Hope Light Foundation was inaugurated by former DCM, MLA Lakshmana Savadi of Athani

ಅಥಣಿ : ಪಟ್ಟಣದ ಸುಕ್ಷೇತ್ರ ಗಚ್ಚಿನಮಠದಲ್ಲಿ ಇಂದು ಆಯೋಜಿಸಿದ್ದ ಭರವಸೆ ಬೆಳಕು ಫೌಂಡೇಶನ್ ಅನ್ನು ಮಾಜಿ ಉಪಮುಖ್ಯಮಂತ್ರಿಗಳು, ಅಥಣಿ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಸನ್ಮಾನ್ಯ ಶ್ರೀ ಲಕ್ಷ್ಮಣ ಸಂ. ಸವದಿಯವರು ಉದ್ಘಾಟಿಸಿ ಮಾತನಾಡಿದರು. ಶ್ರೀಮತಿ ರೂಪಾ ಕಾಂಬಳೆಯವರು ಸ್ಥಾಪಿಸಿರುವ ಭರವಸೆ ಬೆಳಕು ಫೌಂಡೇಶನ್ ಹೆಸರಿಗೆ ತಕ್ಕಂತೆ ಸಮಾಜದಲ್ಲಿ ಭರವಸೆ ಬೆಳಕಾಗಿ ಕಾರ್ಯ ಮಾಡಲಿ. ಬಡವರು, ಹಿಂದುಳಿದವರ ಧ್ವನಿಯಾಗಿ, ಅವರಿಗೆ ಆಸರೆಯಾಗಿ ಸೇವೆ ಸಲ್ಲಿಸುವಂತಾಗಲಿ ಎಂದು ಆಶಿಸಿದರು.
ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿಯವರು ಸಾನ್ನಿಧ್ಯ ವಹಿಸಿದ್ದರು. ಅಥಣಿಯ ಭರವಸೆ ಬೆಳಕು ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ರೂಪಾ ಕಾಂಬಳೆ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ರಾಮನಗೌಡ ಪಾಟೀಲ, ಫರೀದ ಅವಟಿ, ದುಂಡಪ್ಪಾ ಪಡಸಲಗಿ, ರಮೇಶ ಹರಿಜನ, ಸುಶಾಂತ ಪಟ್ಟಣ, ರಾವಸಾಬ ಕಾಂಬಳೆ, ಶ್ರೀಮತಿ ರೇಖಾ ಪಾಟೀಲ, ಶ್ರೀಮತಿ ವಿದ್ಯಾ ಹಿರೇಮಠ, ಶ್ರೀಮತಿ ಕಲಾವತಿ ಕಿತ್ತೂರ , ಶ್ರೀಮತಿ ಸಂಗೀತಾ ಚನಗೌಡರ, ಶ್ರೀಮತಿ ಜಯಶ್ರೀ ಸೂರ್ಯವಂಶಿ, ಶ್ರೀಮತಿ ವೇದಾ ಪಟ್ಟಣ ಸೇರಿದಂತೆ ಮತ್ತಿತರ ಗಣ್ಯಮಾನ್ಯರು ವೇದಿಕೆ ಮೇಲೆ ಉಪಸ್ಥಿತರಿದ್ದರು. ವಿವಿಧ ಕ್ಷೇತ್ರದಲ್ಲಿನ ಸಾಧಕರು, ಪತ್ರಕರ್ತರನ್ನು ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಶ್ರೀ ವಿಜಯ ಹುದ್ದಾರ ಅವರು ಕಾರ್ಯಕ್ರಮ ನಿರ್ವಹಿಸಿದರು.