SC, ST Viresh Vakil Eliganoor has been selected as a nominated member for Atrocity Control Awareness and Supervision Divisional Level Committee.
ಗಂಗಾವತಿ: ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಬುಡಕಟ್ಟುಗಳ (ದೌರ್ಜನ್ಯ ಪ್ರತಿಬಂಧ) ನಿಯಮಗಳು ೧೯೯೫ ರ ನಿಯಮ ೧೭ ರೀತ್ಯಾ ಉಪವಿಭಾಗ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿಗೆ, ಸಮಿತಿಯ ಅಧ್ಯಕ್ಷರಾದ ಮತ್ತು ಕೊಪ್ಪಳ ಜಿಲ್ಲೆಯ ಉಪವಿಭಾಗಾಧಿಕಾರಿಗಳಾದ ಕ್ಯಾಪ್ಟನ್ ಮಹೇಶ ಮಾಲಗತ್ತಿ ಅವರು ನನ್ನ ವಿದ್ಯಾರ್ಹತೆ ಹಾಗೂ ಸಮಾಜಸೇವಾ ಮನೋಭಾವನೆಯನ್ನು ಗುರುತಿಸಿ ವಿಭಾಗ ಮಟ್ಟದ ಸಮಿತಿಗೆ ಆಯ್ಕೆ ಮಾಡಿ ಆದೇಶ ನೀಡಿರುತ್ತಾರೆ ಎಂದು ವೀರೇಶ ವಕೀಲರು ಪ್ರಕಟಣೆಯಲ್ಲಿ ತಿಳಿಸಿದರು.
ಮುಂದುವರೆದು ಅವರು ಮಾತನಾಡಿ, ನನ್ನನ್ನೂ ಒಳಗೊಂಡAತೆ ಯಮನೂರಪ್ಪ ತಾಯಿ ಲಕ್ಷö್ಮವ್ವ ಗೊರ್ಲೆಕೊಪ್ಪ ಕುಕನೂರು, ಹುಸೇನಪ್ಪ ತಂ. ಆಳೂರಪ್ಪ ಕುಷ್ಟಗಿ, ಚಿನ್ನಪ್ಪ ತಂ. ವೀರಪ್ಪ ತಳವಾರ ಕೊಪ್ಪಳ, ದೇವಪ್ಪ ತಂ. ಶರಣಪ್ಪ ಮೆಣಸಗಿ ಕುಷ್ಟಗಿ ಹೀಗೆ ಐದು ಜನರನ್ನು ಸಮಿತಿ ಸದಸ್ಯತ್ವ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.
ನನ್ನನ್ನು ಕೊಪ್ಪಳ ಜಿಲ್ಲೆಯ ಉಪವಿಭಾಗ ಮಟ್ಟದ ಎಸ್.ಸಿ., ಎಸ್.ಟಿ. ದೌರ್ಜನ್ಯ ನಿಯಂತ್ರಣ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯತ್ವ ಸ್ಥಾನಕ್ಕೆ ನಾಮನಿರ್ದೇಶಿತರನ್ನಾಗಿ ಆಯ್ಕೆ ಮಾಡಿದ ಮಾನ್ಯ ಶ್ರೀ ಕ್ಯಾಪ್ಟನ್ ಮಹೇಶ ಮಾಲಗತ್ತಿಯವರಿಗೆ ಹಾಗೂ ಆಯ್ಕೆ ಸಮಿತಿಯ ಎಲ್ಲಾ ಅಧಿಕಾರಿಗಳಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ತಿಳಿಸುತ್ತಾ, ನನಗೆ ನೀಡಿರುವ ಈ ಜವಾಬ್ದಾರಿಯನ್ನು ಒಂದು ಹುದ್ದೆ ಎಂದು ಪರಿಗಣಿಸದೇ, ಸಾಮಾಜಿಕ ಜವಾಬ್ದಾರಿಯೆಂದು ತಿಳಿದು ಪ್ರಾಮಾಣಿಕವಾಗಿ ಹಾಗೂ ನಿಷ್ಪಕ್ಷಪಾತವಾಗಿ ಕೊಪ್ಪಳ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮುದಾಯದವರ ಒಳಿತಿಗಾಗಿ ಕಾರ್ಯನಿರ್ವಹಿಸುತ್ತೇನೆಂದು ತಿಳಿಸಿ, ಈ ಸಂದರ್ಭದಲ್ಲಿ ಉಪವಿಭಾಗ ಮಟ್ಟದ ಎಲ್ಲಾ ತಾಲೂಕ ಅಧಿಕಾರಿಗಳು ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಒಳಿತಿಗಾಗಿ ಸಹಕಾರ ನೀಡಬೇಕೆಂದು ಕೋರಿದರು.