Breaking News

ನದಿಗಳಲ್ಲಿನೀರಿಲ್ಲಜಲಚರಗಳ ಊರಿಲ್ಲ

There is no water in the rivers and there is no home for aquatic creatures

ಜಾಹೀರಾತು

ಸೂರ್ಯನ ಪ್ರಕರತೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ. ಜನವಾರುಗಳು ರಣಬಿಸಿಲಿನ ತಾಪಕ್ಕೆ ತತ್ತರಿಸಿ ಹೋಗಿ, ತೆಕುತ್ತವೆ. ಅವುಗಳಿಗೆ ಮೇವಿಲ್ಲ, ನೀರಿಲ್ಲ ಕಲ್ಯಾಣ ಕರ್ನಾಟಕ ಅಂದ್ರೆ ಭತ್ತದ ನಾಡುಗಳಲ್ಲಿ ಈಗಾಗಲೇ 40 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಲ್ಯಾಣ ಕರ್ನಾಟಕದ ತಾಲೂಕುಗಳಲ್ಲಿ ದಾಖಲಾಗಿದೆ. ಹೀಗಾಗಿ ಕೆಲವು ಸಾಕು ಜಾನುವಾರಗಳಾದ ಕುರಿ, ಮೇಕೆ, ಆಡು, ಎಮ್ಮೆ ಹಸುಗಳ ಮೇಲೆ ಸೂರ್ಯನ ಪ್ರಕರತೆ ಪರಿಣಾಮ ಬೀರಿ, ಮೂಕ ಪ್ರಾಣಿಗಳಿಗೆ ಕುತ್ತಾಗಿ ಕುಂತಿದೆ. ಹಾಗಾಗಿ ಜಾನುವಾರುಗಳು ವಿವಿಧ ರೋಗಗಳಿಗೆ ತುತ್ತಾಗುವ ಸಂಭವ ಕೂಡ ಒದಗಿದೆ. ಸೂರ್ಯನ ಉಷ್ಣತೆಯಿಂದ ಮೂಕ ಪ್ರಾಣಿಗಳು ರಣಬಿಸಿಲಿಗೆ ರಣ ಭೇಟೇಯಾಗುವ ಸಂಭವಗಳಿವೆ. ಮಾರ್ಚ್ ಏಪ್ರಿಲ್ ಮೇ ತಿಂಗಳಿನಿಂದ ಹೆಚ್ಚುತ್ತಿರುವ ಬಿಸಿಲಿನ ಶಾಖಕ್ಕೆ ತತ್ತರಿಸಿರುವ ಪಕ್ಷಿಗಳು, ಜಲ ಸಂಕಲನ, ವನ್ಯ ಜೀವಿಗಳು ರಣಬಿಸಿಲಿನ ತಾಪಕ್ಕೆ ನೀರನ್ನು ಹುಡುಕಿ ಕೊಂಡು ನದಿಗಳ ಹಳ್ಳಗಳ ಕೆರೆಗಳ ಹಾದಿಯನ್ನು ಹಿಡಿದಿವೆ. ಆದರೆ ಇವಳೆಲ್ಲವೂ ಬತ್ತಿ ಬರಡಾಗಿ ಮರಳುನಾಡಾಗಿ ಪರಿಣಮಿಸಿವೆ. ರಾಯಚೂರಿಂದ ಮಂತ್ರಾಲಯಕ್ಕೆ ಹೋಗುವ ಸಮಯದಲ್ಲಿ ಸಿಗುವದು ತುಂಗಭದ್ರ ನದಿ ಆ ನದಿಯಲ್ಲಿ ಕೆಲವೊಂದು ಗುಂಡಿ ತಗ್ಗುಗಳಲ್ಲಿ ನೀರು ನಿಂತಿರುವುದು ಸಹಜವಾಗಿರುತಿತ್ತು. ಆದರೆ ಒಂದು ಹನಿ ನೀರು ಕೂಡ ತುಂಗಭದ್ರೆಯ ಮಡಿಲಲ್ಲಿ ಗಂಗೆ ಮಾಯವಾಗಿ ಹೋಗಿದ್ದಾಳೆ.
