Why is Hanur Assembly Constituency Usabari for Mysore In-charge Minister? District Promotion Committee President Sivakumar’s response
ವರದಿ : ಬಂಗಾರಪ್ಪ ಸಿ .
ಹನೂರು :ನಮ್ಮ ಕಾಂಗ್ರೆಸ್ ಸರ್ಕಾರವು ಬಂದ ಮೇಲೆ ಬಡವರಿಗೆ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದೆ ಅದರ ಸದುಪಯೋಗದಿಂದ ರಾಜ್ಯದ ಜನರು ನೆಮ್ಮದಿಯ ಜೀವನ ನಡೆಸುತ್ತಾರೆ ಯಾರೆ ವ್ಯಕ್ತಿ ಸೋತ ಕ್ಷಣ ಕ್ಷೇತ್ರವನ್ನು ಮತ್ತೊಬ್ಬರ ಸುಪರ್ದಿಗೆ ಬಿಟ್ಟುಕೊಡುವ ಅಗತ್ಯವಿಲ್ಲ ಹಾಗೆ ನೋಡಿದರೆ ಕಳೆದ ಸಲ ಸೋತ ಹೆಚ್ ಸಿ ಮಹದೇವಪ್ಪನವರ ಸಹ ಜೆ ಡಿ ಎಸ್ ಶಾಸಕರಾದಂತ ಅಶ್ವಿನ್ ಕುಮಾರ್ ಗೆ ಕ್ಷೇತ್ರ ಬಿಡಬೇಕಾಗಿತ್ತು ಚುನಾವಣಾ ಎಂದಮೇಲೆ ಸೋಲು ಗೆಲುವು ಸಹಜ ತಮ್ಮ ಕ್ಷೇತ್ರದ ಅಭಿವೃದ್ಧಿಯಂತೆ ನಮ್ಮ ಕ್ಷೇತ್ರಕ್ಕೆ ಅನುದಾನ ಕೊಟ್ಟು ಅಭಿವೃದ್ಧಿ ಮಾಡಲಿ ಅದು ಬಿಟ್ಟು ಗೊಂದಲದ ಹೇಳಿಕೆ ನೀಡಬಾರದು ಎಂದು ಚಾಮರಾಜನಗರ
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾದ ಮಧುವನಹಳ್ಳಿ ಶಿವಕುಮಾರ್ ತಿಳಿಸಿದರು .
ಹನೂರು ಪಟ್ಟಣದಲ್ಲಿನ ಲೋಕೋಪಯೋಗಿ ಇಲಾಖೆಯ ವಸತಿಗೃಹದಲ್ಲಿ ಮಾದ್ಯಮದವರನ್ನೂದ್ದೇಶಿಸಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ನಮ್ಮ ಸರ್ಕಾರವು ಚಾಮರಾಜನಗರ ಪಟ್ಟಣದಲ್ಲಿ ಗ್ಯಾರಂಟಿ ಸಮಾವೇಶವನ್ನು ಹಮ್ಮಿಕೊಂಡಿದ್ದ ಸಮಯದಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಾಹದೇವಪ್ಪ ಮಾತನಾಡಿ ನಮ್ಮ ಪಕ್ಷಕ್ಕೆ ಜೆಡಿಎಸ್ ಶಾಸಕರ ಸೇರ್ಪಡೆ ಮಾಡಿಕೊಳ್ಳುವ ಮಾತಿನ ಅರ್ಥದಲ್ಲಿ ಮುಂದಿನ ದಿನಗಳಲ್ಲಿ ಅವರ ಅವಶ್ಯಕತೆ ಇದೆ ಎಂದು ನಮ್ಮ ನಾಯಕರಾದ ಆರ್ ನರೇಂದ್ರರ ಉಪಸ್ಥಿತಿಯಲ್ಲಿ ಮಾತನಾಡಿರುವುದು ಬೇಸರದ ಸಂಗಾತಿಯಾಗಿದೆ , ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಮಾಜಿ ಶಾಸಕರ ಮನೆತನವು ಪಕ್ಷಕ್ಕಾಗಿ ಸಾಕಷ್ಟು ಪ್ರಮಾಣದಲ್ಲಿ ದುಡಿದಿದ್ದಾರೆ ಹನೂರು ವಿಧಾನಸಭಾ ಕ್ಷೇತ್ರಕ್ಕೆ ಅನ್ಯ ಪಕ್ಷದ ಯಾವ ದೊಣ್ಣೆನಾಯಕನು ಬೇಕಾಗಿರುವುದಿಲ್ಲ ,ನಮ್ಮ ಪಕ್ಷದ ಅಭ್ಯರ್ಥಿಗಳ ಗೆಲುವಿಗಾಗಿ ನಮ್ಮ ನಾಯಕರು ಈಗಾಗಲೇ ಸಂಘಟನೆ ಮಾಡಿದ್ದಾರೆ ,ಅನ್ಯ ಪಕ್ಷದ ಯಾವುದೇ ವ್ಯಕ್ತಿಯನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮೊದಲು ಸ್ಥಳೀಯ ನಾಯಕರ ಅಭಿಪ್ರಾಯವನ್ನು ಪಡೆಯಬೇಕು ಹಾಗೂ ಅವರ ಪೂರ್ವಪರವನ್ನು ವಿಚಾರಿಸಬೇಕು ತದ ನಂತರ ಮುಂದಿನ ವಿಷಯವನ್ನು ವರೀಷ್ಠರಿಗೆ ತಿಳಿಸಬೇಕು , ಈಗಾಗಲೇ ನಮ್ಮ ನಾಯಕರು ಸೋತ ದಿನದಿಂದಲೂ ಮನೆಯಲ್ಲಿ ಕೂರದೆ ಕಾರ್ಯಕರ್ತರ ಸೇವೆಯಲ್ಲಿ ನಿರತರಾಗಿದ್ದಾರೆ ಅವರೆ ನಮಗೆ ಮುಖ್ಯವಾಗಿದ್ದಾರೆ . ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಹನೂರು ಕ್ಷೇತ್ರಕ್ಕೆ ಸಾಕಷ್ಟು ಅನ್ಯಾಯವಾಗಿದ್ದರು ಸಹ ಕಾರ್ಯಕರ್ತರು ಸಹಿಸುಕೊಂಡಿದ್ದೆವೆ ನಾವುಗಳು ನಮ್ಮ ಪಕ್ಷದ ನಮ್ಮ ನಾಯಕರ ಮಾತಿಗೆ ಬೆಲೆಕೊಟ್ಟು ದುಡಿಯುತ್ತಿದ್ದೆವೆ .ನಮ್ಮ ಪಕ್ಷದ ಮುಖಂಡರ ಬಾಯಿ ಚಪಲದಿಂದ ಇಂತ ಮಾತನಾಡಿರಬಹುದು ಇದರಿಂದ ಕಾರ್ಯಕರ್ತರು ಗೊಂದಲಕ್ಕಿಡಾಗಬಾರದು ಎಂದರು .
ಇದೇ ಸಮಯದಲ್ಲಿ ಹಿರಿಯ ಮುಖಂಡರಾದ ಪುಟ್ಟರಾಜು ಮಾತಾನಾಡಿ ಚಾಮರಾಜನಗರ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ವಿಶೇಷವಾಗಿರುವ ಕ್ಷೇತ್ರ ಹನೂರು ವಿಧಾನಸಭಾ ಕ್ಷೇತ್ರ ಇಲ್ಲಿ ನಮ್ಮ ಕಾಂಗ್ರೆಸ್ ಪಕ್ಷ ಸುಭದ್ರವಾಗಿದೆ , ಮಾದೆವಪ್ಪರ ಉದ್ದೇಶ ನಮಗೆ ಗೊತ್ತಿಲ್ಲ ನಮ್ಮಗೊಬ್ಬರೆ ನಾಯಕರು ಅವರೆ ನರೇಂದ್ರ ಅವರು ಸೋತರು ಗೆದ್ದರು ಕೆಲಸ ಮಾಡುತ್ತಾರೆ ಅನ್ಯ ಕ್ಷೇತ್ರದ ನಾಯಕರ ಹೇಳಿಕೆಗಳಿಗೆ ಬೆಲೆಕೊಡುವ ಅವಶ್ಯಕತೆ ನಮಗಿಲ್ಲ ಎಂದು ತಿಳಿಸಿದರು.
