕೊಡುಗೆ(ಐಪಿಒ)ಯು ಬುಧವಾರ, ಮೇ 15, 2024ರಂದು ತೆರೆಯಲಿದ್ದು, ಶುಕ್ರವಾರ ಮೇ 17, 2024 ರಂದು ಮುಕ್ತಾಯವಾಗಲಿದೆ. ಹೂಡಿಕೆದಾರರು ಕನಿಷ್ಟ 55 ಈಕ್ವಿಟಿ ಷೇರುಗಳಿಗಾಗಿ ಹಾಗೂ ನಂತರ 55ರ ಗುಣಲಬ್ಧಗಳಲ್ಲಿ ಷೇರುಗಳಿಗಾಗಿ ಅರ್ಜಿ ಸಲ್ಲಿಸಬಹುದು.
10 ರೂ. ಮುಖಬೆಲೆಯ ಪ್ರತಿ ಈಕ್ವಿಟಿ ಷೇರುಗಳನ್ನು 1,125 ಕೋಟಿ ರೂ.ಗಳ ಮೌಲ್ಯದಲ್ಲಿ ಸಾದರಪಡಿಸಲಾಗುತ್ತಿದೆ. 54.77 ದಶಲಕ್ಷವರೆಗಿನ ಈಕ್ವಿಟಿ ಷೇರುಗಳನ್ನು ಪ್ರೊಮೊಟರ್‌ಗಳು ಮತ್ತು ಇತರೆ ಪಾಲುದಾರರಿಗೆ ನೀಡಲಾಗುವುದು.
ಗೊ ಡಿಜಿಟ್ ಆರಂಭದಿAದ ಅಂತ್ಯದವರೆಗಿನ ಡಿಜಿಟಲ್ ಸಾಮರ್ಥ್ಯ ಹೊಂದಿರುವುದಲ್ಲದೆ, ಗ್ರಾಹಕರ ವಿಮಾ ಮೌಲ್ಯ ಸರಣಿಯಲ್ಲಿ ಡಿಜಿಟಲ್-ಪ್ರಥಮ ಮಾರ್ಗವನ್ನು ಹೊಂದಿದೆ. ಡಿಸೆಂಬರ್ 31, 2023ಕ್ಕೆ ಅಂತ್ಯವಾದ ಹಾಗೂ 2023ರ ಹಣಕಾಸು ವರ್ಷದಲ್ಲಿ ಕಳೆದ 9 ತಿಂಗಳಲ್ಲಿ ಕ್ರಮವಾಗಿ ರೆಡ್‌ಸೀರ್ ವರದಿ ಪ್ರಕಾರ ಕಂಪನಿ ಶೇ.82.5ರಷ್ಟು(66.80 ಶತಕೋಟಿ ರೂ.ಗೆ ಸಮ) ಮತ್ತು ಶೇ. 82.1ರಷ್ಟು(72.43 ಶತಕೋಟಿ ರೂ.ಗೆ ಸಮ) ವ್ಯವಹಾರ ನಡೆಸಿದೆ. ಅಕೊ ಮತ್ತು ನವಿ ಸೇರಿದಂತೆ ಸಂಪೂರ್ಣ ಶ್ರೇಣಿಯ ಡಿಜಿಟಲ್ ವಿಮೆ ಸಂಸ್ಥೆಗಳಿAದ ಜಿಡಬ್ಲುö್ಯಪಿ ಭಾರತದಲ್ಲಿ ಅತ್ಯಂತ ದೊಡ್ಡ ಡಿಜಿಟಲ್ ಸಂಪೂರ್ಣ ಶ್ರೇಣಿಯ ವಿಮಾ ಸಂಸ್ಥೆಯಾಗಿದೆ. ಈ ಕಂಪನಿ ವಾಹನ ವಿಮೆ, ಆರೋಗ್ಯ ವಿಮೆ, ಪ್ರವಾಸ ವಿಮೆ, ಆಸ್ತಿ ವಿಮೆ, ಮೆರೈನ್ ಇನ್ಷುರೆನ್ಸ್, ಲಯಾಬಿಲಿಟಿ ಇನ್ಷುರೆನ್ಸ್ ಮತ್ತು ಇತರೆ ವಿಮಾ ಉತ್ಪನ್ನಗಳನ್ನು ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಸಂಸ್ಥೆ ಸಾದರಪಡಿಸುತ್ತಿದೆ. ಡಿಸೆಂಬರ್ 31, 2023ಕ್ಕೆ ಅಂತ್ಯವಾದ 9 ತಿಂಗಳುಗಳಲ್ಲಿ ಜಿಡಬ್ಲುö್ಯಪಿ ವಾಹನ ವಿಮೆಗೆ ಶೇ.61.1ರಷ್ಟು ಕೊಡುಗೆ ನೀಡಿದೆ.
