Request to release water to Krishna and Hiranyakesi rivers soon.

ಇಂದು ಮುಂಬೈ ನಗರದಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ದೇವೇಂದ್ರ ಫಡ್ನವೀಸ್ ಜಿ ಅವರನ್ನು ಮಾಜಿ ಸಚಿವರು ಹಾಗೂ ನಿಪ್ಪಾಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸೌ. ಶಶಿಕಲಾ ಜೊಲ್ಲೆ ಜಿ ಹಾಗೂ ಚಿಕ್ಕೋಡಿ ಲೋಕಸಭೆ ಸಂಸದರಾದ ಮಾನ್ಯ ಶ್ರೀ ಅಣ್ಣಾಸಾಹೇಬ ಜೊಲ್ಲೆ ಜಿ ಯವರು ಭೇಟಿಯಾಗಿ ಮಹಾರಾಷ್ಟ್ರದಿಂದ ಕೃಷ್ಣಾ, ವೇದಗಂಗಾ ನದಿ ಹಾಗೂ ಹಿಡಕಲ್ ಜಲಾಶಯಕ್ಕೆ ನೀರನ್ನು ಬಿಡುವಂತೆ ಮನವಿ ಸಲ್ಲಿಸಿದರು.
ಜಾನುವಾರುಗಳಿಗೆ ಹಾಗೂ ಜನರ ನಿತ್ಯ ಉಪಯೋಗಕ್ಕಾಗಿ ನೀರಿಲ್ಲದೇ ತೊಂದರೆ ಅನುಭವಿಸುತ್ತಿದ್ದು ಶೀಘ್ರ ಕೃಷ್ಣಾ ಹಾಗೂ ಹಿರಣ್ಯಕೇಶಿ ನದಿಗಳಿಗೆ ನೀರು ಬಿಡುವಂತೆ ಮನವಿ ನೀಡಿದ್ದು,ಸಕಾರಾತ್ಮಕವಾಗಿ ಸ್ಪಂದಿಸಿದ ಮಾನ್ಯ ಉಪಮುಖ್ಯಮಂತ್ರಿಗಳು ಸ್ಪಂದಿಸಿದ್ದು, ತಕ್ಷಣವೇ ನೀರು ಬಿಡುವಂತೆ ಭರವಸೆ ನೀಡಿದ್ದು,ಕ್ಷೇತ್ರದ ಜನರ ಪರವಾಗಿ ಅವರಿಗೆ ಹೃದಯಪೂರ್ವಕ ಧನ್ಯವಾದಗಳನ್ನು ತಿಳಿಸುತ್ತೇವೆ.
ಈ ಸಂದರ್ಭದಲ್ಲಿ ಮಾಜಿ ಸಚಿವರಾದ
ಶ್ರೀ ಶ್ರೀಮಂತ ಪಾಟೀಲ, ಶಾಸಕರಾದ
ಶ್ರೀ ದುರ್ಯೋಧನ ಐಹೊಳೆ, ಶಾಸಕರಾದ
ಶ್ರೀ ನಿಖೀಲ ಕತ್ತಿ,,ರೈತ ಮೋರ್ಚಾ ಅಧ್ಯಕ್ಷರಾದ ಶ್ರೀ ಎಸ್.ಮುದಕಣ್ಣವರ ಉಪಸ್ಥಿತರಿದ್ದರು