

ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಇಟಗಿ ಗ್ರಾಮದಲ್ಲಿ ಪ್ರತಿತಿಂಗಳು ಅಮಾವಾಸ್ಯೆಗೆ ಮಾತ್ರ ದರ್ಶನ ನೀಡುವ ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರದಲ್ಲಿ ತಾರೀಖು ೮ನೇ ಏಪ್ರಿಲ್ ೨೦೨೪ರ ಸೋಮವಾರ, ಚೈತ್ರ ಮಾಸ ಅಮಾವಾಸ್ಯೆ ಪೂಜೆಯು, ಬೆಳಿಗ್ಗೆ ೧೧ ರಿಂದ ೪ ರವರೆಗೆ ಪೂಜೆ ಮತ್ತು ಪ್ರಸಾದ ವಿನಿಯೋಗ ಜರುಗಲಿದೆ.
ಶ್ರೀ ಶೋಭಾಕೃತ ನಾಮ ಸಂವತ್ಸರ, ಫಾಲ್ಗುಣ ಮಾಸೆ, ಶಿಶಿರ ಋತು, ಉತ್ತರಾಯಣ ಕೃಷ್ಣ ಪಕ್ಷ, ದಿನಾಂಕ ೦೮-೦೪-೨೦೨೪ ಸೋಮವಾರದಂದು “ಚೈತ್ರ ಮಾಸ ಅಮಾವಾಸ್ಯೆ” ಪೂಜೆಗೆ, ತಾವೆಲ್ಲರು ಸಹ-ಕುಟುಂಬ ಸಮೇತ ಆಗಮಿಸಿ,
ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ತಮ್ಮಲ್ಲಿ ವಿನಂತಿಸಿಕೊಳ್ಳುತ್ತೇವೆ.
ಪೂಜೆ, ಸೇವೆ ಮತ್ತು ಅಭಿವೃದ್ಧಿಗಾಗಿ ದಾನಿಗಳು, ನೋಂದಾಯಿಸಿಕೊಳ್ಳುವವರು ಸಂಪರ್ಕಿಸಿ ಹೆಚ್ಚಿನ ಮಾಹಿತಿಗಾಗಿ : ರಮೇಶ ಸುರ್ವೆ ಸಂಚಾಲಕರು ಶ್ರೀ ನಾಗದೇವರು ಶ್ರೀ ನಾಗಚೌಡೇಶ್ವರಿ ಅಮ್ಮನವರ ಕ್ಷೇತ್ರ, ಇಟಗಿ ಮೊಬೈಲ್ : ೯೮೪೫೩೦೭೩೨೭
ವಿ.ಸೂ. : ಪ್ರತಿ ತಿಂಗಳ ಅಮಾವಾಸ್ಯೆಯ ದಿನ ಮಾತ್ರ, ದೇವರ ದರ್ಶನ ಮತ್ತು ಪೂಜಾ ಕಾರ್ಯಕ್ರಮಗಳು ನಡೆಯುತ್ತದೆ
ಉಳಿದ ದಿನಗಳಲ್ಲಿ ಹೊರಗಿನಿಂದಲೇ ದರ್ಶನ ಮತ್ತು ಪೂಜೆ ಮಾಡಿಕೊಳ್ಳಬಹುದು.