ಡಿಸೆಂಬರ್ 31, 2023ರ ಹೊತ್ತಿಗೆ ಈ 2017ರಲ್ಲಿ ಆರಂಭವಾದಾಗಿನಿAದ ಕಂಪನಿ ವಿತರಿಸಿರುವ ಹಲವಾರು ಪಾಲಿಸಿಗಳಲ್ಲಿ 43.26 ದಶಲಕ್ಷ ಜನರು ಅಥವಾ ಗ್ರಾಹಕರು ವಿಮೆ ಲಾಭವನ್ನು ಪಡೆದಿರುತ್ತಾರೆ.
ರೆಡ್‌ಶೀರ್ ವರದಿಯ ಪ್ರಕಾರ ಗೋ ಡಿಜಿಟ್‌ನ ಜಿಡಬ್ಲುö್ಯಪಿ ಪ್ರತಿ ಉದ್ಯೋಗಿಗೆ ಡಿಸೆಂಬರ್ 31, 2023ಕ್ಕೆ ಅಂತ್ಯವಾದ ಕಳೆದ 9 ತಿಂಗಳ ಪೈಕಿ ಪ್ರತಿ ತಿಂಗಳಲ್ಲಿ ಮತ್ತು 2023ರ ಆರ್ಥಿಕ ವರ್ಷದಲ್ಲಿ ಭಾರತದಲ್ಲಿನ ಜೀವವಿಮಾಯೇತರ ಕಂಪನಿಗಳಿಗೆ ಪ್ರತಿ ಉದ್ಯೋಗಿಗೆ ಸರಾಸರಿ ಜಿಡಬ್ಲುö್ಯಪಿಗೆ ಹೋಲಿಸಿದಲ್ಲಿ ಅತ್ಯಂತ ಉನ್ನತ ಸ್ಥಾನ ಪಡೆದಿದೆ. ಜೊತೆಗೆ ಸಂಸ್ಥೆ ಭಾರತದಲ್ಲಿನ ಇತರೆ ಸಾಮಾನ್ಯ ವಿಮೆ ಕಂಪನಿಗಳಿಗೆ ಹೋಲಿಸಿದರೆ ಹೆಚ್ಚು ಉತ್ತಮವಾದ ಕಾರ್ಯಾಚರಣೆ, ಕಾರ್ಯಕ್ಷಮತೆಯನ್ನು ಪ್ರದರ್ಶಿಸುತ್ತಿದೆ.
