Deputy Divisional Officer Saptasree gave a stern warning to the officers

ತಿಪಟೂರು:ಜನಗಳಿಗೆ ಹಾಗೂ ಜಾನುವಾರುಗಳಿಗೆ ಕುಡಿಯಲು ನೀರು ಜಾನುವಾರುಗಳಿಗೆ ಮೇವಿನ ಸಮಸ್ಯೆ ಆಗದಂತೆ ಎಚ್ಚರಿಕೆ ವಹಿಸಬೇಕೆಂದು ಉಪ ವಿಭಾಗಾಧಿಕಾರಿ ಸಪ್ತ ಶ್ರೀ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಮಿನಿ ವಿಧಾನಸೌಧ ಕಚೇರಿಯಲ್ಲಿ ಕರೆದಿದ್ದ ತಾಲೂಕು ಮಠದ ಟ್ರಾಸ್ಕ್ ಫೋರ್ಸ್ ಸಮಿತಿ ಸಭೆದಲ್ಲಿ ಮಾತನಾಡಿದರು.
ಬೇಸಿಗೆ ಕಾಲದಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆಗಳು ಪ್ರಾರಂಭವಾಗಿತ್ತಿರುವಾಗ ಯಾವ ರೀತಿ ಕರ್ತವ್ಯ ನಿರ್ವಹಿಸುತ್ತಿರಿ ಎಂದು ಕೇಳಿದಾಗ ಸಂಬಂಧಪಟ್ಟ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಟ್ರಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ಇಲಾಖೆಯಲ್ಲಿ ಹಣವಿಲ್ಲ ಬೋರ್ವೆಲ್ ಕೊರೆಯುತ್ತಿರುವರು ಬರುತ್ತಿಲ್ಲ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಏರು ಧ್ವನಿಯಲ್ಲಿ ಮಾತನಾಡಿದ್ದಾಗ ಉಡಾಫೆ ಉತ್ತರ ನೀಡುತ್ತೀರಾ ಎಂದು ಉಪವಿಬಾಧಿಕಾರಿಗಳು ಗರಂ ಆದರು.
ಸೂಕ್ಷ್ಮ ಪರಿಸ್ಥಿತಿಯಲ್ಲಿ ಕರ್ತವ್ಯ ನಿರ್ವಹಿಸದೆ ಕಾಲಹರಣ ಮಾಡುವ ಅಧಿಕಾರಿಗಳಿಗೆ ಕ್ರಮವನ್ನು ತೆಗೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಹಾಗೂ ಸಿಇಒ ಅವರಿಗೆ ಶಿಸ್ತು ಕ್ರಮ ಆದೇಶ ಮಾಡಲಾಗುವುದು ಎಂದರು
. ಚುನಾವಣಾ ಕೆಲಸವಿದೆ ಎಂದು ನೆಪ ಹೇಳಿಕೊಂಡು ಜನ ಜಾನುವಾರುಗಳಿಗೆ ನೀರಿನ ಸಮಸ್ಯೆ ಹೆಚ್ಚಾಗುವಂತೆ ಮಾಡಕೂಡದು.
ಚುನಾವಣೆಯಷ್ಟೇ ಮುಖ್ಯ ಬರಗಾಲದ ಸಮಸ್ಯೆಯೂ ಆಗಿರುವುದರಿಂದ ಎಲ್ಲಾ ಅಧಿಕಾರಿಗಳು ಬರಗಾಲದಿಂದ ಉಂಟಾಗಿರುವ ಸಮಸ್ಯೆಗಳಿಗೆ ಆದ್ಯತೆ ನೀಡಿ ಕೆಲಸ ಮಾಡಬೇಕು ಇನ್ನು ಯಾವುದೇ ರೀತಿಯ ಸಮಸ್ಯೆ ಇದ್ದರೆ ನನ್ನ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದರು.
ಸಪ್ತ ಶ್ರೀ ಉಪವಿಧಿಕಾರಿಗಳು.
ತಿಪಟೂರು
ವರದಿ ಮಂಜು ಗುರುಗದಹಳ್ಳಿ