Martyrdom day of the great revolutionaries of the freedom struggle like Bhagat Singh, Sukh Dev and Raj Guru!
ಕೊಪ್ಪಳ,ಬ್ರಿಟಿಷರ ದಬ್ಬಾಳಿಕೆ ವಿರುದ್ಧ ದೇಶದ ಸ್ವಾತಂತ್ರ್ಯಕ್ಕಾಗಿ ರಾಜಿರಹಿತವಾಗಿ ಹೋರಾಡಿ ನಗುನಗುತ್ತಾ ಗಲ್ಲಿಗೇರಿದ ಮಹಾನ್ ಕ್ರಾಂತಿಕಾರಿಗಳಾದ ಭಗತ್ ಸಿಂಗ್ , ಸುಖ್ ದೇವ್ ಹಾಗೂ ರಾಜ್ ಗುರು ಅವರ 94ನೇ ಹುತಾತ್ಮ ದಿನವನ್ನು ಎಐಡಿಎಸ್ ಓ, ಎ.ಐ.ಡಿ.ವೈ.ಓ ಮತ್ತು ಎ.ಐ.ಎಂ.ಎಸ್.ಎಸ್ ವಿದ್ಯಾರ್ಥಿ, ಯುವಜನ ಮಹಿಳಾ ಸಂಘಟನೆಗಳ ನೇತೃತ್ವದಲ್ಲಿ ಜಿಲ್ಲಾ ಕ್ರೀಡಾಂಗಣ, ಲೇಬರ್ ಸರ್ಕಲ್,ಗಿಣಿಗೇರ ಸೇರಿದಂತೆ ಜಿಲ್ಲೆಯಾದ್ಯಂತ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಎ.ಐ.ಡಿ.ವೈ.ಓ ನ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಶರಣು ಗಡ್ಡಿ ಮಾತನಾಡುತ್ತಾ ಮಹಾನ್ ಕ್ರಾಂತಿಕಾರಿ ಧೀರ ಹುತಾತ್ಮ ಭಗತ್ ಸಿಂಗ್ ಅವರು ಹೀಗೆ ಹೇಳಿದ್ದರು “ಯಾವ ಕ್ರಾಂತಿ ಜನತೆಗೆ ಸ್ವಾತಂತ್ರ್ಯವನ್ನು ತಂದು ಕೊಟ್ಟು ಮಾನವನಿಂದ ಮಾನವನ ಶೋಷಣೆಯನ್ನು ಅಸಾಧ್ಯಗೊಳಿಸುತ್ತದೆಯೋ, ಅಂತಹ ಕ್ರಾಂತಿಯ ಸಂದೇಶವನ್ನು ವಿದ್ಯಾರ್ಥಿಗಳು ಹಾಗೂ ಯುವ ಜನರು ದೇಶದ ಮೂಲೆ ಮೂಲೆಗೂ ಒಯ್ಯಬೇಕು. ಕೋಟ್ಯಾಂತರ ಮರ್ದಿತ ಜನರಿಗೆ ತಲುಪಿಸಬೇಕು. ಬಂಡವಾಳಶಾಹಿ ಮತ್ತು ಸಾಮ್ರಾಜ್ಯವಾದ ಶೋಷಣೆಗೆ ಮುಕ್ತಾಯ ಹಾಡಲು ಸಮಾಜವಾದಿ ಕ್ರಾಂತಿ ಅನಿವಾರ್ಯ” ಎಂದು ಈ ವಿಚಾರಗಳನ್ನು ಇಂದು ನಾವೆಲ್ಲರೂ ಅರಿತುಕೊಳ್ಳುವುದು ಅವಶ್ಯಕ ಎಂದು ಹೇಳಿದರು.
ಜಿಲ್ಲಾ ಅಧ್ಯಕ್ಷರಾದ ರಮೇಶ್ ವಂಕಲ್ ಕುಂಟಿ ಮಾತನಾಡಿ
ಭಗತ್ ಸಿಂಗ್ ಅವರ ವಿಚಾರಗಳು ಇಂದಿಗೂ ಪ್ರಸ್ತುತವಾಗಿದೆ. ಹಸಿವು, ಬಡತನ, ನಿರುದ್ಯೋಗವಿಲ್ಲದಂತಹ ಸಮಾಜವಾದಿ ಭಾರತವನ್ನು ನಿರ್ಮಿಸುವುದೇ ಅವರ ಕನಸಾಗಿತ್ತು. ಅವರ ಕನಸನ್ನು ನನಸಾಗಿಸುವ ದಾರಿಯಲ್ಲಿ ಅವರ ಉತ್ತರಾಧಿಕಾರಿಗಳಾಗಿ ವಿದ್ಯಾರ್ಥಿಗಳು, ಯುವಜನರ ಮುನ್ನಡೆಯುವುದು ತುರ್ತು ಅವಶ್ಯಕವಾಗಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಎ.ಐ.ಡಿ.ವೈ,ಓ ನ ಜಿಲ್ಲಾ ಕಾರ್ಯದರ್ಶಿ ಶರಣು ಪಾಟೀಲ್, ಸದಸ್ಯರಾದ ದೇವರಾಜ್ ಹೊಸಮನಿ, ಎ.ಐ.ಡಿ.ಎಸ್.ಓ ನ ಜಿಲ್ಲಾ ಸಂಚಾಲಕರಾದ ಗಂಗರಾಜ ಅಳ್ಳಳ್ಳಿ, ಎ.ಐ.ಎಂ.ಎಸ್.ಎಸ್ ಮಹಿಳಾ ಸಂಘಟನೆಯ ಸದಸ್ಯರಾದ ಶಾರದಾ, ಮಂಜುಳಾ, ಗಿಣಿಗೇರಿ ನಾಗರಿಕ ಹೊರಟ ಸಮಿತಿಯ ಮುಖಂಡ ಮಂಗಳೇಶ್ ರಾಥೋಡ್, ಮೌನೇಶ್,ಸುರೇಶ್ ಸೇರಿದಂತೆ ಇನ್ನಿತರ ಸಾರ್ವಜನಿಕರು,ಯುವಕರು ಮುಂತಾದವರು ಭಾಗವಹಿಸಿದ್ದರು.