ಎಲ್ಲಾ ವ್ಯವಹಾರ ಶ್ರೇಣಿಗಳಲ್ಲಿ ಗೋ ಡಿಜಿಟ್ 74 ಸಕ್ರಿಯ ಉತ್ಪನ್ನಗಳನ್ನು ಬಿಡುಗಡೆ ಮಾಡಿದೆ. ಡಿಸೆಂಬರ್ 31, 2023ಕ್ಕೆ ಅಂತ್ಯವಾದ 9 ತಿಂಗಳುಗಳು ಮತ್ತು 2023ರ ಆರ್ಥಿಕ ವರ್ಷದಲ್ಲಿ ಕ್ರಮವಾಗಿ ಸಂಸ್ಥೆ ಸುಮಾರು ಶೇ. 6.0 ಮತ್ತು ಶೇ.5.4ರಷ್ಟು ಮಾರುಕಟ್ಟೆ ಪಾಲನ್ನು ವಾಹನ ವಿಮಾ ಕ್ಷೇತ್ರದಲ್ಲಿ ಹೊಂದಿತ್ತು. ಇದು ಭಾರತದಲ್ಲಿ ಜೀವವಿಮಾಯೇತರ ಅತ್ಯಂತ ದೊಡ್ಡ ವಿಭಾಗವಾಗಿದೆ ಎಂದು ರೆಡ್‌ಸೀರ್ ವರದಿ ತಿಳಿಸಿದೆ.
ಸಂಸ್ಥೆ ಸದಾ ಬೆಳವಣಿಗೆಯ ಮಾರ್ಗದ ದಾಖಲೆ ಹೊಂದಿರುತ್ತದೆ. 2022ರ ಆರ್ಥಿಕ ವರ್ಷದಲ್ಲಿ ಜಿಡಬ್ಲುö್ಯಪಿ 5,267.63 ಕೋಟಿ ರೂ.ಗಳಿಂದ 2023ರ ಆರ್ಥಿಕ ವರ್ಷದಲ್ಲಿ 7,242.99 ಕೋಟಿ. ರೂ.ಗಳಿಗೆ ಹೆಚ್ಚಿದೆ. ಇದು ಶೇ.37.5ರಷ್ಟು ಹೆಚ್ಚಳವಾಗಿದೆ. ಇದಕ್ಕೆ ಪ್ರಾಥಮಿಕವಾಗಿ ವಾಹನ ವಿಮೆ, ಆರೋಗ್ಯ ವಿಮೆ ಮತ್ತು ವೈಯಕ್ತಿಕ ಅಪಘಾತ ವಿಮೆಗಳ ಜಿಡಿಪಿಐನಲ್ಲಿ ಹೆಚ್ಚಳ ಕಾರಣವಾಗಿದೆ. ಐಆರ್‌ಡಿಎಐ ಮಾನದಂಡವಾದ ಕನಿಷ್ಟ ಧನಾನುಕೂಲ ಅನುಪಾತ ಮಾರ್ಗದರ್ಶಿ ಅಂಶ- 1.50 ಪಟ್ಟು ಇರಬೇಕು ಎಂಬುದಕ್ಕೆ ಹೋಲಿಸಿದಲ್ಲಿ, ಈ ಸಂಸ್ಥೆಯು ಮಾರ್ಚ್ 31, 2023 ಮತ್ತು ಡಿಸೆಂಬರ್ 31, 2023ರಲ್ಲಿ ಕ್ರಮವಾಗಿ 1.78 ಪಟ್ಟು ಮತ್ತು 1.60 ಪಟ್ಟು ಧನಾನುಕೂಲ ಅನುಪಾತದ ಜೊತೆಗೆ ಸಾಕಷ್ಟು ಬಂಡವಾಳ ಸ್ಥಿತಿಯನ್ನು ಸಂಸ್ಥೆ ಉಳಿಸಿಕೊಂಡಿದೆ. 