Breaking News

ಸಕ್ಕರೆ ಕಾರ್ಖಾನೆಯ ವಿರೋಧಿಯಲ್ಲ, ಡಿಸ್ಟಿಲರಿಮತ್ತುಎಥನಾಲ್ ಘಟಕಗಳ ಅಂತಹ ನಿರ್ಮಾಣಕ್ಕೆ ನಮ್ಮ ವಿರೋಧ

Our opposition to such construction of distillery and ethanol plants is not against sugar factories

ಜಾಹೀರಾತು

ಕೆ.ಆರ್.ಪೇಟೆ: ತಾಲೂಕು ರೈತ ಸಂಘ ಎಂದಿಗೂ ಮಾಕವಳ್ಳಿ ಕೋರಮಂಡಲ ಸಕ್ಕರೆ ಕಾರ್ಖಾನೆಯ ವಿರೋಧಿಯಲ್ಲ, ಕಾರ್ಖಾನೆಯಿಂದ ಪರಿಸರ ಮತ್ತು ಸಾರ್ವಜನಿಕರಿಗೆ ಮಾರಕವಾಗುವ ಡಿಸ್ಟಿಲರಿ ಮತ್ತು ಎಥನಾಲ್ ಘಟಕಗಳ ಅಂತಹ ನಿರ್ಮಾಣಕ್ಕೆ ನಮ್ಮ ವಿರೋಧ ಎಂದು ತಾಲೂಕು ರೈತ ಸಂಘ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕೆಲ ವ್ಯಕ್ತಿಗಳು ಮುಗ್ಧ ರೈತರಿಗೆ ತಾಲೂಕು ರೈತ ಸಂಘ ಕಾರ್ಖಾನೆ ವಿರೋಧಿಗಳು ಎನ್ನುವ ಹಾಗೆ ಬಿಂಬಿಸಲು ಹೊರಟಿದ್ದಾರೆ ಆದರೆ ಎಂದಿಗೂ ತಾಲೂಕು ರೈತ ಸಂಘ ತಾಲೂಕು ರೈತಪಿ ವರ್ಗಕ್ಕಾಗಿ ಮತ್ತು ಪರಿಸರ ಮತ್ತು ಸದೃಢ ಸಮಾಜ ಉಳಿವಿಗಾಗಿ ದಶಕಗಳಿಂದ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಿದೆ ಎಂದು ತಾಲೂಕಿನ ಜನತೆಗೆ ತಿಳಿದಿದೆ.ಆ ಮಾದರಿಯಲ್ಲೆ ತಾಲೂಕಿನ ಹೇಮಾವತಿ ನದಿ ಸಮೀಪವಿರುವ ಪ್ರಸ್ತುತವಿರುವ ಕೋರಮಂಡಲ ಸಕ್ಕರೆ ಕಾರ್ಖಾನೆ ಸ್ಥಾಪನೆಯಾದ 2001ನೇ ಸಾಲಿನಿಂದ ಇದುವರೆಗೂ ಚಿಮಣಿಯಿಂದ ಹಾರು ಬೂದಿಯನ್ನು ತಡೆಗಟ್ಟದಿರುವ ಮತ್ತು ಕಲುಷಿತ ನೀರನ್ನು ಹೇಮಾವತಿ ನದಿ ಮತ್ತು ನಾಲೆಗೆ ಬಿಟ್ಟು ಕಲ್ಮಷಗೊಳಿಸಿ ಪರಿಸರ ಮತ್ತು ಸಾರ್ವಜನಿಕ ಜೀವನದ ಜೊತೆ ಚೆಲ್ಲಾಟವಾಡುತ್ತಿರುವ ಕಾರ್ಖಾನೆಯ ಇಂತಹ ಅಪಾಯಕಾರಿ ಘಟಕವನ್ನು ಸರ್ಕಾರದ ನಿಯಮಾವಳಿಯನ್ನು ಗಾಳಿಗೆ ತೂರಿ ಗ್ರಾಮೀಣ ಪ್ರದೇಶದ ಹೃದಯ ಭಾಗದಲ್ಲಿ ನಿರ್ಮಾಣವಾದರೆ ಗ್ರಾಮೀಣ ಪ್ರದೇಶ ಬಡ ರೈತಾಪಿವರ್ಗ ಬದುಕಲು ಸಾಧ್ಯವೇ…? ಎಂದು ಹರಿತು ರೈತಾಪಿ ವರ್ಗ ಮತ್ತು ಸದೃಢ ಸಮಾಜದ ಉಳಿವಿಗಾಗಿ ಹೋರಾಟ ನಡೆಸುತ್ತಾ ಬಂದಿದೆ ಹೊರತು ಬೇರೆ ದುರುದ್ದೇಶದಿಂದಲ್ಲ.