
ಗಂಗಾವತಿ: ಮಂಗಳವಾರ ಶ್ರೀ ಭಗೀರಥ ಜಯಂತ್ಯೋತ್ಸವದ ಅಂಗವಾಗಿ ನಗರದ ಉಪ್ಪಾರ ಓಣಿ ಬಳಿ ಇರುವ ಶ್ರೀ ಭಗೀರಥ ವೃತ್ತದ ಶ್ರೀ ಭಗೀರಥನ ಭಾವ ಚಿತ್ರಕ್ಕೆ ಪುಷ್ಪಾರ್ಪಣೆ ಮಾಡಿ ಮಾತನಾಡಿದರು.
ಜೀವ ಕೋಟಿಯ ದಾಹ ತಣಿಸಿ ಪೂರ್ವಜರ ಮುಸದ್ಗತಿಗೆ ಕಾರಣೀಕರ್ತರಾದರು. ಅವರ ಬದುಕಿನ ಸಂಕಷ್ಟದ ಹಾದಿಯಲ್ಲಿ ಎದರಾದ ಕಷ್ಟ ಕಾರ್ಪಣ್ಯಗಳನ್ನು ಛಲ ಬಿಡದೆ ತ್ರಿವಿಕ್ರಮನಂತೆ ಜಯಿಸಿ ಎಲ್ಲರಿಗೂ ಆದರ್ಶ ಪ್ರಾಯನಾದ ಭಗೀರಥ ಪ್ರಯತ್ನ ಎನ್ನುವ ಹೆಸರು ಲೋಕರೂಢಿಯಾಗುವಂತೆ ಜನಪ್ರೀಯಗೊಂಡ ಅವರ ಬದುಕಿನ ಪ್ರತಿ ಹೆಜ್ಜೆಯು ಅನುಕರಣೀಯ ಎಂದರು.
ಮುಖಡರಾದ ವೆಂಕಟೇಶ ಅಮರಜ್ಯೋತಿ, ಯಮನೂರಪ್ಪ ಹುಲಿಗಿ, ಯಂಕಪ್ಪ ಕಟ್ಟಿಮನಿ, ಮಹೇಶ್ ಸಾಗರ್ ಇತರರು ಮಾತನಾಡಿದರು. ಈ ಸಂದರ್ಭದಲ್ಲಿ ಪ್ರಮುಖರಾದ ಯಲ್ಲಪ್ಪ ಕಟ್ಟಿಮನಿ, ನಾಗರಾಜ್ ಇಂಗಳಗಿ, ಸತ್ಯನಾರಾಯಣ ವಿರುಪಾಪುರ, ಪ್ರಭು ವಕೀಲರು, ಮುಕ್ಕಣ್ಣ ಮಾನಳ್ಳಿ, ಶರಣಪ್ಪ ಕಟ್ಟಿಮನಿ, ವೆಂಕಟೇಶ್ ಉಪ್ಪಾರ್, ಮಂಜುನಾಥ್ ಕಟ್ಟಿಮನಿ, ಕೆ.ಪಕೀರಪ್ಪ, ಕೊಂಡಿಕಾರ ಯಂಕೋಬ, ಚಿಲಕಟ್ ಯಂಕೋಬ, ಸಂತೋಷ್ ಹುಲಿಗಿ, ಗೋವಿಂದ ಚಿಲಕಟ್ ಇತರರಿದ್ದರು.
Kalyanasiri Kannada News Live 24×7 | News Karnataka