2023ರಲ್ಲಿ ನೀಡಲಾದ ಪಾಲಿಸಿಗಳ ಸಂಖ್ಯೆ 10.63 ದಶಲಕ್ಷ ಆಗಿದ್ದು, ಇದು 2022ರ ಆರ್ಥಿಕ ವರ್ಷದಲ್ಲಿ 7.76 ದಶಲಕ್ಷ ಇತ್ತು. ಡಿಸೆಂಬರ್ 31, 2023ಕ್ಕೆ ಅಂತ್ಯವಾದ 9 ತಿಂಗಳ ಅವಧಿಯಲ್ಲಿ ನೀಡಲಾದ ಪಾಲಿಸಿಗಳ ಸಂಖ್ಯೆ 8.46 ದಶಲಕ್ಷ ಆಗಿತ್ತು. 2023ರ ಆರ್ಥಿಕ ವರ್ಷದಲ್ಲಿ ಕಂಪನಿಯ ಎಯುಎಂ 9,393.87 ಕೋಟಿ ರೂ.ಗಳಾಗಿತ್ತು. ಈ ಮೊತ್ತ 2023ರ ಆರ್ಥಿಕ ವರ್ಷದಲ್ಲಿ 12,668.36 ಕೋಟಿ ರೂ.ಗಳಿಗೆ ಹೆಚ್ಚಿದ್ದು, ಇದು ಶೇ.34.9ರಷ್ಟು ಹೆಚ್ಚಾಗಿದೆ. ಷೇರು ನೀಡಿಕೆಯಿಂದ ಬಂದ ಹೆಚ್ಚುವರಿ ಬಂಡವಾಳ ಸೇರ್ಪಡೆ ಮತ್ತು ಜಿಡಬ್ಲುö್ಯಪಿ ಹೆಚ್ಚಳದಿಂದ ಪ್ರಾಥಮಿಕವಾಗಿ ಈ ಏರಿಕೆ ಕಂಡಿದೆ. ಡಿಸೆಂಬರ್ 31, 2023ಕ್ಕೆ ಅಂತ್ಯವಾದ 9 ತಿಂಗಳ ಅವಧಿಯಲ್ಲಿ ಎಯುಎಂ 14,909.01 ಕೋಟಿ ರೂ.ಗಳಾಗಿತ್ತು. 2022ರ ಆರ್ಥಿಕ ವರ್ಷದಲ್ಲಿ ಸಂಸ್ಥೆಯ ಜಿಡಿಪಿಐ 4,673.94 ಕೋಟಿ ರೂ.ಗಳಿದ್ದು, 2023ರ ಆರ್ಥಿಕ ವರ್ಷದಲ್ಲಿ ಇದು 6,160.01 ಕೋಟಿ ರೂ.ಗಳಿಗೆ ಹೆಚ್ಚಿದೆ. ಇದು ಶೇ.31.8ರಷ್ಟು ಹೆಚ್ಚಳವಾಗಿದೆ. ಡಿಸೆಂಬರ್ 31, 2023ಕ್ಕೆ ಅಂತ್ಯವಾದ 9 ತಿಂಗಳುಗಳಿಗೆ ಸಂಸ್ಥೆಯ ಜಿಡಿಪಿಐ 5,970.53 ಕೋಟಿ ರೂ.ಗಳಷ್ಟಿತ್ತು.
ಬುಕ್ ಬಿಲ್ಡಿಂಗ್ ಪ್ರಕ್ರಿಯೆ ಮೂಲಕ ಈ ಕೊಡುಗೆ ನೀಡಲಾಗುತ್ತಿದ್ದು, ಇದರಲ್ಲಿ ಶೇ.75ರಷ್ಟು ಕೊಡುಗೆಯನ್ನು ಅರ್ಹ ಸಾಂಸ್ಥಿಕ ಖರೀದಿದಾರರಿಗೆ ಹಂಚಿಕೆ ಮಾಡಲಾಗುತ್ತಿದೆ. ಸಾಂಸ್ಥಿಕಯೇತರ ಬಿಡ್ಡರ್‌ಗಳಿಗೆ ಗರಿಷ್ಟ ಶೇ.15ರಷ್ಟು ಷೇರುಗಳ ಹಂಚಿಕೆ ಇರುತ್ತದೆ. ರಿಟೇಲ್ ವೈಯಕ್ತಿಕ ಬಿಡ್ಡರ್‌ಗಳಿಗೆ ಗರಿಷ್ಟ ಶೇ.10ರಷ್ಟು ಈ ಕೊಡುಗೆ ನೀಡಲಾಗುತ್ತಿದೆ.