ಬೇಸಿಗೆಯ ಸಮಯದಲ್ಲಿ ಜಾನುವಾರುಗಳನ್ನು ಕುಲ್ಲಾ ಬಿಡುವ ಪದ್ಧತಿ ಹಳ್ಳಿಗಳಲ್ಲಿ ಈಗಲೂ ಕೂಡ ನಡೆದುಕೊಂಡು ಬಂದಿದೆ. ಬೆಳಗಿನ ಜಾವ ಗೂಟಕ್ಕೆ ಕಟ್ಟಿ ಹಾಕಿರುವ ಜಾನುವಾರುಗಳನ್ನು ಬಿಚ್ಚಿ ಮೇಯುವುದಕ್ಕೆ ಬಿಟ್ಟುಬಿಡುತ್ತಾರೆ. ಅವುಗಳು ಜಮೀನುಗಳಲ್ಲಿ ಒಣಗಿ ನಿಂತ ಹುಲ್ಲುಗಳನ್ನು ತಿಂದು ನೀರಿಗಾಗಿ ಪರದಾಡುತ್ತವೆ.
ಸೂರ್ಯನ ಶಾಖದಿಂದ ಜಾನುವಾರುಗಳ ಬೆನ್ನಿಗೆ ಬೊಬ್ಬೆ ಹೇಳುವಷ್ಟರಲ್ಲಿ ಅವುಗಳು ಬೇವಿನ ಮರವನ್ನು ಹುಡುಕುತ್ತವೆ. ನಿಮಗೆಲ್ಲ ಗೊತ್ತಿರುವ ವಿಷಯನೇ ಕಲ್ಯಾಣ ಕರ್ನಾಟಕದಲ್ಲಿ ಮರಗಳು ಸಿಗುವುದು ಕಷ್ಟಕರ ಸಾಧ್ಯ. ನೆರಳಿಗಾಗಿ ಅಲ್ಲೊಂದು ಇಲ್ಲೊಂದು ಇರುವ ಬೇವಿನ ಮರಗಳು ಬಿಸಿಲಿನ ಶಾಖವನ್ನು ತಪ್ಪಿಸುವುದಕ್ಕಾಗಿ ಜಾನುವಾರುಗಳಿಗೆ ಆಸರೆಯಾಗುತ್ತವೆ. ನೆರಳೆನು ಸಿಕ್ತು ಆದರೆ ನೀರಿಗಾಗಿ ಜಾನುವಾರುಗಳು ಹಳ್ಳದ ಕಡೆ ಮುಖ ಮಾಡುತ್ತವೆ. ಹಳ್ಳಗಳು ಒಂದು ಹನಿ ನೀರು ಇಲ್ಲದೆ ಒಣಗಿ ನೀರಡಿಕೆಯಾಗಿ ಬಾಯಾರಿ ನಿಂತಿವೆ. ಅಂತಹ ಹಳ್ಳಗಳನ್ನ ತಲುಪಿದ ಜಾನುವಾರುಗಳು ಅಲ್ಲಿ ನೀರಿಲ್ಲ ಮೇವಿಲ್ಲ. ಅಲ್ಲಿಷ್ಟು ಇಲ್ಲಿಷ್ಟು ಹಳ್ಳದಲ್ಲಿ ಸ್ವಲ್ಪ ನಿಂತಿದ್ದ ನೀರು ಕಲುಷಿತ ನೀರು ಕೊಳಚೆ ನೀರು ಕೆಸರು ನೀರು ಇಂತಹ ನೀರುಗಳನ್ನ ಸೇವಿಸಿ ಜಾನುವಾರುಗಳು ಅಸ್ತವ್ಯಸ್ತಗೊಂಡು ಅನಾರೋಗ್ಯಕ್ಕೀಡಾಗಿವೆ.
