Read the words that Siddaramaullah Khan gave to Basava Nadi.
ಇವನಾರವನೆಂದೆನಿಸದಿರಯ್ಯಾ.
ಇವನಮ್ಮವ, ಇವನಮ್ಮವ, ಇವನಮ್ಮವನೆಂದೆನಿಸಯ್ಯಾ.
ಕೂಡಲಸಂಗಮದೇವಾ
ನಿಮ್ಮ ಮನೆಯ ಮಗನೆಂದೆನಿಸಯ್ಯಾ.
ಹಿಂದುಳಿದ ಸಮುದಾಯದಲ್ಲಿ ಹುಟ್ಟಿ ಬಸವಣ್ಣನನ್ನೇ ತನ್ನ ರಾಜಕೀಯ ನಾಯಕನನ್ನಾಗಿ ಮಾಡಿಕೊಂಡು ಎಷ್ಟೇ ವಿರೋಧವಿದ್ದರೂ, ಪಕ್ಷ ಅಧಿಕಾರ ಕಳೆದುಕೊಂಡರು ತಾನು ನಂಬಿದ ಬಸವಾದಿ ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯನ್ನು ರಾಜ್ಯದ ಆಡಳಿತದಲ್ಲಿ ಜಾರಿಗೆ ತಂದ ಅಪರೂಪದ ಮುಖ್ಯಮಂತ್ರಿ ಶ್ರೀ. ಸಿದ್ಧರಾಮಯ್ಯನವರು, ಬಸವಣ್ಣನ ಮತ್ತು ಶರಣರ ಕುರಿತು ಅವರಿಗಿರುವ ಬದ್ಧತೆ, ಶ್ರದ್ಧೆ, ಪ್ರಾಮಾಣಿಕತೆ ಪ್ರಶ್ನನಾತೀತ.
ಅವರನ್ನ ತೇಜೋವಧೆ ಮಾಡಲೆಂದು ಹಗಲಿರುಳು ಶ್ರಮಿಸಿದವರಿಗಾಗಿ ಇಲ್ಲೊಬ್ಬರು ಉತ್ತರಿಸಿದ್ದು ಹೀಗೆ..
ಇದೇ ಸಿದ್ಧರಾಮುಲ್ಲಾ ಖಾನ್
ಬಸವಜಯಂತಿ ದಿವಸ ಪ್ರಮಾಣ ವಚನ ಸ್ವೀಕರಿಸಿದರು.
ಇದೇ ಸಿದ್ಧರಾಮುಲ್ಲಾ ಖಾನ್ ಸರ್ಕಾರಿ ಕಛೇರಿಯಲ್ಲಿ ಬಸವಣ್ಣನವರ ಭಾವ ಚಿತ್ರ ಕಡ್ಡಾಯ ಮಾಡಿದರು.
ಇದೇ ಸಿದ್ಧರಾಮುಲ್ಲಾ ಖಾನ್ ಲಿಂಗಾಯತ ಧರ್ಮಕ್ಕೆ ಶಿಫಾರಸ್ಸು ಮಾಡಿದವರು.
ಇದೇ ಸಿದ್ಧರಾಮುಲ್ಲಾ ಖಾನ್ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಅಂತ ಘೋಷಣೆ ಮಾಡಿದ್ದು.
ಇದೇ ಸಿದ್ಧರಾಮುಲ್ಲಾ ಖಾನ್ ವಚನ ವಿಶ್ವವಿದ್ಯಾಲಯ ಸ್ಥಾಪನೆಗೆ ನಿರ್ಧಾರ ಮಾಡಿದವರು.
ಇದೇ ಸಿದ್ಧರಾಮುಲ್ಲಾ ಖಾನ್ ಬಿಜಾಪುರ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕ ಮಹಾದೇವಿ ಅವರ ಹೆಸರನ್ನು ನಾಮಕರಣ ಮಾಡಿದವರು.
ಇದೇ ಸಿದ್ಧರಾಮುಲ್ಲಾ ಖಾನ್
ಶಿವಮೊಗ್ಗದ ಉದ್ಯಾನವನಕ್ಕೆ ಅಲ್ಲಮಪ್ರಭು ಹೆಸರನ್ನು ನಾಮಕರಣ ಮಾಡಿದವರು.
ಇದೇ ಸಿದ್ಧರಾಮುಲ್ಲಾ ಖಾನ್ ಬಸವಣ್ಣನವರ ಅರಿವಿನ ಕೇಂದ್ರ ತೆರಿತಾ ಇರುವರು.
ಇದೇ ಸಿದ್ಧರಾಮುಲ್ಲಾ ಖಾನ್ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ರಾಜಕೀಯ ಗುರು ಅಂತ ಸ್ವೀಕರಿಸಿದವರು.
(ವಾಟ್ಸಪ್ ಮೂಲಕ ಸಂಗ್ರಹ).
)