ಐಸಿಐಸಿಐ ಸೆಕ್ಯೂರಿಟೀಸ್ ಲಿಮಿಟೆಡ್, ಮಾರ್ಗನ್ ಸ್ಟಾö್ಯನ್ಲಿ ಇಂಡಿಯಾ ಕಂಪನಿ ಪ್ರೆöÊವೇಟ್ ಲಿಮಿಟೆಡ್, ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್, ಎಚ್‌ಡಿಎಫ್‌ಸಿ ಬ್ಯಾಂಕ್ ಲಿಮಿಟೆಡ್, ಐಐಎಫ್‌ಎಲ್ ಸೆಕ್ಯೂರಿಟೀಸ್ ಲಿಮಿಟೆಡ್ ಮತ್ತು ನುವಾಮ ವೆಲ್ತ್ ಮ್ಯಾನೇಜ್‌ಮೆಂಟ್ ಲಿಮಿಟೆಡ್ ಹಾಗೂ ಲಿಂಕ್ ಇನ್‌ಟೈಮ್ ಇಂಡಿಯಾ ಪ್ರೆöÊವೇಟ್ ಲಿಮಿಟೆಡ್ ಈ ಕೊಡುಗೆಗೆ ರಿಜಿಸ್ಟಾçರ್ ಆಗಿರುತ್ತಾರೆ. ಈಕ್ವಿಟಿ ಷೇರುಗಳನ್ನು ಬಿಎಸ್‌ಇ ಮತ್ತು ಎನ್‌ಎಸ್‌ಇಗಳಲ್ಲಿ ಪಟ್ಟಿ ಮಾಡಲಾಗುವ ಪ್ರಸ್ತಾವನೆ ಇದೆ.
ಉಲ್ಲೇಖಕ್ಕಾಗಿ ಟಿಪ್ಪಣಿಗಳು :
ಐಪಿಒ ಕೊಡುಗೆಯ ಗಾತ್ರ ಬೆಲೆ ಪಟ್ಟಿಯ ಮೇಲಿನ ಮತ್ತು ಕೆಳ ತುದಿಗಳನ್ನು ಆಧರಿಸಿರುತ್ತದೆ.
ಫ್ರೆಶ್ ಒಎಫ್‌ಎಸ್ (54,766,392 ಈಕ್ವಿಟಿ ಷೇರುಗಳು) ಒಟ್ಟಾರೆ
ಲೋಯರ್ ಬ್ಯಾಂಡ್ (@ರೂ. 258) 1,125 ಕೋಟಿ ರೂ. 1,412.97 ಕೋಟಿ ರೂ. 2,537.97 ಕೋಟಿ ರೂ.
ಅಪ್ಪರ್ ಬ್ಯಾಂಡ್ (@ರೂ. 272) 1,125 ಕೋಟಿ ರೂ. 1,489.65 ಕೋಟಿ ರೂ. 2,614.65 ಕೋಟಿ ರೂ.

About Mallikarjun

Check Also

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಪ್ರತಿಭಟನೆ

ಗಂಗಾವತಿ: ಕರ್ನಾಟಕ ಪ್ರಗತಿಪರ ಕಟ್ಟಡ ಕಾರ್ಮಿಕರ ಸಂಘಟನೆಯು ಕಾರ್ಮಿಕ ಮಂಡಳಿಯಲ್ಲಿ ನಡೆಯುತ್ತಿರುವ ಅವ್ಯವಹಾರದ ಕುರಿತು ಜೂನ್-೨೮ ರಿಂದ ಜುಲೈ-೦೩ ರವರೆಗೆ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.