
ಗಂಗಾವತಿ ಕ್ಷೇತ್ರದ ಕಾಂಗ್ರೆಸ್ ಪಕ್ಷದ ವತಿಯಿಂದ ನಗರದ ಗಾಂಧಿ ವೃತ್ತದಲ್ಲಿ ಇತ್ತೀಚೆಗೆ ಹುಬ್ಬಳ್ಳಿ-ಧಾರವಾಡ ಮಹಾನಗರಪಾಲಿಕೆಯ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠರ ಪುತ್ರಿ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ಸಹೋದರಿ ನೇಹಾ ಹಿರೇಮಠ್ ಕೊಲೆಯನ್ನು ಖಂಡಿಸಲಾಯಿತು, ಹಂತಕ ಫಯಾಜ್ ನನ್ನು ಗಲ್ಲಿಗೇರಿಸಬೇಕೆಂದು ಸರ್ಕಾರಕ್ಕೆ ಮನವಿ ಮಾಡಲಾಯಿತು,ಮೃತ ನೇಹಾ ಹಿರೇಮಠಳ
ಆತ್ಮಕ್ಕೆ ಶಾಂತಿ ಕೋರಿ, ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮೇಣದಬತ್ತಿ ಹಚ್ಚುವ ಮೂಲಕ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯರಾದ ಮಹಾಸ್ವಾಮಿ ಹಿರೇಮಠ, ಜಿಲ್ಲಾ ಪಂಚಾಯತಿ ಮಾಜಿ ಸದಸ್ಯರಾದ ಅಮರೇಶ್ ಗೋನಾಳ್, ನಗರಸಭಾ ಸದಸ್ಯರಾದ ಕಾಸಿಂಸಾಬ್ ಗದ್ವಾಲ್, ಗ್ರಾಮೀಣ ಬ್ಲಾಕ್ ಕಾಂಗ್ರೆಸ್
ಉಪಾಧ್ಯಕ್ಷರಾದ ವಿಶ್ವನಾಥ್ ಮಾಲಿಪಾಟೀಲ್, ಕಾಂಗ್ರೆಸ್ ಪಕ್ಷದ ನಾಯಕರಾದ ಜುಬೇರ್, ನೀಲಕಂಠಪ್ಪ ಹೊಸಳ್ಳಿ, ಸನ್ನಿಕ್, ಆನಂದ್ ಅಸಲ್ಕರ್, ರಫೀಕ್ ಸಂಪಂಗಿ, ಕೆ.ವಿ.ಬಾಬು , ಪದ್ಮಾವತಿ, ನಬಿ ಸಾಬ್, ರವಿ ಸಿಂಗ್, ಮಂಜುನಾಥ್ ದೇವರ ಮನಿ, ಹುಸೇನ್ ಪೀರ, ಭೀಮೇಶ್, ಮಹಮ್ಮದ್ ಅಲಿ, ರಾಚಪ್ಪ ಗುಂಜಳ್ಳಿ,ಮಾರೇಶ್, ಹೊನ್ನೂರ, ಅಭಿ ಗಾಂಧಿನಗರ, ಸುರೇಶ್ ಮತ್ತು ಪ್ರಜ್ವಲ್ ಇನ್ನಿತರರು ಭಾಗವಹಿಸಿದ್ದರು. ಘಟನೆಯನ್ನು ಕುರಿತು ಮಾತನಾಡಿದರು.