Breaking News

ಹೆಚ್ಚುವರಿ ಕರ್ನಾಟಕ ಜಲಸಾರಿಗೆ ಮಂಡಳಿ ಉದ್ಘಾಟನೆ

ಬೆಂಗಳೂರು: ನಗರದ ರೇಸ್ ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದ ಮೂರನೇ ಮಹಡಿಯಲ್ಲಿ ಹೆಚ್ಚುವರಿ ಕರ್ನಾಟಕ ಜಲಸಾರಿಗೆ ಮಂಡಳಿಯ ಕಚೇರಿಯನ್ನ ಕರ್ನಾಟಕ ಜಲಸಾರಿಗೆ ಮಂಡಳಿ ಮುಖ್ಯ ಕಾರ್ಯಾನಿರ್ವಾಹಕ ಅಧಿಕಾರಿ ಜಯರಾಮ್ ರಾಯಪುರ್ ಅವರು ಸೋಮವಾರ ಉದ್ಘಾಟಿಸಿದ್ದಾರೆ.

ಜಾಹೀರಾತು

ಬಳಿಕ ಮಾತನಾಡಿ ಜಯರಾಮ್ ರಾಯಪುರ್ ಅವರು, ಹೆಚ್ಚುವರಿ ಕಚೇರಿ ಉದ್ಘಾಟನೆಯಿಂದ ಕಚೇರಿಯ ಸಿಬ್ಬಂದಿಗಳಿಗೆ ಎಲ್ಲ ರೀತಿಯ ಕೆಲಸಕ್ಕೆ ಎಂದು ತಿಳಿಸಿದರು.

ಕೇಂದ್ರ ಜಲಸಾರಿಗೆ ಅಭಿವೃದ್ಧಿ ಜೊತೆಗೆ ರಾಜ್ಯ ಜಲಸಾರಿಗೆ ಮಂಡಳಿಯೂ ಸಹ ಅಭಿವೃದ್ಧಿಗೊಳಸಲಾಗುತ್ತದೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಹಕಾರ ಅತ್ಯಗತ್ಯ ಎಂದರು.

ದೇಶದಲ್ಲಿ ಒಳ್ಳೆ ಒಳ್ಳೆಯ ಪ್ರಾಜೆಕ್ಟ್ ಇವೆ. ಅದಕ್ಕೆ ತಕ್ಕಂತೆ ಶಿಕ್ಷಣ ನೀಡುವುದು ಅಗತ್ಯ. ಅದರ ಜೊತೆಗೆ ಪಾಠದ ಜೊತೆಗೆ ಪ್ರಾಕ್ಟಿಸ್ ನೀಡುವುದು ಅಗತ್ಯ ಎಂದರು.

ಹೊಸ ವರ್ಷಕ್ಕೆ ಹೊಸ ಕಚೇರಿ ಉದ್ಘಾಟನೆಗೊಂಡಿದಕ್ಕೆ ಎಲ್ಲ ಸಿಬ್ಬಂದಿಗಳಿಗೆ ಶುಭಾಶಯಗಳು ಕೋರಿದರು.
ಇನ್ನು ಇದೇ ವೇಳೆ ಉಡುಪಿ ವಿಭಾಗದ ಪಿಡಬ್ಲ್ಯೂಡಿ ಎಕ್ಸಿಕ್ಯುಟಿವ್ ಇಂಜಿನಿಯರ್ ನಾಗರಾಜ್ ಎಂಬುವರಿಗೆ ವಯೋನಿವೃತ್ತಿಯ ಬಿಳ್ಕೋಡುಗೆ ನೀಡಲಾಯಿತು.

ಈ ಸಂದರ್ಭದಲ್ಲಿ ಕರ್ನಾಟಕ ಜಲಸಾರಿಗೆ ಮಂಡಳಿಯ ಕ್ಯಾಪ್ಟನ್ ಸಿ. ಸ್ವಾಮಿ, ಚೀಫ್‌ ಅಕೌಂಟ್‌ ಆಫೀರ್ಸ್‌ ಸಂಗೀತಾ ಭಟ್‌, ಸೂಪರ್ ಡೆಂಟ್ ಇಂಜಿನಿಯರ್‌ ಪ್ರಮೀತ್ ಬಿ.ಎಸ್, ಎಕ್ಸಿಕ್ಯೂಟಿವ್ ಇಂಜಿನಿಯರ್ ಟಿ.ಎಸ್ ಥಾರನಾಥ ರಾಥೋಡ್, ಎಕ್ಸಿಕ್ಯುಟಿವ್ ಇಂಜಿನಿಯರ್ ಎಂ. ವಿ. ಪ್ರಸಾದ್‌, ರಿಜಿನಲ್ ಎಕ್ಸಿಕ್ಯುಟಿವ್ ಆಫೀರ್ಸ್ ಸವಿತಾ ಎಸ್. ನಾಯ್ಕ್, ಜೂನಿಯರ್‌ ಇಂಜಿನಿಯರ್ ಜ್ಞಾನೇಶ್ವರ ಜೋಶಿ, ಶ್ರೇಯಸ್‌ ಕೆ., ವಿ.ಪೂರ್ಣಿಮಾ ಹಾಗೂ ಕಚೇರಿ ಸಿಬ್ಬಂದಿ ಇದ್ದರು.

About Mallikarjun

Check Also

ಕುರಟ್ಟಿ ಹೋಸೂರು ಗ್ರಾಮದಲ್ಲಿ ಶ್ರೀ (ಕರ್ತ) ಕರಿ ತಿಮ್ಮರಾಯಸ್ವಾಮಿ, ಮಹದೇಶ್ವರ ದೇವಸ್ಥಾನ ಉದ್ಘಾಟನೆ.

Inauguration of Sri (Lord) Kari Thimmarayaswamy, Mahadeshwara Temple in Kuratti Hosur village. ವರದಿ : ಬಂಗಾರಪ್ಪ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.