Chiranjeevi elected as Chamarajanagar District BJP Youth Morcha District Secretary.

ವರದಿ : ಬಂಗಾರಪ್ಪ ಸಿ
ಹನೂರು: ಬಿಜೆಪಿ ಜಿಲ್ಲಾ ಯುವ ಮೋರ್ಚಾದ ಜಿಲ್ಲಾ ಕಾರ್ಯದರ್ಶಿಯಾಗಿ ಮಲೆ ಮಹದೇಶ್ವರ ಬೆಟ್ಟದ ಯುವಕ ಚಿರಂಜೀವಿಯವರನ್ನು ನೇಮಕ ಮಾಡಿ ಜಿಲ್ಲಾಧ್ಯಕ್ಷ ಸಿಬಿ ಸೂರ್ಯ ಕುಮಾರ್ ಆದೇಶ ಹೊರಡಿಸಿದ್ದಾರೆ.
ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದ ನಿವಾಸಿ ಚಿರಂಜೀವಿ ಮಾತನಾಡಿ ಬಿಜೆಪಿ ಪಕ್ಷದಲ್ಲಿನ ನಮ್ಮ ಕಾರ್ಯವನ್ನು ಗುರುತಿಸಿ ಪಕ್ಷದ ಹಿತ ದೃಷ್ಟಿಯಿಂದ ಜಿಲ್ಲಾಧ್ಯಕ್ಷ ನಿರಂಜನ್ ಕುಮಾರ್ ಅವರ ಆದೇಶದ ಮೇಲೆ ನೇಮಕ ಮಾಡಲಾಗಿದೆ.ನಮಗೆ ಪಕ್ಷ ನಮಗೆ ಪಕ್ಷ ನೀಡಿರುವ ಕೆಲಸವನ್ನು ಪ್ರಾಮಾಣಿಕವಾಗಿ ನಿರ್ವಹಿಸುವ ಹೋಣೆ ನನ್ನದಾಗಿದೆ ನಮ್ಮಂತಹ ಯುವ ಕಾರ್ಯಕರ್ತರನ್ನು ಗುರುತಿಸಿ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವುದು ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಒತ್ತು ನೀಡಿ ಪಕ್ಷವನ್ನು ಬೆಳೆಸಲು ಶ್ರಮವಹಿಸುತ್ತೇನೆ. ನನ್ನ ನೇಮಕಕ್ಕೆ ಕಾರಣವಾದ ಹಿಂದುಳಿದ ವರ್ಗಗಳ ಮೋರ್ಚಾದ ಅಧ್ಯಕ್ಷ ಜನ ಧ್ವನಿ ಬಿ ವೆಂಕಟೇಶ್ ರವರಿಗೆ ಅಭಿನಂದನೆ ಸಲ್ಲಿಸುತ್ತೆನೆ ಎಂದರು.