Breaking News

ಶಾಲೆ, ಆರೋಗ್ಯಕೇಂದ್ರ, ಮಕ್ಕಳ ಮನೆಗಳಿಗೆ ಜಿ.ಪಂ. ಸಿಇಓ ಭೇಟಿ

ಸಂಗಾಪುರ ಗ್ರಾಮಕ್ಕೆ ಜಿ.ಪಂ. ಸಿಇಓ ಭೇಟಿ ಮಕ್ಕಳ ಆರೋಗ್ಯ ವಿಚಾರಣೆ

ಗಂಗಾವತಿ : ತಾಲೂಕಿನ ಸಂಗಾಪುರ ಗ್ರಾ.ಪಂ. ವ್ಯಾಪ್ತಿಯ ಸಂಗಾಪುರದಲ್ಲಿ ಬಿಸಿಯೂಟದಿಂದ ಅಸ್ವಸ್ಥಗೊಂಡಿದ್ದ ಮಕ್ಕಳ ಮನೆಗಳಿಗೆ ಜಿಲ್ಲಾ ಪಂಚಾಯತ ಮುಖ್ಯಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ ಅವರು ಬುಧವಾರ ಖುದ್ದಾಗಿ ಭೇಟಿ ನೀಡಿ ಮಕ್ಕಳ ಆರೋಗ್ಯ ವಿಚಾರಿಸಿದರು.

ಜಾಹೀರಾತು

ನಂತರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಕ್ಕಳು ಚೇತರಿಕೆಗೊಂಡ ವರದಿಯ ಮಾಹಿತಿ ವೈದ್ಯರಿಂದ ಪಡೆದರು.

ನಂತರ ಗ್ರಾಮದ ಶಾಲೆಗೆ ಜಿ.ಪಂ. ಸಿಇಓ ರಾಹುಲ್ ರತ್ನಂ ಪಾಂಡೆಯ ಅವರು ಭೇಟಿ ನೀಡಿ ‘ಶಾಲೆಯಲ್ಲಿರುವ ಕುಡಿವ ನೀರು, ಬಳಕೆ ನೀರು ಹಾಗೂ ಬಿಸಿಯೂಟ ಕೊಠಡಿ ಸೇರಿ ಇತರೆ ಸೌಲಭ್ಯಗಳ ಪರಿಶೀಲಿಸಿದರು. ಶಾಲಾ ಅನುದಾನ ಬಳಕೆ ಮಾಡಿಕೊಂಡು ಮಕ್ಕಳಿಗೆ ಸುಸಜ್ಜಿತ ಸೌಲಭ್ಯ ಕಲ್ಪಿಸಬೇಕು. ಅಡುಗೆಕೊಣೆಯಲ್ಲಿ ಶುಚಿತ್ವ ಕಾಪಾಡಿಕೊಳ್ಳಬೇಕು‌. ಇಂಥ ಪ್ರಕರಣಗಳು ಮತ್ತೆ ಕಂಡು ಬಂದರೆ ಶಿಸ್ತು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಶಾಲೆಯ ಮುಖ್ಯಶಿಕ್ಷಕರಿಗೆ’ ನೀಡಿದರು.

ಈ ವೇಳೆ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ, ಆರ್ ಡಬ್ಲ್ಯುಎಸ್ ಎಇಇ ವಿಜಯ ಕುಮಾರ್, ತಾ.ಪಂ. ಸಹಾಯಕ‌ ನಿರ್ದೇಶಕರಾದ ಮಹಾಂತಗೌಡ ಪಾಟೀಲ್,
ಕ್ಷೇತ್ರ ಶಿಕ್ಷಣಾಧಿಕಾರಿಗಳು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು ಹಾಜರಿದ್ದರು.

About Mallikarjun

Check Also

ವಿಶೇಷ ಚೇತನರಿಗೆ  ಯಂತ್ರ ಚಾಲಿತ ತ್ರಿಚಕ್ರ ವಾಹನ ಹಾಗೂ ಹೊಲಿಗೆ,  ಹಾಗೂ ಹೊಲಿಗೆ, ಬಡಗಿತನ, ಧೋಬಿ ವೃತ್ತಿಯ ಉಪಕರಣಗಳ ವಿತರಣೆ

Distribution of motorized three-wheelers and sewing, carpentry, and laundry tools to the specially-abled ಜಮಖಂಡಿ 05-01 …

Leave a Reply

Your email address will not be published. Required fields are marked *