ರಣಬಿಸಿಲಿನ ಕಂಟಕದಿಂದ ಸಾಕುಪ್ರಾಣಿಗಳಾದ ಕುರಿ ಮೇಕೆ ಕೋಳಿ ನಾಯಿಗಳ ಪರಿಸ್ಥಿತಿ ಸಹ ಬಿಸಿಲಿನ ಪ್ರತಾಪಕ್ಕೆ ಮೂಲೆಗುಂಪಾಗಿ ಹೋಗಿವೆ. ಇದರಿಂದಾಗಿ ರಣಬಿಸಿಲಿನ ತಾಪಕ್ಕೆ ಜಾನುವಾರುಗಳು ಭೇದಿಯಿಂದ ನರಳುತ್ತವೆ. ಈ ಸಂಕಷ್ಟವನ್ನು ಪಾರು ಮಾಡುವುದಕ್ಕಾಗಿ ರೈತ ಏನಿಲ್ಲ ಸಂಕಷ್ಟವನ್ನು ಹೆದುರಿಸುತ್ತಿದ್ದಾನೆ. ಜಾನುವಾರುಗಳಿಗೆ ಹಸಿರು ಮೇವು ಇಲ್ಲದ ಕಾರಣ ಜಾನುವಾರುಗಳು ಹಾಲನ್ನು ಕೊಡುವುದು ಕಡಿಮೆ ಮಾಡಿವೆ. ರಣಬಿಸಿಲಿನ ಆರ್ಭಟದಿಂದ ನದಿಗಳೆಲ್ಲವೂ ಬತ್ತಿ ಒಣಗಿದ ಬುತ್ತಿಯಾಗಿವೆ. ಹಳ್ಳಗಳು ಒಣಗಿದ ಬಳ್ಳಿಗಳನ್ನು ಬೆಳೆಸಿವೆ. ಬೇಸಿಗೆಯಲ್ಲಿ ಕುಡಿಯುವುದಕ್ಕೆ ನೀರಿಲ್ಲ ತಿನ್ನುವುದಕ್ಕೆ ಮೇವಿಲ್ಲ.
ತುಂಗಭದ್ರ ನದಿಯು ಬತ್ತಿ ಹೋಗಿ ಒಣಗಿ ನಿಂತು ಆಕಾರವೇ ಕಳೆದುಕೊಂಡಿದೆ. ನದಿಗಳಲ್ಲಿ ನೀರಿಲ್ಲ ಜಲಚರಗಳ ಬದುಕಿನ ಊರಿಲ್ಲ.
ಜಲಚರದ ಊರು ನಾಶವಾದರೆ ಯಾವ ಊರು ಕೂಡ ಉಳಿಯುವುದಿಲ್ಲ.
ಪರಿಸರವನ್ನು ಸಂರಕ್ಷಿಸಿ ಹಳ್ಳಿ ಗಾಡುಗಳಿಂದ ಕೂಡಿದ ಭಾರತ ದೇಶವನ್ನು ಉಳಿಸಿ

ಡಾಕ್ಟರ್ ನಾಗೇಶ್ ಬಸಪ್ಪ ಜಾನೇಕಲ್

About Mallikarjun

Check Also

screenshot 2025 07 30 13 52 28 88 6012fa4d4ddec268fc5c7112cbb265e7.jpg

ಕ್ರಿಸ್ತರಾಜ ವಿದ್ಯಾಸಂಸ್ಥೆಯಲ್ಲಿ ಯಶಸ್ವಿಯಾಗಿ ನಡೆದ “ಗ್ರೀನ್ ಕ್ಯಾಂಪಸ್ ಕ್ಲೀನ್ ಕ್ಯಾಂಪಸ್” ಉದ್ಘಾಟನಾ ಕಾರ್ಯಕ್ರಮ.

The inauguration program of "Green Campus Clean Campus" was successfully held at Christaraja Educational Institution. …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.