Breaking News

ರಾಮನಗರ ಜಿಲ್ಲೆಯ ಭಕ್ತರು ಕನಕಪುರ ಸಂಗಮದ ಕಾವೇರಿ ನದಿ ತೀರದಲ್ಲಿ ಮಾದಪ್ಪನ ಪಾದಯಾತ್ರೆ :ಸಾಲೂರು ಶ್ರೀ ಗಳು ಪರಿಶೀಲನೆ ಭಕ್ತರಲ್ಲಿ ಸಂತೋಷ

Devotees of Ramanagara district Madappa’s padayatra on the banks of Kaveri river at Kanakapura confluence: Saluru Sri Slu Prakriti is happiness among devotees

ಜಾಹೀರಾತು


ವರದಿ : ಬಂಗಾರಪ್ಪ ಸಿ .
ಹನೂರು : ಮಹಾ ಶಿವರಾತ್ರಿ ಹಬ್ಬದ ಪ್ರಯುಕ್ತ ದೂರದ ಊರುಗಳಿಂದ ಕಾಲ್ನೆಡಿಗೆಯಲ್ಲಿ ಬರುತ್ತಿರುವ ಮಲೆ ಮಹದೇಶ್ವರ ಭಕ್ತಾಧಿಗಳಿಗೆ ಸಾಲೂರು ಶ್ರೀಗಳಾದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದರ್ಶನ ನೀಡಿ ಆರ್ಶೀವಾದ ಮಾಡಿದ ಘಟನೆಯು ಕಾವೇರಿ ನದಿ ತೀರದಲ್ಲಿ ನಡೆದಿದೆ .
ಕಾವೇರಿ ನದಿ ತೀರದ ಬಸವನಕಡ ಹಾಗೂ ಸಂಗಮದಲ್ಲಿ ಮಾದಪ್ಪನ ಭಕ್ತ ಸೋಗಿನಲ್ಲಿ ನಡೆದು ಎರಡು ಜಿಲ್ಲೆಯ ಅಧಿಕಾರಿಗಳು ಮಾಡಿರುವ ವ್ಯವಸ್ಥೆಯನ್ನು ಪರಿಶೀಲನೆ ಮಾಡಿದ ನಂತರ ಮಾತನಾಡಿದ ಅವರು ನಮ್ಮ ಸುತ್ತಮುತ್ತಲಿನ
ಪ್ರಕೃತಿಯು ಪ್ರತಿಯೊಬ್ಬ ಮನುಷ್ಯನ ಅಗತ್ಯಗಳನ್ನು
ಪೂರೈಸುತ್ತದೆ ಅದರಂತೆ “ಭೂಮಿಯು ಸುಂದರವಾದ ವಧುವಿನಂತೆ, ಅವಳ ಸೌಂದರ್ಯವನ್ನು ಹೆಚ್ಚಿಸಲು ಯಾವುದೇ ಮಾನವ ನಿರ್ಮಿತ
ಆಭರಣಗಳ ಅಗತ್ಯವಿಲ್ಲ ಆದ್ದರಿಂದ ಮನುಷ್ಯರಾದ ನಾವುಗಳು ಪ್ರಕೃತಿಯನ್ನು ಆರಾಧಿಸಬೇಕು, ಪೂಜಿಸಬೇಕು, ಸಂರಕ್ಷಣೆ ಮಾಡುವುದು ನಮ್ಮೇಲ್ಲರ ಕರ್ತವ್ಯ ಮಲೆ ಮಹದೇಶ್ವರರ ಸನ್ನಿಧಾನಕ್ಕೆ ಲಕ್ಷಾಂತರ ಭಕ್ತರು ಪಾದಯಾತ್ರೆಯಲ್ಲಿ ಬರುತ್ತಿದ್ದಾರೆ ಪಾದಯಾತ್ರೆ ಮಾಡುವ ಮಾರ್ಗವೆಲ್ಲವೂ ಬೆಟ್ಟ ಗುಡ್ಡಗಳು ಅರಣ್ಯ, ಪ್ರದೇಶದ ನದಿಯಿಂದ ಆವೃತ್ತವಾಗಿದೆ ನಮ್ಮ ಅದನ್ನು ಸಂರಕ್ಷಿಸ ಹೋಣೆಯು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು .ಹಾಗೆಯೇ ಮಾದಪ್ಪನ ಸನ್ನಿದಾನಕ್ಕೆ ಬರುವ ಭಕ್ತಾಧಿಗಳು ಸಮಯ ಸರಿಯಾಗಿ ಆಹಾರ ಪದಾರ್ಥಗಳನ್ನು ಸೇವಿಸಿದ ನಂತರ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಬಿಸಾಡದೆ ಒಂದೆಡೆ ಹಾಕಿ ಸ್ವಚ್ಛತೆಯನ್ನು ಕಾಪಾಡಿಬೇಕು . ಈ ಸಲವು ಚಾಮರಾಜನಗರ ಮತ್ತು ರಾಮನಗರ ಜಿಲ್ಲಾಡಳಿತದ ಅರಣ್ಯ ಇಲಾಖೆಗಳು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದು ಭಕ್ತರಿಗೆ ಅನುಕೂಲವಾಗುವಂತೆ ವ್ಯವಸ್ಥೆ ಮಾಡಿರುವುದು ಶ್ಲಾಘನೀಯ, ಕನಕಪುರದ ಮಹದೇವನಾಯ್ಕ ಹಾಗೂ ಅನೇಕ ಭಕ್ತರ ಅಲ್ಲಲ್ಲಿ ದಾಸೋಹ ಮಜ್ಜಿಗೆ ಪಾನಕ ವ್ಯವಸ್ಥೆಯು ಅಚ್ಚುಕಟ್ಟಾಗಿ ಮಾಡುತ್ತಿದ್ದು ಪಾದಯಾತ್ರೆಯಲ್ಲಿ ಬರುವ ಭಕ್ತಾದಿಗಳಿಗೆ ಪ್ರಾಧಿಕಾರವತಿಂದ ವಿಶೇಷ ದರ್ಶನ ವ್ಯವಸ್ಥೆ ಮಾಡಿರುವುದು ಸಂತೊಷವಾಗಿದೆ ಇದೇ ರೀತಿಯಲ್ಲಿ ಶ್ರೀ ಸ್ವಾಮಿಯ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಾರೆ ಯಾರಿಗಾದರು ತೊಂದರೆಯಾದರೆ ಸರ್ಕಾರ ಹಾಗೂ ನಮ್ಮ ಮಠದ ವತಿಯಿಂದ ಸದಾ ಕಾಲ ನಿಮ್ಮ ಜೊತೆಯಲ್ಲಿ ಇರುತ್ತೆವೆ ಎಂದು ಶ್ರೀ ಗಳು ತಿಳಿಸಿದರು.

About Mallikarjun

Check Also

ಸುಳ್ವಾಡಿ ವಿಷ ಪ್ರಸಾದ ಪ್ರಕರಣ ಸಾವಿಗೆ ಕಾರಣರಾದ :ಇಮ್ಮಡಿ ಮಹದೇವಸ್ವಾಮಿ ಜಾಮೀನು ಅರ್ಜಿ ಮತ್ತೆ ವಜಾ.

Sulvadi Visha Prasad case: Cause of death: Immadi Mahadevaswamy’s bail application dismissed again. ವರದಿ : …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.