Vatsalya Program: Handing over the house

ಚಿಟಗುಪ್ಪ : ತಾಲೂಕಿನ ಸೀತಳಗೇರಾ ವಲಯದ ಬೋತಗಿ ಗ್ರಾಮದಲ್ಲಿ ಮಾಶಾಸನ ಪಡೆಯುತ್ತಿರುವ ಫಲಾನುಭವಿ ಕಾಶಮ್ಮ ನವರ ಬಡತನವನ್ನು ಅರಿತು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯಾ ಕಾರ್ಯಕ್ರಮ ಅಡಿಯಲ್ಲಿ ನಿರ್ಮಿಸಲಾದ ಮನೆಯನ್ನು ಹಸ್ತಾಂತರ ಮಾಡಲಾಯಿತು.
ಬೀದರ ಜಿಲ್ಲಾ ನಿರ್ದೇಶಕರಾದ ಪ್ರವೀಣಕುಮಾರ್ ಮನೆ ಹಸ್ತಾಂತರಿಸಿ ಮಾತನಾಡಿದ ಅವರು, ಅತಿ ಬಡವರಾದ ಕಾಶಮ್ಮ ತಾಯಿಯವರಿಗೆ ನಮ್ಮ ಯೋಜನೆ ವತಿಯಿಂದ ಮನೆ ನಿರ್ಮಾಣ ಮಾಡಿ,ಅವರ ಕನಸಿನ ಸೂರು ಕಟ್ಟಿಕೊಡುವ ಕೆಲಸ ಮಾಡಿದ್ದೇವೆ. ಬಡವರ ಪರವಾಗಿ ಈ ಯೋಜನೆ ಸದಾ ಕಾಲ ಕೆಲಸ ಮಾಡುತ್ತದೆ ಎಂದರು.
ಈ ಸಂದರ್ಭದಲ್ಲಿ
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಗೋದಾವರಿ, ಉಪಾಧ್ಯಕ್ಷರಾದ ವಿಶ್ವಾನಾಥ,ಪಂಚಾಯತ್ ಸದಸ್ಯರಾದ ಚಂದ್ರಕಾಂತ, ಚೀಟಗುಪ್ಪ, ತಾಲೂಕು ಯೋಜನಾಧಿಕಾರಿಗಳು ಆದ ಬಸವರಾಜ ಕೆ ,ಸೇವಾಪ್ರತಿನಿಧಿಯಾದ ಪರಿಶುದ್ದಾ ಸೇರಿದಂತೆ ಅನೇಕರು ಭಾಗವಹಿಸಿದ್ದರು.
Kalyanasiri Kannada News Live 24×7 | News Karnataka
