ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲ 4ನೇ ವಾರ್ಡಿನ ಕಲ್ಲಗುಡ್ಡೆ ಪರಿಸರದ 90 ಮನೆಗಳಿಗೆ ಒಂದು ತಿಂಗಳುಗಳಿಂದ ಮೂಲ ಸೌಕರ್ಯಗಳಲ್ಲಿ ಒಂದಾದ ನೀರಿನ ಸಮಸ್ಯೆ ಎದುರಿಸುತ್ತಿದ್ದರು. ಈ ಸಮಸ್ಯೆಯನ್ನು ಮನಗಂಡ ಸ್ಥಳೀಯ ಪಂಚಾಯತ್ ಸದಸ್ಯರು ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷರು ಆದ ಶ್ರೀ ಪ್ರಸಾದ್ ರೈ ಮೇನಾಲರವರ ಮುತುವರ್ಜಿಯಿಂದ ಹಾಗೂ ಗ್ರಾಮ ಪಂಚಾಯತ್ ಅಜ್ಜಾವರ ಆಡಳಿತ ಮತ್ತು ಸುಳ್ಯ ತಾಲೂಕು ಕಾರ್ಯನಿರ್ವಾಹಕ ಅಭಿಯಾಂತರರು ನೀರು ಸರಬರಾಜು ನೈರ್ಮಲ್ಯ ಇಲಾಖೆಯ ಸಹಾಯದಿಂದ ಕೊಳವೆ ಬಾವಿ ಕೊರೆಸಲಾಯಿತು. ಅತೀ ಹೆಚ್ಚಿನ ಪ್ರಮಾಣದಲ್ಲಿ ನೀರು ಸಿಕ್ಕಿದ್ದು 90ಮನೆಯವರು ಕೂಡ ಸಂತೋಷ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸ್ಥಳೀಯ ಮೇನಾಲದ ಯುವ ನಾಯಕ ದಕ್ಷಿಣಕನ್ನಡ ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಸದಸ್ಯರಾದ ರಂಜೀತ್ ರೈ ಮೇನಾಲರವರು ಸೇರಿದ ಎಲ್ಲಾರಿಗೂ ಸಿಹಿ ತಿಂಡಿ ವಿತರಣೆ ಮಾಡಿದರು. ಕಲ್ಲಗುಡ್ಡೆ ನಿವಾಸಿಗಳು ಬೋರ್ ವೆಲ್ ವಾಹನ ಬರುವ ಸಂದರ್ಭದಲ್ಲಿ. ರಾತ್ರಿಯಿಂದ ಬೆಳಿಗ್ಗೆ ವರೆಗೆ ಶ್ರಮದಾನದ ಮೂಲಕ ಸಹಕರಿಸಿದರು. ಈ ಸಂದರ್ಭದಲ್ಲಿ ಕೃಷ್ಣಪ್ಪ ಕೆ,ಮೋಹನ, ಸುಕುಮಾರ್,ನಾರಾಯಣ,ಪ್ರಭಾಕರ,ಜನಾರ್ದನ,ಭಾಸ್ಕರ್,ಕೃಷ್ಣಪ್ಪ ಪಿ.ಸಿ,ಶಿವರಾಮ,ಜಯರಾಮ,ಕರುಣಾಕರ,ಸನತ್,ಶರತ್,ಉದಯಕುಮಾರ್,ಮುಝಮ್ಮಿಲ್ ಬಾಡೇಲು,ಮನೋಜ್,ಶ್ರೀಧರ,ಉದಯ,ಗುರುವಪ್ಪ ಕಾಟಿಪಳ್ಳ, ಸಹಕಾರ ನೀಡಿದರು. ಯತೀಶ್ ಮೇನಾಲ,ಮೇನಾಲ ಶಾಲೆ ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಸೌಕತ್ ಆಲಿ ಮೇನಾಲ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಧರ್ ಮಣಿಯಾಣಿ ಮೇನಾಲ.ಗ್ರಾಮ ಪಂಚಾಯತ್ ಅಜ್ಜಾವರ ಅಭಿವೃದ್ಧಿ ಅಧಿಕಾರಿ ಶ್ರೀಮತಿ ಜಯಮಾಲ,ಪಂಚಾಯತ್ ಸಿಬ್ಬಂದಿ ಲೋಕೇಶ್ ಪಲ್ಲತ್ತಡ್ಕ, ಇಬ್ರಾಹಿಂ ಬೇಲ್ಯ, ಚಂದ್ರಶೇಖರ ಕೆ.ಪಲ್ಲತ್ತಡ್ಕ ಉಪಸ್ಥಿತರಿದ್ದರು
ಪಂಚಾಯತ್ ಸದಸ್ಯ ಶ್ರೀ ಪ್ರಸಾದ್ ರೈ ಮುತುವರ್ಜಿಯಿಂದ 90 ಮನೆಗಳಿಗೆ ಕುಡಿಯುವ ನೀರು, ಸಾರ್ವಜನಿಕ ರಿಂದ ಮೆಚ್ಚುಗೆ
ಜಾಹೀರಾತು