Breaking News

ಭಾರತೀಯ ರಿಸರ್ವ್ ಬ್ಯಾಂಕ್ ನಾಗರೀಕರಲ್ಲಿ, ವಿದ್ಯಾರ್ಥಿಗಳಲ್ಲಿ ಆರ್ಥಿಕ, ಸಾಕ್ಷರತೆ ಮತ್ತುಶಿಕ್ಷಣಉತ್ತೇಜಿಸುವ ಗುರಿ ಹೊಂದಿದೆ

Reserve Bank of India aims to promote economic, literacy and education among citizens, students.

ಜಾಹೀರಾತು


ಗಂಗಾವತಿ,28:ಭಾರತೀಯ ರಿಸರ್ವ್ ಬ್ಯಾಂಕ್ ನಾಗರೀಕರಲ್ಲಿ, ವಿದ್ಯಾರ್ಥಿಗಳಲ್ಲಿ ಆರ್ಥಿಕ, ಸಾಕ್ಷರತೆ ಮತ್ತು ಶಿಕ್ಷಣವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ ಎಂದು ಕೊಪ್ಪಳ ಲೀಡ್ ಡಿಸ್ಟ್ರಿಕ್ಟ್ ಮ್ಯಾನೇಜರ್ ಕೆ ಎಂ. ವೀರೇಂದ್ರ ಕುಮಾರ್ ರವರು ಇಂದು ಗಂಗಾವತಿ ನಗರದ ಶ್ರೀ ಕೊಲ್ಲಿ ನಾಗೇಶ್ವರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದರು
ಭಾರತೀಯ ರಿಸರ್ವ್ ಬ್ಯಾಂಕ್ 2016 ರಿಂದ ಪ್ರತಿ ವರ್ಷ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದ್ದು, ಈ ವರ್ಷದ ಧ್ಯೇಯ ವಾಕ್ಯ* ಸರಿಯಾಗಿ ಪ್ರಾರಂಭಿಸಿ – ಆರ್ಥಿಕವಾಗಿ ಸ್ಮಾರ್ಟ್ ಆಗಿರಿ *ಎಂಬುದಾಗಿದೆ ಯುವ ವಯಸ್ಕರು ಮತ್ತು ವಿದ್ಯಾರ್ಥಿಗಳಲ್ಲಿ ಆರೋಗ್ಯಕರ ಆರ್ಥಿಕ ಅಭ್ಯಾಸಗಳನ್ನು ಬೆಳೆಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಿದರು
ಮುಂದುವರಿದ ಮಾತನಾಡುತ್ತಾ ವೀರೇಂದ್ರ ಕುಮಾರ್ ರವರು ವ್ಯಕ್ತಿಯ ಜೀವನದಲ್ಲಿ 18 ರಿಂದ 22 ರ ವಯೋಮಾನ ಬದುಕಿನ ಮಹತ್ವದ ಘಟ್ಟವಾಗಿದ್ದು, ಯುವ ಜನತೆ ಈ ಅವಧಿಯಲ್ಲಿ ಕಾಲಹರಣ ಮಾಡದೆ ಜ್ಞಾನಾರ್ಜನೆ ಪಡೆದು ಬದುಕನ್ನು ಸದೃಢವಾಗಿ ರೂಪಿಸಿಕೊಳ್ಳಬಹುದು ಎಂದು ವಿದ್ಯಾರ್ಥಿಗಳಿಗೆ ಕಿವ ಮಾತು ಹೇಳಿದರು
ಕಾರ್ಯಕ್ರಮದಲ್ಲಿ ಗಂಗಾವತಿ ಭಾರತೀಯ ಸ್ಟೇಟ್ ಬ್ಯಾಂಕ್ ನ ಆರ್ಥಿಕ ಸಾಕ್ಷರತಾ ಸಲಹೆಗಾರರಾದ ಟಿ ಆಂಜನೇಯವರು ಹಣಕಾಸು ಸಾಕ್ಷರತೆಯ ಉದ್ದೇಶ, ಆರ್. ಬಿ. ಐ ರೂಪಿಸಿದ ಹಲವು ಉತ್ತೇಜನ ಯೋಜನೆಗಳ ಕುರಿತು ಮತ್ತು ಉಳಿತಾಯ ,ಬಜೆಟ್ ,ಬ್ಯಾಂಕಿನ ಅಗತ್ಯಗಳು ಮತ್ತು ಸೈಬರ್ ಕ್ರೈಂ ಬಗ್ಗೆ ಜಾಗೃತಿ, ಡಿಜಿಟಲ್ ಬ್ಯಾಂಕಿಂಗ್, ಡಿಜಿಟಲ್ ಪೇಮೆಂಟ್ಸ್ ,ಆನ್ಲೈನ್ ಬ್ಯಾಂಕಿಂಗ್, ಮೊಬೈಲ್ ಬ್ಯಾಂಕಿಂಗ್, ಇನ್ನಿತರ ಡಿಜಿಟಲ್ ಯೋಜನೆಗಳ ಕುರಿತು ಮಾಹಿತಿ ನೀಡಿದರು.
ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸುತ್ತಿರುವ ಮತ್ತು ಕಾಲೇಜು ಪ್ರವೇಶಗಳನ್ನು ತೆಗೆದುಕೊಳ್ಳುವ ಹಾದಿಯಲ್ಲಿರುವ ಯುವ ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಲದದ ಬಗ್ಗೆ ಆರ್‌.ಬಿ.ಐ. ಯೋಜನೆಗಳನ್ನು ರೂಪಿಸಿದೆ ಎಂದು ತಿಳಿಸಿದರು
