ಗಂಗಾವತಿ, ನಗರದ ಹಿರೇ ಜಂತಕಲ್ ಹಾಗೂ ವಿರುಪಾಪುರ ಆರ್ಯವೈಶ್ಯ ಸಮಾಜದ ನೇತೃತ್ವದಲ್ಲಿ ನ ಶ್ರೀ ಕನ್ನಿಕಾ ಪರಮೇಶ್ವರಿ ದೇವಸ್ಥಾನದ 19ನೆಯ ವಾರ್ಷಿಕೋತ್ಸವ ಹಾಗೂ ಶಂಕರ ಜಯಂತಿ ಆಚರಣೆಯನ್ನು ಮೇ 12ರಂದು ಆಯೋಜಿಸಲಾಗಿದ್ದು ಈ ಬಾರಿ ವಾರ್ಷಿಕೋತ್ಸವದ ಆಚರಣೆಯ ಅಂಗವಾಗಿ ಆರ್ಯವೈಶ್ಯ ಸಮಾಜದ ಬಾಂಧವರಿಗಾಗಿ ಉಪನಯದ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ದೇವಸ್ಥಾನ ಸಮಿತಿಯ ಅಧ್ಯಕ್ಷ ಹಾಗೂ ಸಮಾಜದ ಅಧ್ಯಕ್ಷ ನಾಗರಾಜ್ ದರೋಜಿ ಶೆಟ್ಟಿ ಹೇಳಿದರು ಅವರು ಶನಿವಾರದಂದು ದೇವಸ್ಥಾನದ ಆವರಣದಲ್ಲಿ ಸಮಾಜ ಬಾಂಧವರ ಪೂರ್ವಭಾವಿ ಸಭೆಯನ್ನು ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು ಆರ್ಯವೈಶ್ಯ ಸಮಾಜದ ವಾಸವಿ ಮಹಿಳಾ ಮಂಡಳಿ ವಾಸವಿ ಯುವಕ ಸಂಘ ಇವರ ಸಂಪೂರ್ಣ ದ ಸಹಕಾರದ ಮೇಲೆ ಕಳೆದ 18 ವರ್ಷದಿಂದ ದೇವಸ್ಥಾನ ಪ್ರತಿಷ್ಠಾಪನೆ ಹಾಗೂ ಶಂಕರ ಜಯಂತಿ ಆಚರಿಸುತ್ತಾ ಬರಲಾಗಿದ್ದು ಈ ಹಿನ್ನೆಲೆಯಲ್ಲಿ ಪ್ರಥಮ ಬಾರಿಗೆ ಆರ್ಯವೈಶ್ಯ ಸಮಾಜ ಬಾಂಧವರಿಗಾಗಿ ಉಚಿತ ಉಪನಯನ ಕಾರ್ಯಕ್ರಮ ಜೊತೆಗೆ ಸಮಾಜದ ಸಾಧಕ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದ್ದು ಇದರ ಸದುಪಯೋಗವನ್ನು ಸಮಾಜ ಬಾಂಧವರು ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು ಜೊತೆಗೆ ಮೇ 18ರಂದು ಶ್ರೀ ವಾಸವಿ ಅಮ್ಮನವರ ಜಯಂತೋತ್ಸವ ಜರಗಳಿದ್ದು ಗಂಗೆ ಪೂಜೆ ಅಮ್ಮನವರ ಉತ್ಸವ ಮೂರ್ತಿಯ ಭವ್ಯ ಮೆರವಣಿಗೆ ಸಕಲ ವಾದ್ಯ ವೈಭವದೊಂದಿಗೆ ಜರುಗಲಿ ಬಳಿಕ ದೇವಸ್ಥಾನದಲ್ಲಿ ಅಮ್ಮನವರಿಗೆ ಅಭಿಷೇಕ ಕುಂಕುಮಾರ್ಚನೆ ಲಲಿತ ಸಹಸ್ರ ಪಾರಾಯಣ ಅಷ್ಟೋತ್ತರ ಪಾರಾಯಣ ಮತ್ತಿತರ ಪೂಜಾ ಕಾರ್ಯಕ್ರಮಗಳನ್ನು ನಡೆಸಲಾಗುವುದೆಂದು ತಿಳಿಸಿದರು ಈ ಸಂದರ್ಭದಲ್ಲಿ ಸುರೇಶ್ ಶೆಟ್ಟಿ, ಸಮಾರಂಭ ಕುರಿತು ಮಾಹಿತಿ ನೀಡಿ ಉಪನಯಕ್ಕೆ ಸಂಬಂಧಿಸಿದಂತೆ ಆಸಕ್ತ ಸಮಾಜ ಬಾಂಧವರು ಮುಂಚಿತವಾಗಿ ತಮ್ಮ ಹೆಸರುಗಳನ್ನು ನೋಂದಾಯಿಸಿಕೊಳ್ಳಬೇಕೆಂದು ಹೇಳಿದರು ಈ ಸಂದರ್ಭದಲ್ಲಿ ಸಮಾಜದ ಹಿರಿಯ ಮುಖಂಡರು ಯುವಕರು ಉಪಸ್ಥಿತರಿದ್ದರು
ಮೇ 12ರಂದು ಶ್ರೀ ಕನ್ನಿಕಾಪರಮೇಶ್ವರಿ ದೇವಸ್ಥಾನದವಾರ್ಷಿಕೋತ್ಸವ ಹಾಗೂ ಶಂಕರ ಜಯಂತಿ.
ಜಾಹೀರಾತು