ಹನೂರು ಪಟ್ಟಣ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ
ಗಿರೀಶ್ ಮಾತನಾಡಿ ಸಚಿವರಾದ ಅವರು ನಮ್ಮ ಕ್ಷೇತ್ರದ ಮಾಜಿ ಶಾಸಕರಿಗೆ ಮನ್ನಣೆ ನೀಡಬೇಕು ನಮ್ಮ ಶಾಸಕರನ್ನು ಮುಂದಿನ ದಿನಗಳಲ್ಲಿ ಅತಿಹೆಚ್ಚು ಮತಗಳ ಅಂತರದಿಂದ ಗೆಲ್ಲಿಸಲು ನಮಗೆ ಗೊತ್ತಿದೆ ಸಚಿವರು ಮೊದಲು ನಮ್ಮ ನಾಯಕರ ಮಾತಿಗೆ ಮಾನ್ಯತೆ ನೀಡಬೇಕು ಸಚಿವರಾದವರು ಹೇಳಿಕೆ ನೀಡುವಾಗ ಜವಬ್ದಾರಿಯಿಂದ ವರ್ತಿಸಬೇಕು ಯಾವುದೇ ತಿರ್ಮಾನ ಮಾಡಬೇಕಾದರೆ ಸ್ಥಳಿಯರ ಭಾವನೆಗೆ ಸ್ಪಂದಿಸುವ ಕಾರ್ಯಮಾಡಬೇಕು ಇದೇ ಪವೃತ್ತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಹೋರಾಟ ಮಾಡಬೇಕಾಗುತ್ತದೆ .
ಮತ್ತೋರ್ವ ಪ ಪ ಮಾಜಿ ಉಪಾದ್ಯಕ್ಷರಾದ
ಹರೀಶ್ ಮಾತನಾಡಿ ಪಕ್ಷದ ನಾಯಕರಾದಯಾಗಿ ನಾವು ಸಿದ್ದಾಂತ ಬದ್ದವಾಗಿ ಕಾರ್ಯನಿರ್ವಹಿಸುವವರು . ಎನ್ ಡಿ ಎ ಒಕ್ಕೂಟದ ಸದಸ್ಯರು ನಮಗೆ ಅವಶ್ಯಕತೆ ಇರುವುದಿಲ್ಲ ಸಚಿವರು ಇಂತಹ ಹೆಳಿಕೆ ನೀಡುವ ಜವಾಬ್ದಾರಿಯಿಂದ ವರ್ತಿಸಬೇಕು . ಕಳೆದ ಭಾರಿಯು ನಮಗೆ ಹೆಚ್ಚು ಲೀಡ್ ಬಂತು ದೃವನಾರಯಣ್ ಇದ್ದರೆ ಬಹಳ ಸದುಪಯೋಗವಾಗುತ್ತಿತ್ತು ,ಪಕ್ಷ ನಿಷ್ಟೆಗೆ ಮತ್ತೊಂದು ಹೆಸರೆ ನರೇಂದ್ರರವರ ಕುಟುಂಬ ಕ್ಷೇತ್ರದಲ್ಲಿ ಇವರ ಮನೆತನಕ್ಕೆ ತನ್ನದೆಯಾದ ಹೆಸರಿದೆ ,ವರಿಷ್ಠರು ಹೇಳಿಕೆ ನೀಡುವ ಸಮಯದಲ್ಲಿ ಸ್ಥಳಿಯ ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಬೇಕು ಸಿದ್ದರಾಮಯ್ಯರ ನೇತೃತ್ವದಲ್ಲಿ ಸರ್ಕಾರ ಜನರಿಗೆ ಉತ್ತಮ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿವೃದ್ಧಿಯಾಗುತ್ತದೆ ,ನಮ್ಮ ಹನೂರು ವಿಧಾನಸಭಾ ಕ್ಷೇತ್ರದ ಸಮಸ್ಯೆಗಳ ಅಭಿವೃದ್ಧಿಗೆ ಹೆಚ್ವಿನ ಮಾನ್ಯತೆ ಕೊಟ್ಟು ಕಾರ್ಯಕರ್ತರನ್ನು ಮುಖ್ಯವಾಹಿನಿ ತರುವ ಕೆಲಸವಾಗಲಿ ಅಧಿಕಾರ ಯಾರಿಗೂ ಶಾಸ್ವತವಿಲ್ಲ ಎಂದರು .
ಇದೇ ಸಮಯದಲ್ಲಿ ಪೆದ್ದನ ಪಾಳ್ಯ ಮಣಿ ಯವರು ಮಾತನಾಡಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಹೆಚ್ ಸಿ ಮಹದೆವಪ್ಪ ಮಾತನಾಡಿರುವುದು ಬಹಳ ಬೇಸರದ ಸಂಗಾತಿಯಾಗಿದೆ ಮಹದೇವಪ್ಪ ಪ್ರತಿನಿಧಿಸುವ ಟಿ ನರಸಿಪುರ ಕ್ಷೇತ್ರದಲ್ಲಿ ಕಳೆದ ಬಾರಿ ಸೋತಿದ್ದರು ಆದರೆ ಅಂದಿನ ಶಾಸಕರಾದ ಅಶ್ವಿನ್ ಕುಮಾರ್ ರವರನ್ನು ನಮ್ಮ ನಾಯಕರಾರು ಪಕ್ಷಕ್ಕೆ ಕರೆಯಲಿಲ್ಲ ಸಚಿವರಾದವರು ಘನತೆಯಿಂದ ಬಹಳ ಯೋಚನ ಶಕ್ತಿಯಿಂದ ಮಾತನಾಡಬೇಕು ಇದೆ ಪ್ರವೃತ್ತಿ ಮುಂದುವರಿದರೆ ನಮ್ಮ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಯಾರೆ ಆದರು ಯಾವುದೇ ವ್ಯಕ್ತಿಯ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಚಾಮುಲ್ ನಿರ್ದೇಕರುಗಳಾದ ಶಾಹುಲ್ ಅಹ್ಮದ್ . ಮಧುವನಳ್ಳಿ ನಂಜುಂಡಸ್ವಾಮಿ , ಹಿರಿಯ ಮುಖಂಡರಾದ ಲೊಕ್ಕನಳ್ಳಿ ಸಾಹುಕಾರ್ ವಿಷ್ಣುಕುಮಾರ್ , ಪಟ್ಟಣ ಪಂಚಾಯಿತಿಯ ಮಾಜಿ ಉಪಾಧ್ಯಕ್ಷರುಗಳಾದ ,ಮಾದೇಶ್ , ಬಸವರಾಜು .ಪ ಪ ಸದಸ್ಯರಾದ. ಸುದೇಶ್ .ನಟರಾಜೆಗೌಡರು,ಪಿಯಾಪ್ಪ ,ನಾಗಣ್ಣ , ಯುವ ಮುಖಂಡರಾದ ಚೇತನ್ ದೊರೈರಾಜು ಸೇರಿದಂತೆ ಇನ್ನಿತರರು ಹಾಜರಿದ್ದರು .