ಹವಾಮಾನದ ವೈಪರಿಚಯದಿಂದಾಗಿ ನಾಗಮಂಗಲದ ಐತಿಹಾಸಿಕ ಮಹತ್ವವುಳ್ಳಂತಹ ಹಂಪಿ ಅರಸನ ಕೊಳದಲ್ಲಿ ಸಹಸ್ರಾರು ಸಂಖ್ಯೆಯ ಮೀನುಗಳು ಸತ್ತಿರುವುದು ಕಾಣ ಬರುತ್ತಿದೆ ಕಳೆದ ನಾಲ್ಕು ದಿನಗಳಿಂದ ಕೊಳದಲ್ಲಿ ಬೆಳೆದಿದ್ದಂತಹ ಮೀನುಗಳೆಲ್ಲವೂ ದಿನವೂ ಸಾವಿರಾರು ಸಂಖ್ಯೆಯಲ್ಲಿ ಸಾಯುತ್ತಿದ್ದು , ಈ ಐತಿಹಾಸಿಕ ಮಹತ್ವವಾದ ಹಂಪೆಯ ಅರಸನ ಕೊಳ ದುರ್ವಾಸನೆಯಿಂದ ಕೂಡಿದೆ. ಇದಕ್ಕೆ ಪ್ರಕೃತಿಯಲ್ಲಿ ಆದಂತಹ ಹವಾಮಾನದ ವೈಪರಿತ್ಯ ಕಾರಣವೆಂದು ಎಲ್ಲರೂ ಭಾವಿಸಿದ್ದಾರೆ . ಕಳೆದ 15 20 ದಿನಗಳ ಹಿಂದೆ ಈ ಕೊಳದ ಪಕ್ಕದಲ್ಲಿ ಇರುವಂತಹ ಹಿರಿಕೆರೆಯಲ್ಲಿ ಇದೇ ರೀತಿ ಮೀನುಗಳು ಸತ್ತು ತೇಲುತ್ತಿದ್ದವು ,ಹಾಗೆಯೇ ಮಂಡ್ಯ ರಸ್ತೆಯಲ್ಲಿರುವ ಅಮ್ಮನ ಕಟ್ಟೆಯಲ್ಲೂ ಸಹ ಮೀನುಗಳು ಸತ್ತು ತೇಲುತ್ತಿದ್ದವು,
ಆದರೆ ಕೊಳದಲ್ಲಿ ಮಾತ್ರ ಅತಿ ಹೆಚ್ಚಿನ ಪ್ರಮಾಣದಲ್ಲಿ ಮೀನುಗಳು ಸಾಯುತ್ತಿದ್ದು ಕೆಟ್ಟ ವಾಸನೆ ಸುತ್ತಲೂ ಹರಡುತ್ತಿದೆ . ಇದಕ್ಕೆ ಸಂಬಂಧಿಸಿದಂತೆ ಸತ್ತ ಮೀನುಗಳನ್ನೆಲ್ಲ ಆಚೆಗೆ ಎಸೆಯುತಿದ್ದರೂ ಸಹ ಮತ್ತೆ ಮತ್ತೆ ಸಾಯುತ್ತಿರುವ ಮೀನುಗಳ ಸಂಖ್ಯೆ ಹೆಚ್ಚಾಗುತ್ತಿದೆ . ಇದಕ್ಕೆ ಸಂಬಂಧಿಸಿದಂತೆ ನಾಗಮಂಗಲ ಪುರಸಭೆ ಹಾಗೂ ಮೀನುಗಾರಿಕೆ ಇಲಾಖೆಯವರು ಗಮನಹರಿಸಿ ನೀರಿನಲ್ಲಿ ಆಗಿರುವಂತಹ ಬಿಸಿಲ ತಾಪದ ವ್ಯತ್ಯಯವನ್ನು ಸರಿಪಡಿಸಲು ಕ್ರಮ ಕೈಗೊಳ್ಳುವಂತೆ ನಾಗರಿಕರು ಕೋರಿದ್ದಾರೆ . ಐತಿಹಾಸಿಕ ಮಹತ್ವವುಳ್ಳಂತಹ ಈ ಹಂಪಿ ಅರಸನ ಕೊಳದಲ್ಲಿ ಇದೇ ಮೊದಲ ಬಾರಿಗೆ ಈ ರೀತಿ ಮೀನುಗಳು ಸಾಯುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಗಮನ ಹರಿಸುವಂತೆ ಹಾಗೂ ಇದರ ಕೆಟ್ಟ ವಾಸನೆಯಿಂದ ಜನಸಾಮಾನ್ಯರಿಗೆ ಆಗಬಹುದಾದ ರೋಗರುಜನೆಗಳನ್ನ ತಡೆಯಲು ಕ್ರಮಯವಹಿಸುವಂತೆ ನಾಗರಿಕರು ಕೋರಿರುತ್ತಾರೆ. ಏಕೆಂದರೆ ಈ ಕೊಳವು ಹಬ್ಬ ಹರಿದಿನಗಳು ದೇವಸ್ಥಾನದ ಪೂಜೆ ಕಾರ್ಯಗಳಿಗೆ ಪವಿತ್ರ ಗಂಗೆಯಾಗಿ ಕೊಂಡೊಯ್ಯುತ್ತಿದ್ದು ಇದರ ಬಳಕೆಗೆ ಜನರಿಗೆ ತೊಂದರೆಯಾಗುತ್ತದೆ. ಮದುವೆ ಕಾರ್ಯಗಳಲ್ಲಿ ಇಲ್ಲಿನ ನೀರನ್ನು ಎಲ್ಲರೂ ಅತಿ ಹೆಚ್ಚಾಗಿ ಬೆಳೆಸುತ್ತಿದ್ದರು.