ಕೆಲ ಸ್ವಾರ್ಥಿ ವ್ಯಕ್ತಿಗಳ ಮಾತಿಗೆ ಮತ್ತು ಹೋರಾಟದ ಹಾದಿಯನ್ನು ಹತ್ತಿಕ್ಕಲು ಅಪಪ್ರಚಾರ ಮಾಡುವವರಿಗೆ ಮುಂದೊಂದು ದಿನ ತಕ್ಕ ಉತ್ತರ ಸಿಗಲಿದೆ.ತಾಲೂಕು ರೈತ ಸಂಘದ ಬಗ್ಗೆ ಮಾತನಾಡುವ ಕೆಲ ವ್ಯಕ್ತಿಗಳಿಗೆ ನೈತಿಕತೆ ಹಕ್ಕು ಇಲ್ಲ ಏಕೆಂದರೆ ರೈತಪರ ಹೋರಾಟಗಾರರು ಅವರ ಸ್ವಾರ್ಥಕ್ಕೆ ಎಂದೂ ಹೋರಾಟ ನಡೆಸಿಲ್ಲ ಮತ್ತು ಹೋರಾಟ ಎಂಬ ಖಡ್ಗವನ್ನ ಮಾರಾಟಕ್ಕಿಟ್ಟಿಲ್ಲ ಎಂದು ಕೆಲ ವ್ಯಕ್ತಿಗಳು ಹರಿತುಕೊಳ್ಳಬೇಕು ಕಿಡಿಕಾರಿದರು.ಈಗಲೂ ಕಾರ್ಖಾನೆಗೆ ಕೊನೆಯ ಅವಕಾಶವಿದೆ ಪ್ರಸ್ತುತವಿರುವ ಕಾರ್ಖಾನೆ ಹೊರತುಪಡಿಸಿ ಉಳಿದ ಯಾವುದೇ ಸಾರ್ವಜನಿಕರಿಗೆ ಅಪಾಯಕಾರಿ ಉಂಟುಮಾಡುವ ಘಟಕಗಳ ನಿರ್ಮಾಣದ ಉದ್ದೇಶದಿಂದ ನಾಳೆ ಹಮ್ಮಿಕೊಂಡಿರುವ ಸಾರ್ವಜನಿಕ ಸಭೆಯನ್ನ ಕೂಡಲೆ ಕೈಬಿಡಬೇಕು. ಇಲ್ಲದಿದ್ದರೆ ಕೇವಲ ಮುಂದಿನ ದಿನಗಳಲ್ಲಿ ಕಾನೂನು ಮುಖೇನ ಮತ್ತು ಉಗ್ರವಾದ ಹೋರಾಟದ ಮೂಲಕ ತಕ್ಕ ಪಾಠ ಕಲಿಸಬೇಕಾಗುತ್ತದೆ ಎಂದು ಕಾರ್ಖಾನೆ ಆಡಳಿತ ಮಂಡಳಿಗೆ ತಾಲೂಕು ರೈತ ಸಂಘದ ಅಧ್ಯಕ್ಷ ಕಾರಿಗನಹಳ್ಳಿ ಪುಟ್ಟೇಗೌಡ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಿರಿಯ ರೈತ ಮುಖಂಡ ಸಿಂದಘಟ್ಟ ಮುದ್ದುಕುಮಾರ್, ಚೌಡೇನಹಳ್ಳಿ ಸ್ವಾಮೀಗೌಡ, ಕರೋಟಿ ತಮ್ಮಯ್ಯ, ಸುಬ್ರಮಣ್ಯ, ವಡ್ಡರಹಳ್ಳಿ ಪರಮೇಶ್, ಹುಚ್ಚೇಗೌಡ, ಕುಮಾರ್, ಜಗದೀಶ್, ಶಿವಕುಮಾರ್, ಶೆಟ್ಟಹಳ್ಳಿ ಕೃಷ್ಣೇಗೌಡ, ಬಣ್ಣೇನಹಳ್ಳಿ ನಾಗೇಶ್, ಕರೋಟಿ ಹರೀಶ್,ಕರೋಟಿ ನಂಜುಂಡೇಗೌಡ,ಅಕ್ಕಿ ಮಂಚನಹಳ್ಳಿ ಹೊನ್ನೇಗೌಡ,ದಿನೇಶ್, ದೇವರಾಜು, ಪ್ರಭಾಕರ್, ಹೆಗ್ಗಡಹಳ್ಳಿ ಚೇತನ್, ಸಣ್ಣಯ್ಯ, ಡೈರಿ ಕುಮಾರ್, ಆರ್ ಎಸ್ ಮಂಜು, ಅಶೋಕ್, ಸೇರಿದಂತೆ ಉಪಸ್ಥಿತರಿದ್ದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.