Breaking News

ಕನ್ನಡ ಅಭಿವೃದ್ದಿ ಪ್ರಾಧಿಕಾರ ನೂತನ ಸದಸ್ಯ ವಿರುಪಣ್ಣ ಕಲ್ಲೂರು ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಶಿವರೆಡ್ಡಿ ಖ್ಯಾಡೇದ ಅವರಿಗೆ ಸನ್ಮಾನ

Kannada Development Authority New Member Virupanna Kallur and Border Development Authority Member Shivreddy Khyeda felicitated

ಜಾಹೀರಾತು

ಕನಕಗಿರಿ ಸಮೀಪದ ನವಲಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕದ ವತಿಯಿಂದ ಕನ್ನಡ ಅಭಿವೃದ್ದಿ ಪ್ರಾಧಿಕಾರ ನೂತನ ಸದಸ್ಯ ವಿರುಪಣ್ಣ ಕಲ್ಲೂರು ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯ ಶಿವರೆಡ್ಡಿ ಖ್ಯಾಡೇದ ಅವರನ್ನು ಸನ್ಮಾನಿಸಲಾಯಿತು

ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಆದ್ಯತೆ

ಕನಕಗಿರಿ: ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವ್ಯಾಪ್ತಿಯ ಅಕಾಡೆಮಿ ಹಾಗೂ ಪ್ರಾಧಿಕಾರ ನೇಮಕಾತಿ ಆಯ್ಕೆಯಲ್ಲಿ ಪ್ರತಿ ಬಾರಿಯು ಪ್ರಾದೇಶಿಕ ಅಸಮಾನತೆ ಕಂಡು ಬರುತ್ತಿದ್ದು, ಈ ಬಾರಿ ನಮ್ಮ ಭಾಗದಲ್ಲಿ ಹೆಚ್ಚಿನ ವ್ಯಕ್ತಿಗಳನ್ನು ನೇಮಕ ಮಾಡಿರುವುದು ಸಂತಸದ ವಿಚಾರವಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಶರಣೇಗೌಡ ಪೊಲೀಸ್ ಪಾಟೀಲ ತಿಳಿಸಿದರು.
ಇಲ್ಲಿಗೆ ಸಮೀಪದ ನವಲಿ ಗ್ರಾಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಹಾಗೂ ಗಡಿ ಅಭಿವೃದ್ದಿ ಪ್ರಾಧಿಕಾರ ಸದಸ್ಯರಿಗೆ ಗುರುವಾರ ಆಯೋಜಿಸಿದ್ದ ಸನ್ಮಾನ‌ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನವಲಿ ಗ್ರಾಮವು ಕಲೆ, ಜಾನಪದ, ಸಾಹಿತ್ಯ, ಸಂಸ್ಕ್ರತಿಗೆ ಹೆಸರುವಾಸಿಯಾಗಿದ್ದು ಇಂತಹ ಗ್ರಾಮದಿಂದ ಇಬ್ಬರೂ ವ್ಯಕ್ತಿಗಳನ್ನು ನೇಮಕ ಮಾಡಿದ್ದು ಸಂತೋಷದಾಯಕವಾಗಿದೆ ಎಂದರು. ಕಲ್ಲೂರು ಹಾಗೂ ಖ್ಯಾಡೆದ ಅವರು ಸಮರ್ಥ ವ್ಯಕ್ತಿ
ಸೂಕ್ತವಾಗಿ ನಿಭಾಯಿಸಬಲ್ಲ ವ್ಯಕ್ತಿಗಳಾಗಿದ್ದು, ಕನ್ನಡ ಭಾಷೆ ಉಳಿಸಿ ಬೆಳೆಸುವ ಕೆಲಸ ಮಾಡಲಿದ್ದಾರೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷ ಮೆಹಬೂಬಹುಸೇನ ಮಾತನಾಡಿ, ತಾಲೂಕಿನಲ್ಲಿ ಈ ಬಾರಿಯ ವಿವಿದ ಅಕಾಡೆಮಿ ಹಾಗೂ ಪ್ರಾಧಿಕಾರಗಳಿಗೆ ತಾಲೂಕಿನ‌ ವ್ಯಕ್ತಿಗಳನ್ನು ಆಯ್ಕೆ ಮಾಡಿದ್ದು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂಭ್ರಮದ ವಾತಾವರಣ ನಿರ್ಮಾಣ ಮಾಡಿದಂತಾಗಿದೆ. ಎಂದು ಹೇಳಿದರು.
ಕನ್ನಡ ಅಭಿವೃದ್ದಿ ಪ್ರಾಧಿಕಾರದ ನೂತನ ಸದಸ್ಯ ವಿರೂಪಣ್ಣ ಕಲ್ಲೂರು , ಗಡಿ ಅಭಿವೃದ್ದಿ ಪ್ರಾಧಿಕಾರದ ಸದಸ್ಯ ಶಿವರೆಡ್ಡಿ ಖ್ಯಾಡೇದ
ಮಾತನಾಡಿ, ಸರ್ಕಾರ ಹಾಗೂ ಸಚಿವ ಶಿವರಾಜ ತಂಗಡಗಿ ಅವರ ಮಾರ್ಗದರ್ಶನದಂತೆ ಜವಾಬ್ದಾರಿಯಿಂದ ಕೆಲಸ ಮಾಡಲಾಗುವುದು. ಜಿಲ್ಲೆ, ರಾಜ್ಯದಲ್ಲಿ ಕನ್ನಡ ಪರ ಕೆಲಸಗಳನ್ನು ಮಾಡುವ ನಿಟ್ಟಿನಲ್ಲಿ ಕನ್ನಡ ನೆಲ, ಜಲ, ಭಾಷೆಯನ್ನು ಉಳಿಸಿ ಬೆಳೆಸುವ ಕೆಲಸ ಮಾಡಲಾಗುವುದು ಎಂದು ತಿಳಿಸಿದರು
ಕಾರಟಗಿ ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಕಸಾಪ ಕೋಶಾಧ್ಯಕ್ಷ ತಿಪ್ಪಣ್ಣ ಮಡಿವಾಳರ,
ಪದಾಧಿಕಾರಿಗಳಾದ ಪ್ರವೀಣಕುಮಾರ ಕೋರಿ, ಚಾಂದಪಾಷ, ಅಮರೇಶ ಪಟ್ಟಣಶೆಟ್ಟಿ, ರವಿ ಬಲಿಜ,
ವಿನಯ ಮರಾಠಿ, ಶಿವಕುಮಾರ ಸಜ್ಜನ, ಮುಖ್ಯ ಶಿಕ್ಷಕರಾದ ಪರಪ್ಪ ಹಂಚಿನಾಳ, ಬಾಲಾಜಿ,
ಅಮರೇಶ ಪಾಟೀಲ,
ಜಡಿಯಪ್ಪ‌ ಬೋವಿ, ಸಿದ್ದನಗೌಡ, ಮಲ್ಲಿಕಾರ್ಜುನ ಖ್ಯಾಡೆದ, ರಾಮ್ ನಾಯಕ್, ರವಿ ಶೆಟ್ಟರ್,
ಕಂಠೆಪ್ಪ ಮಡಿವಾಳರ ಸೇರಿದಂತೆ ಇತರರು ಇದ್ದರು.

About Mallikarjun

Check Also

ಎಫ್.ಕೆ.ಸಿ.ಸಿ.ಐನಿಂದ ಶನಿವಾರ ಉದ್ಯೋಗ ಉತ್ಸವ್ 2025 –26 ; 6 ವಲಯಗಳಲ್ಲಿ 6 ಸಾವಿರ ಉದ್ಯೋಗಾವಕಾಶಗಳು ಲಭ್ಯ

FKCCI to hold Saturday Udyog Utsav 2025-26; 6,000 job opportunities available in 6 zones ಬೆಂಗಳೂರು, …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.