Breaking News

ಶ್ರೀನಾಥ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ

CM Siddaramaiah visits Srinath residence

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ಗಂಗಾವತಿಯ ಶ್ರೀಚನ್ನಬಸವಸ್ವಾಮಿ ಕ್ರೀಡಾಂಗಣದಲ್ಲಿ ಜರುಗಿದ ಕಾಂಗ್ರೆಸ್ ಲೋಕಸಭಾ ಚುನಾವಣಾ ಬಹಿರಂಗ ಸಭೆಯ ಬಳಿಕ ಸಿಎಂ ಸಿದ್ದರಾಮಯ್ಯ ವಿಧಾನ ಪರಿಷತ್ ಮಾಜಿ ಸದಸ್ಯ ಹಾಗು ಕರ್ನಾಟಕ ಪ್ರದೇಶ ಕಾಂಗ್ರೆಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹೆಚ್.ಆರ್. ಶ್ರೀನಾಥ್ ನಿವಾಸಕ್ಕೆ ಭೇಟಿ ನೀಡಿದರು. ಮಾಜಿ ಸಂಸದ ಹೆಚ್.ಜಿ.ರಾಮುಲು ಅವರು ಶ್ರೀ ಆಂಜನೇಯ್ಯ ದೇವಸ್ಥಾನ ಪ್ರತಿಷ್ಠಾಪನೆ ನಿಮಿತ್ಯ ಬೂದೇಶ್ವರಿ ದೇವಸ್ಥಾನಕ್ಕೆ ತೆರಳಿದ ಹಿನ್ನಲೆಯಲ್ಲಿ ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಿದ ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ರಾಜಶೇಖರ್ ಹಿಟ್ನಾಳ್ ಅವರಿಗೆ ಸಹಕಾರ ನೀಡಬೇಕೆಂದು ಕೋರಿದರು. ಬಳಿಕ ಶ್ರೀನಾಥ್ ಅವರಿಗೆ ಭಿನ್ನಾಭಿಪ್ರಾಯ ಮರೆತು ಎಲ್ಲರು ಒಗ್ಗಟ್ಟಿನಿಂದ ಪಕ್ಷಕ್ಕೆ ದುಡಿಯಬೇಕೆಂದು ಸೂಚನೆ ನೀಡಿದರು. ಇದಕ್ಕೆ ಮಾಜಿ ಎಂಎಲ್‌ಸಿ ಹೆಚ್.ಆರ್.ಶ್ರೀನಾಥ್ ಸಮ್ಮತಿ ಸೂಚಿಸಿದರು.
ಈ ಸಂದರ್ಭದಲ್ಲಿ ಸಚಿವರಾದ ಬೈರತಿ ಬಸವರಾಜ್, ಶಿವರಾಜ್ ತಂಗಡಗಿ, ಶಾಸಕರಾದ ರಾಘವೇಂದ್ರ ಹಿಟ್ನಾಳ್, ಮಾಜಿ ಸಚಿವರಾದ ಮಲ್ಲಿಕಾರ್ಜುನ ನಾಗಪ್ಪ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಾಮೀದ್ ಮನಿಯಾರ್, ಹಿರಿಯ ಮುಖಂಡರಾದ ರಾಜಶೇಖರ್ ಮುಷ್ಟೂರ್, ಮಹೇಶ್ ಸಾಗರ್, ಬಾಗಣ್ಣ, ಕೃಷ್ಣಪ್ಪ ನಾಯಕ, ದೊಡ್ಡ ಬೋಜಪ್ಪ, ಮುಖಂಡರಾದ ಸೋಮನಾಥ್ ಭಂಡಾರಿ, ಅಯ್ಯುಬ್ ಖಾನ್, ಹನೀಫ್, ಆಸೀಫ್, ದೇವರಮನಿ ಮಲ್ಲೇಶ್, ಶಬ್ಬೀರ್, ಶೋಯೆಬ್ ಇರರಿದ್ದರು.

About Mallikarjun

Check Also

ಜಿಲ್ಲಾ ಕಾಂಗ್ರೆಸ್‌ಗೆ ಕಾರ್ಯದರ್ಶಿಯಾಗಿ ವಿಶಾಲಾಕ್ಷಿ ನೇಮಕ

Vishalakshi appointed as secretary of District Congress ಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದ ವಿಶಾಲಾಕ್ಷಿ ವಿರೇಶ ತಾವರಗೇರಿ ಅವರನ್ನು …

Leave a Reply

Your email address will not be published. Required fields are marked *