Award presentation to Veerappa Ningoji by Kasapa
ಯಲಬುರ್ಗಾ—ಕೊಪ್ಪಳ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರು ಹಾಗೂ ತಾಲೂಕಿನ ಕರಮುಡಿ ಗ್ರಾಮದ ಹಿರಿಯ ಸಾಹಿತಿಗಳಾದ ವೀರಪ್ಪ ಮಲ್ಲಪ್ಪ ನಿಂಗೋಜಿ ರವರು 2022 ರಲ್ಲಿ ಪ್ರಕಟಿಸಿದ ” ಕರವೀರನ ಶಾಯಿರಿಗಳು” ಎಂಬ ಕ್ರತಿಗೆ ಕನ್ನಡ ಸಾಹಿತ್ಯ ಪರಿಷತ್ತು ಕೊಡ ಮಾಡುವ ಪ್ರತಿಷ್ಠಿತ ನಾ.ಕು. ಗಣೇಶ ದತ್ತಿ ಪ್ರಶಸ್ತಿ ಪ್ರದಾನ ಸಮಾರಂಭವು ರವಿವಾರ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ರಾಜ್ಯ ಲೋಕಾಯುಕ್ತರಾದ ಬಿ.ಎಸ್.ಪಾಟೀಲ ಹಾಗೂ
ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾಡೋಜ ಡಾ.ಮಹೇಶ ಜೋಶಿರವರು ನಿಂಗೋಜಿ ರವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ನಿವ್ರತ್ತ ಉಪಕುಲಪತಿಗಳಾದ ಡಾ.ಎನ್.ಎಸ್.ರಾಮೇಗೌಡ ˌ ˌ ಕೆಂಗಲ್ ಹನುಮಂತಯ್ಯ ದತ್ತಿ ಪ್ರಶಸ್ತಿ ಪುರಸ್ಕ್ರತರಾದ ಡಾ.ವಿ.ಜಿ. ಜೋಸೆಫ್ ˌ ಡಾ.ಎಸ್.ಪಿ. ಯೋಗಣ್ಣ ˌ ಚಲನಚಿತ್ರಸಾಹಿತಿ ಡಾ.ನಾಗೇಂದ್ರ ಪ್ರಸಾದ ˌ ಗೌರವ ಕಾರ್ಯದರ್ಶಿಗಳಾದ ನೇ.ಭ.ರಾಮಲಿಂಗಶೆಟ್ಟಿ ˌ ಡಾ.ಪದ್ಮಿನಿ ನಾಗರಾಜು ˌ ಗೌರವ ಕೋಶಾಧ್ಯಕ್ಷರಾಬ ಬಿ.ಎಂ.ಪಟೇಲ್ ಪಾಂಡು ಹಾಗೂ ಇನ್ನೀತರರು ಈ ಸಂದರ್ಭದಲ್ಲಿ ಉಪಸ್ತಿತರಿದ್ದರು.
ಇದೇ ಸಂದರ್ಭದಲ್ಲಿ ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀ ಕ್ರಷ್ಣರಾಜ ಪರಿಷತ್ತಿನ ಮಂದಿರದಲ್ಲಿ ವಿವಿಧ ಪ್ರಕಾರಗಳಲ್ಲಿ ಸಾಧನೆಗೈದ 51 ಜನರಿಗೆ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಾತು.