Breaking News

ಕರ್ನಾಟಕ ಸಂಗೀತ ಹಾಗೂ ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ರಮೇಶ ಗಬ್ಬೂರು ನೇಮಕ ಭಾರಧ್ವಾಜ್ ಸ್ವಾಗತ

Bhardwaj welcomes appointment of Ramesh Gabbur as member of Karnataka Music and Dance Academy

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಗಂಗಾವತಿ: ನಗರದ ಹಿರಿಯ ಹಾಡುಗಾರರಾದ ರಮೇಶ ಗಬ್ಬೂರುರವರನ್ನು ಕರ್ನಾಟಕ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯರನ್ನಾಗಿ ನೇಮಕ ಮಾಡಿದ್ದು ಹಾಗೂ ಕೊಪ್ಪಳ ಜಿಲ್ಲೆಯ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ ದೌರ್ಜನ್ಯ ನಿಯಂತ್ರಣ ಉಪವಿಭಾಗ ಮಟ್ಟದ ನಾಮನಿರ್ದೇಶಿತರನ್ನಾಗಿ ಕಾರಟಗಿ ತಾಲೂಕಿನ ಈಳಿಗನೂರು ಗ್ರಾಮದ ವೀರೇಶ ವಕೀಲರು ಇವರನ್ನು ಕರ್ನಾಟಕ ಸರ್ಕಾರ ನೇಮಕ ಮಾಡಿರುವುದು ಸ್ವಾಗತಾರ್ಹ ಎಂದು ಕ್ರಾಂತಿಚಕ್ರ ಬಳಗದ ರಾಜ್ಯಾಧ್ಯಕ್ಷರಾದ ಭಾರಧ್ವಾಜ್ ಹರ್ಷ ವ್ಯಕ್ತಪಡಿಸಿದರು.
ನೇಮಕಗೊಂಡ ರಮೇಶ ಗಬ್ಬೂರು ಹಾಗೂ ವೀರೇಶ ವಕೀಲರು ಇವರುಗಳಿಗೆ ಕ್ರಾಂತಿಚಕ್ರ ಬಳಗದಿಂದ ಇಂದು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಡಿ.ಎಸ್.ಎಸ್ ಭೀಮವಾದ ಸಂಘಟನೆಯ ಮುಖಂಡರಾದ ಸಿ.ಕೆ ಮರಿಸ್ವಾಮಿ ಬರಗೂರು, ಪಾಮಣ್ಣ ಅರಳಿಗನೂರು, ಹುಲುಗೇಶ ದೇವರಮನಿ, ಹೊನ್ನೂರಪ್ಪ ಡಣಾಪುರ, ಹುಲುಗಪ್ಪ ಕಕ್ಕರಗೋಳ, ಹುಲ್ಲೇಶ ವಿರುಪಾಪುರ ತಾಂಡ, ಹಂಪೇಶ ಹರಿಗೋಲು, ಪತ್ರಕರ್ತರಾದ ನಾಗರಾಜ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

About Mallikarjun

Check Also

ವಾಲ್ಮೀಕಿ ಸಮಾಜದ ಪೂರ್ವಭಾವಿ ಸಭೆ, ದಿ, 25.09.25 ರಂದು  ಬೃಹತ್ ಪ್ರತಿಭಟನೆ ನೆಡೆಸಲು ತೀರ್ಮಾನ.

Valmiki Samaj's preliminary meeting, The, decided to hold a massive protest on 25.09.25. ಗಂಗಾವತಿ. ನಗರಸಭೆ …

Leave a Reply

Your email address will not be published. Required fields are marked *