ಗಂಗಾವತಿ: “೪.೫ ಲಕ್ಷ ನಿರ್ಣಾಯಕ ಮತದಾರರನ್ನೊಳಗೊಂಡ ರಾಜಕೀಯವಾಗಿ ದಿವ್ಯ ನಿರ್ಲಕ್ಷö್ಯಕ್ಕೆ ಒಳಪಟ್ಟ ಪ್ರವರ್ಗ-೧ ರ ಜಾತಿಗಳ ಒಕ್ಕೂಟದ ರಾಜಕೀಯ ನಿರ್ಣಯಕ್ಕಾಗಿ ಗಂಗಾಮತ, ಉಪ್ಪಾರ, ಯಾದವ, ಕಲಾಲ್, ಬೈಲ್ ಪತ್ತಾರ ಮತ್ತಿತರ ಸಮುದಾಯಗಳ ಜಿಲ್ಲಾಧ್ಯಕ್ಷರ ಮತ್ತು ಪ್ರಮುಖರ ಸಭೆಯನ್ನು ಕೊಪ್ಪಳ ತಾಲೂಕಿನ ಕಾಸನಕಂಡಿಯಲ್ಲಿ ಮುಂದಿನವಾರ ಕರೆಯಲಾಗಿದ್ದು, ಈ ನಿಮಿತ್ತ ಸಿಂಧನೂರು, ಮಸ್ಕಿ ಹಾಗೂ ಸಿರುಗುಪ್ಪದ ಪ್ರವರ್ಗ-೧ ರ ಪ್ರಮುಖರ ಹಾಗೂ ನನ್ನ ಆಪ್ತರ ಪೂರ್ವಭಾವಿ ಸಭೆಯನ್ನು ಏಪ್ರಿಲ್-೧೨ ಶುಕ್ರವಾರದಂದು ಸಿಂಧನೂರಿನ ಕರ್ನಾಟಕ ಬ್ಯಾಂಕ್ ಹಿಂದುಗಡೆಯ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ಪ್ರವರ್ಗ-೧ ರ ಜಾತಿಗಳ ಒಕ್ಕೂಟದ ಕೊಪ್ಪಳ ಜಿಲ್ಲಾಧ್ಯಕ್ಷರಾದ ಧನರಾಜ್ ಈ ರವರು ತಿಳಿಸಿದ್ದಾರೆ.
ರಾಜ್ಯದ ಜನಸಂಖ್ಯೆಯಲ್ಲಿ ಶೇ ೧೪.೮ ರಷ್ಟು ಅಂದರೆ ೧ ಕೋಟಿಯಷ್ಟು ಇರುವ ಪ್ರವರ್ಗ-೧ ರ ಜಾತಿಗಳ ಒಕ್ಕೂಟಕ್ಕೆ ಈ ಬಾರಿ ಉಡುಪಿ-ಮಂಗಳೂರಿನಿAದ ಗಂಗಾಮತ ಸಮಾಜಕ್ಕೆ ಹಾಗೂ ಕೊಪ್ಪಳದಿಂದ ಉಪ್ಪಾರ ಸಮಾಜಕ್ಕೆ ಲೋಕಸಭಾ ಟಿಕೇಟ್‌ನ ಬೇಡಿಕೆ ಹಾಗೂ ನಂಬಿಕೆ ಒಂದು ರಾಷ್ಟಿçÃಯ ಪಕ್ಷದಿಂದ ಇತ್ತು. ಎರಡೂ ಕಡೆ ವಂಚಿತರಾದ ಈ ವರ್ಗ ರಾಜ್ಯದಲ್ಲಿ ಒಂದೇ ಒಂದು ಟಿಕೇಟ್ ಪಡೆಯದೇ ಸಾಮಾಜಿಕ ನ್ಯಾಯದಿಂದ ವಂಚಿತವಾಗಿದೆ. ಈ ನಿಟ್ಟಿನಲ್ಲಿ ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ ಪ್ರವರ್ಗ-೧ ರ ಮತದಾರರಿಗೆ, ನಾಯಕರಿಗೆ ಮನ್ನಣೆ ಹಾಗೂ ಭವಿಷ್ಯದ ಚುನಾವಣೆ ಹಾಗೂ ನೇಮಕಾತಿಗಳ ಕುರಿತು ಮನ್ನಣೆ ಪಡೆಯುವ ನಿಟ್ಟಿನಲ್ಲಿ ಈ ಮಹತ್ವದ ಸಭೆಯನ್ನು ಕರೆಯಲಾಗಿದ್ದು, ಕಾಸನಕಂಡಿ ಮಹತ್ವದ ಸಭೆಯಲ್ಲಿ ಎಲ್ಲಾ ನಾಯಕರ ಉಪಸ್ಥಿತಿಯಲ್ಲಿ ಚುನಾವಣಾ ತೀರ್ಮಾನವನ್ನು ತಿಳಿಸಲಾಗುವುದು ಎಂದು ಅವರು ಈ ಮೂಲಕ ತಿಳಿಸಿದರು.
ಕೊಪ್ಪಳ ಲೋಕಸಭಾ ಚುನಾವಣೆರಾಜಕೀಯ ತೀರ್ಮಾನದ ಮೊದಲ ಸಭೆನಾಳೆಸಿಂಧನೂರಿನಲ್ಲಿ- ಧನರಾಜ್ ಈ
ಜಾಹೀರಾತು