K.Hosahalli Pulse Polio Programme
ಸಿಂಧನೂರು ತಾಲೂಕಿನ ಕೆ.ಹೊಸಹಳ್ಳಿ ಗ್ರಾಮದ 1ನೇ ವಾರ್ಡ ಅಂಗನವಾಡಿ ಕೇಂದ್ರದಲ್ಲಿ ಪಲ್ಸ್ ಪೋಲಿಯೊ ಕಾರ್ಯಕ್ರಮ ನಡೆಯಿತು.
ಈ ಕಾರ್ಯಕ್ರಮವನ್ನು ಪೋಲಿಯೋ ಹನಿ ಹಾಕುವ ಮೂಲಕ ಉದ್ಘಾಟಿಸಿದ ವನಸಿರಿ ಫೌಂಡೇಶನ್ ಜಾಲತಾಣದ ಅದ್ಯಕ್ಷರಾದ ಚನ್ನಪ್ಪ ವಿಶ್ವಕರ್ಮ ಮಾತನಾಡಿ 0 ದಿಂದ 5 ವರ್ಷಗಳೊಳಗಿನ ಎಲ್ಲಾ ಮಕ್ಕಳಿಗೆ ಎರಡು ಹನಿ ಪೋಲಿಯೊ ಹಾಕಲಾಗುತ್ತದೆ
ಶಾಶ್ವತ ಅಂವಿಕಲತೆಯನ್ನು ತರಬಲ್ಲ ಪೋಲಿಯೊವನ್ನು ಲಸಿಕೆ ಮೂಲಕ ಪ್ರತಿರೋಧಿಸೋಣ ಭಾರತವು ಪೋಲಿಯೊ ಮುಕ್ತ ದೇಶವಾಗಿದೆ.ಆದರೆ ಕೆಲವು ದೇಶಗಳಲ್ಲಿ ಪೋಲಿಯೊ ಇನ್ನೂ ಭೀತಿಯನ್ನುಂಟು ಮಾಡಿದ್ದು ನಮ್ಮ ದೇಶದಲ್ಲೂ ಮರುಕಳಿಸುವ ಸಾಧ್ಯತೆಗಳಿವೆ ಪ್ರತಿ ಭಾರಿ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸಿ ಮಗುವಿನ ಸಂಪೂರ್ಣ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಾರ ಪೋಲಿಯೊ ಲಸಿಕೆ ಕಾರ್ಯಕ್ರಮವನ್ನು ಪ್ರತಿಯೊಂದು ಅಂಗನವಾಡಿ ಕೇಂದ್ರಗಳಲ್ಲಿ ಹಮ್ಮಿಕೊಳ್ಳಲಾಗಿದೆ ಪಾಲಕರು ಹಾಗೂ ಪೋಷಕರು ಇದರ ಸದುಪಯೋಗವನ್ನು ಪ್ರತಿ ಮಗುವಿಗು ತಲುಪುವಂತಾಗಬೇಕು.
ಇದೇ ಸಂದರ್ಭದಲ್ಲಿ ತಾಲೂಕ ಆರೋಗ್ಯ ಅಧಿಕಾರಿ ಅಯ್ಯನಗೌಡ ಅವರು ಭೇಟಿ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರಾದ ದೊಡ್ಡಪ್ಪ,ಸುರೇಶ,ಹುಸೇನ್ ಸಾಬ್,ಛತ್ರಪ್ಪ,ಪರ್ವಿನ್,ಕಲ್ಲನಗೌಡ ಹಾಗೂ ಹಳೆಯ ವಿದ್ಯಾರ್ಥಿಗಳ ಸಂಘದ ಸದಸ್ಯರಾದ ಬಸವರಾಜ ಹಳೆಮನಿ,ಅಂಗನವಾಡಿ ಕಾರ್ಯಕರ್ತೆಯರಾದ ರಂಜಾನಬೀ,ಶಂಕ್ರಮ್ಮ, ಮಗ್ಗೆಮ್ಮ,ಸುನಿತಾ,ಹಾಗೂ ಆಶಾಕಾರ್ಯಕರ್ತೆಯರಾದ ದೇವಮ್ಮ,ಹನುಮಂತಮ್ಮ ಹಾಗೂ ಗ್ರಾಮ ಪಂಚಾಯತಿ ಸದಸ್ಯರು,ಸಿಬ್ಬಂದಿಗಳು ಊರಿನ ಹಿರಿಯರು ಮಹಿಳೆಯರಿದ್ದರು.