The Congress party did as it said and saved the poor: Former Minister M. Mallikarjun Nagappa

ಗಂಗಾವತಿ: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದು ಸ್ವಾತಂತ್ರ್ಯ ನಂತರ ಭಾರತದ ಅಭಿವೃದ್ಧಿ ಮತ್ತು ಬಡ ಜನತೆಯ ಸ್ವಾವಲಂಬನೆ ಬದುಕಿಗೆ ಗೌರವ ನೀಡಿದೆ ಎಂದು ಮಾಜಿ ಸಚಿವ ಎಂ ಮಲ್ಲಿಕಾರ್ಜುನ್ ನಾಗಪ್ಪ ಹೇಳಿದರು ಅವರು ತಮ್ಮ ನಿವಾಸದಲ್ಲಿ ಲೋಕ ಕಾಂಗ್ರೆಸ್ ಅಭ್ಯರ್ಥಿ ಕೆ ರಾಘವೇಂದ್ರ ಹಿಟ್ನಾಳ್ ಕೆ ರಾಜಶೇಖರ್ ಹಿಟ್ನಾಳ್ ಅವರಿಂದ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಕಾರ್ಯಕರ್ತರು ಬಹಳ ದೊಡ್ಡ ಶಕ್ತಿಯಾಗಿದ್ದಾರೆ. ಇಲ್ಲಿ ಸಾಮೂಹಿಕನಾಕತ್ವದಲ್ಲಿ ಚುನಾವಣೆಯನ್ನು ಎದುರಿಸಬೇಕು. ಈ ಬಾರಿ ಖಚಿತವಾಗಿ ಕಾಂಗ್ರೆಸ್ ಪಕ್ಷಕ್ಕೆ ಒಳ್ಳೆಯ ಬೆಂಬಲ ವ್ಯಕ್ತವಾಗುತ್ತಿದೆ. ರಾಜ್ಯದಲ್ಲಿ ಪಂಚ ಗ್ಯಾರಂಟಿಗಳ ಮೂಲಕ ಮಹಿಳೆಯರು ಸೇರಿದಂತೆ ಶಕ್ತಿ ಹೀನರಿಗೆ ಸರ್ಕಾರ ಶಕ್ತಿ ನೀಡಿದೆ .ಇದರಿಂದ ಲೋಕ ಚುನಾವಣೆ ಕಾಂಗ್ರೆಸ್ ಪರವಾಗಿದೆ. ವಿರೋಧ ಪಕ್ಷ ಬಿಜೆಪಿಯವರು ಬರಿ ಸುಳ್ಳು ಹೇಳುವ ಮೂಲಕ ಜನ ದಿಕ್ಕು ತಪ್ಪಿಸುತ್ತಿದ್ದಾರೆ. ಜನರು ಸಹ ಕಳೆದ ಹತ್ತು ವರ್ಷಗಳಿಂದ ಬಿಜೆಪಿಯವರ ಸುಳ್ಳು ಮತ್ತು ಜಾತಿ, ಧರ್ಮದ ಆಧಾರದಲ್ಲಿ ಜನರನ್ನು ಒಡೆದಾಳುವ ಕುರಿತು ತಿಳಿದುಕೊಂಡಿದ್ದಾರೆ .ಈ ಬಾರಿ ಖಚಿತವಾಗಿ ಕಾಂಗ್ರೆಸ್ ಪಕ್ಷ ಗೆಲ್ಲಲಿದ್ದು, ಕೊಪ್ಪಳ ಜಿಲ್ಲೆ ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿತ್ತು. ಈ ಹಿಂದೆ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರದ ಶಾಸಕರು ಲೋಕಸಭಾ ಸದಸ್ಯರು ಇಲ್ಲಿ ಕಾಂಗ್ರೆಸ್ ಪಕ್ಷದವರಾಗಿದ್ದರು. ಅಂತಹ ವಾತಾವರಣ ಪುನಹ ಈಗ ಬಂದಿದೆ ಕೇಂದ್ರದಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ನೇತೃತ್ವದಲ್ಲಿ ಇಡೀ ದೇಶದಲ್ಲಿ ಕಾಂಗ್ರೆಸ್ಸಿಗೆ ಸ್ಪಷ್ಟ ಬಹುಮತ ದೊರೆತು ಇಡೀ ದೇಶದಲ್ಲಿ ಕಾಂಗ್ರೆಸ್ ವಾತಾವರಣ ಇನ್ನು ಮುಂದೆ ಸೃಷ್ಟಿಯಾಗಲಿದೆ ಎಂದರು. ಈ ಸಂದರ್ಭದಲ್ಲಿ ಕೊಪ್ಪಳದ ಶಾಸಕ ಕೆ .ರಾಘವೇಂದ್ರ ಹಿಟ್ನಾಳ, ಕಾಂಗ್ರೆಸ್ ಮುಖಂಡ ರವಿ ಕುರುಗೋಡು ಸೇರಿದಂತೆ ಅನೇಕರಿದ್ದರು
ಪೊಟೊ01-gvt-06
ಗಂಗಾವತಿ: ಮಾಜಿ ಸಚಿವ ಎಂ.ಮಲ್ಲಿಕಾರ್ಜುನ ನಾಗಪ್ಪ ನಿವಾಸಕ್ಕೆ ಕೈ ಅಭ್ಯರ್ಥಿ ಕೆ.ರಾಜಶೇಖರ ಹಿಟ್ನಾಳ ಭೇಟಿ ನೀಡಿದ್ದರು.