ಆರ್‌ಬಿಐ 2024ರ ಥೀಮ್ —ಕರೋ ಸಹಿ ಶುರುವಾತ್ – ಬನೋ ವಿತ್ತೀಯ ಸ್ಮಾರ್ಟ್*
ಈ ವರ್ಷದ ಘೋಷಣೆಯ ವಾಕ್ಯವಾಗಿದೆ ಎಂದು ತಿಳಿಸಿದರು
ವಿಶೇಷವಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ಸಪ್ತಾಹ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಚಿಂತಿಸುವ, ವಿಶ್ಲೇಷಿಸುವ ,ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವಲ್ಲಿ ಸಹಕರಿಸುತ್ತದೆ. ದೇಶದ ಆರ್ಥಿಕ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಜ್ಞಾನ, ಕಲಿಕೆಯಲ್ಲಿ ಆಸಕ್ತಿ ಮೂಡಿಸುವುದು, ಆರ್ಥಿಕ ಶಿಕ್ಷಣದ ಪರಿಕಲ್ಪನೆಗಳು ಕುರಿತು ಹೆಚ್ಚಿನ ಅರಿವು ಮೂಡಿಸುವುದು, ದೇಶಾದ್ಯಂತ ಸಾರ್ವಜನಿಕ ಸದಸ್ಯರಲ್ಲಿ ವಿವಿಧ ವಿಷಯಗಳ ಕುರಿತು ಹಣಕಾಸು ಸಂದೇಶಗಳನ್ನು ಪ್ರಚಾರ ಮಾಡುವುದು ಹೀಗೆ ಹಲವು ವಿಷಯಗಳ ಬಗ್ಗೆ ಸಪ್ತಾಹ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಡಾ. ಜಾಜಿ ದೇವೇಂದ್ರಪ್ಪ ರವರು ಇಂದು ವಿದ್ಯಾರ್ಥಿಗಳು, ಯುವಕರು ,ಉಳಿತಾಯ ಮನೋಭಾವ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ .ಹಾಗಾಗಿ ಭಾರತೀಯ ರಿಸರ್ವ್ ಬ್ಯಾಂಕ್ ಆದೇಶದಂತೆ ಆರ್ಥಿಕ ಸಾಕ್ಷರತಾ ಸಪ್ತಾಹ ಕಾರ್ಯಕ್ರಮ ವನ್ನು ನಮ್ಮ ಕಾಲೇಜಿನಲ್ಲಿ ಕೊಪ್ಪಳದ ಲೀಡ್ ಬ್ಯಾಂಕ್ ನವರು ಹಮ್ಮಿಕೊಂಡಿದ್ದು ಸಂತಸವಾಗಿದೆ ಎಂದು ತಿಳಿಸಿದರು ಮತ್ತು ವಿದ್ಯಾರ್ಥಿಗಳು ಮುಂದೆ ಉತ್ತಮ ಸ್ವಾವಲಂಬಿಗಳಾಗಿ ಆರ್ಥಿಕ ಸುಭದ್ರತೆಯ ಬದಕನ್ನು ರೂಪಿಸಿಕೊಳ್ಳಲು ಕರೆ ನೀಡಿದರು
ಪ್ರಾರಂಭದಲ್ಲಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾದ ಡಾ.ಅಶ್ರಪ್ ರವರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಸಹಾಯಕ ಪ್ರಾಧ್ಯಾಪಕರುಗಳಾದ ಡಾ. ಮಾರುತಿ ವಿನಾಯಕ್ ಮತ್ತು ಕಾಲೇಜಿನ 120ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

About Mallikarjun

Check Also

ಕುಷ್ಟಗಿ ತಾಲ್ಲೂಕು ಮಟ್ಟದ ದಸರಾ ಕ್ರೀಡಾಕೂಟ: ನೋಂದಣಿಗೆ ಸೂಚನೆ

Kushtagi Taluk Level Dasara Games: Notice for registration ಕೊಪ್ಪಳ ಆಗಸ್ಟ್ 29 (ಕರ್ನಾಟಕ ವಾರ್ತೆ): 2025-26ನೇ ಸಾಲಿನ …

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.