
ತಿಪಟೂರು ತಾಲೂಕಿನ ಕಸಬಾ ಹೋಬಳಿಯ ತಡಸೂರು ಗ್ರಾಮದಲ್ಲಿರುವ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ದಿನೇಶ್ ರವರು ಇತ್ತೀಚೆಗೆ ತಡಸೂರು ಗ್ರಾಮ ಪಂಚಾಯಿತಿ ವತಿಯಿಂದ ನಡೆದ ಸವಿಂಧಾನ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ದಲಿತ ಸಮುದಾಯಕ್ಕೆ ಸೇರಿದ ಮಕ್ಕಳನ್ನು ಆ ಜಾಥಾ ಕಾರ್ಯಕ್ರಮಕ್ಕೆ ಬರದಂತೆ ತಡೆಹಿಡಿದು ಮತ್ತು ಬೆದರಿಸಿ,ಆ ಸವಿಂಧಾನ ಜಾಗೃತಿಯ ವೇದಿಕೆ ಕಾರ್ಯಕ್ರಮದಲ್ಲಿದ್ದ ಗಣ್ಯರು ಬಿ.ಆರ್.ಅಂಬೇಡ್ಕರ್ ಭಾವಚಿತ್ರವುಳ್ಳ ಶಾಲನ್ನು ಹಾಕಿಕೊಂಡಿದ್ದು,ಈ ಶಿಕ್ಷಕ ಆ ಶಾಲನ್ನು ಧರಿಸದೆ ಬಾಬಾ ಸಾಹೇಬ್ ರವರಿಗೆ ಅವಮಾನಿಸಿದ್ದು,ಶಾಲೆಗಳಲ್ಲಿ ವಿದ್ಯಾರ್ಥಿಗಳ ಮಧ್ಯೆ ಜಾತಿಯ ಬೀಜ ಬಿತ್ತರಿಸಿ ಶಾಲೆಯ ಸ್ಥಿತಿ ದುಸ್ತಿರವಾಗಿದ್ದು,ಶಾಲೆ ಮುಚ್ಚುವ ಹಂತಕ್ಕೆ ತಲುಪುತ್ತಿದೆ ಕೂಡಲೇ ಸಂಬಂಧಪಟ್ಟ ಇಲಾಖೆ ಮತ್ತು ಸರ್ಕಾರದ ಶಿಕ್ಷಣ ಸಚಿವರು ಇವರನ್ನು ಸೇವೆಯಿಂದ ವಜಾ ಮಾಡಬೇಕು ಇಲ್ಲವಾದಲ್ಲಿ ತಾಲೂಕಿನಲ್ಲಿ ದಲಿತ ಪರ ಸಂಘಟನೆಗಳ ಒಕ್ಕೂಟ ಮತ್ತು ಗ್ರಾಮಸ್ಥರ ಜೊತೆಗೂಡಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ತಡಸೂರು ಗ್ರಾಮ ಪಂಚಾಯಿತಿ ಸದಸ್ಯ ರೇಣುಕಯ್ಯರವರು ತಿಪಟೂರು ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಗ್ರಾಪಂ ಅಧ್ಯಕ್ಷೆ ರವರ ಪತಿ ತ್ರಯಮೂರ್ತಿ ಮಾತನಾಡಿ, ಮುಖ್ಯ ಶಿಕ್ಷಕ ದಿನೇಶ್ ರವರು ಸರಿಯಾಗಿ ಶಾಲೆಗೆ ಬರದೆ,ಈ ಶಾಲೆಯಲ್ಲಿ ಅವರ ಹೆಂಡತಿ ಸಹಶಿಕ್ಷಕಿಯಾಗಿ ಶ್ಯಾಮಲ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಬೆಳಿಗ್ಗೆ ಕರ್ತವ್ಯಕ್ಕೆ ತಂದು ಶಾಲೆಗೆ ಬಿಟ್ಟು ಹೋದರೆ ಇನ್ನು ಸಂಜೆಗೆ ಶಾಲೆ ಬಿಟ್ಟ ನಂತರ ಹೆಂಡತಿಯನ್ನು ಕರೆದುಕೊಂಡು ಹೋಗುವುದಕ್ಕೆ ಬರುತ್ತಾರೆ.ಈ ವಿಚಾರವಾಗಿ ಕೇಳಿದರೆ ದಿನನಿತ್ಯ ಯಾವುದೋ ಒಂದೊಂದು ಸಬೂಬು ಹೇಳಿ ಕಛೇರಿಯ ಕೆಲಸ ಮತ್ತು ಸಭೆ ಇದೆ ಅಂತ ಆರಿಕೆ ಉತ್ತರ ನೀಡುತ್ತಾರೆ. ಹಾಗೂ ಸರ್ಕಾರದ ಮಹತ್ವಕಾಂಕ್ಷಿಯ ಬಿಸಿಊಟದ ಯೋಜನೆಯಲ್ಲಿ ಮೊಟ್ಟೆ ವಿತರಿಸುತ್ತಿದ್ದರೂ,ಇಲ್ಲಿ ಹೋರಾಟದ ನಂತರ ಮೊಟ್ಟೆ ವಿತರಿಸುತ್ತಿದ್ದಾರೆ.ಮೊಟ್ಟೆ ಬದಲಿಗೆ ಕಡ್ಲೆ ಮಿಠಾಯಿ ನೀಡುತ್ತೇನೆ ಎಂದು ಉಡಾಫೆ ಉತ್ತರ ನೀಡಿದ್ದು,ಇದರ ಬಗ್ಗೆ ಎಸ್ಡಿಎಂಸಿಯ ಪದಾಧಿಕಾರಿಗಳಿಗೆ ಮತ್ತು ತಾಲೂಕು ಶಿಕ್ಷಣಾಧಿಕಾರಿಗಳಿಗೆ ಈ ವಿಚಾರವನ್ನು ತಿಳಿಸಿದೆವು ನಂತರ ಮೊಟ್ಟೆ ವಿತರಿಸಲು ಆದೇಶಿಸಿದ್ದು,ಇವರ ಸೇವೆ ದಲಿತ ವಿರೋಧಿಗೆ ಸಾಕ್ಷಿಯಾಗಿದೆ ಎಂದು ವಿವರಿಸಿದರು.
ಗ್ರಾಮದ ಮುಖಂಡ ರಾಜಶೇಖರ್ ಮಾತನಾಡಿ, ಎಸ್ ಎಸ್ ಎಲ್ ಸಿ ತರಗತಿಯಲ್ಲಿ ಓದುತ್ತಿರುವ ಹೆಣ್ಣು ಮಕ್ಕಳು ಮುಟ್ಟಿನ ವಿಚಾರವನ್ನು ತಿಳಿಸಿದರೆ,ಹೆಣ್ಣು ಮಕ್ಕಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದು ಕಂಡ ಬಂದಿದೆ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಸಹಶಿಕ್ಷಕರು ಇದೇ ರೀತಿಯ ತೊಂದರೆಗಳನ್ನು ಗಂಡ ಮತ್ತು ಹೆಂಡತಿ ಇಬ್ಬರ ಕಿರುಕುಳದಿಂದ ಬೇಸತ್ತು ಬೇರೆ ಕಡೆ ವರ್ಗಾವಣೆ ಗೊಂಡಿರುವ ವಿಚಾರಗಳು ಸುಮಾರುಷ್ಟಿವೆ. ಸಹ ಶಿಕ್ಷಕರಿಗೆ ತುಂಬಾ ಕಿರುಕುಳ ನೀಡುತ್ತಿರುವುದು ಮತ್ತು ಶಾಲಾ ವಿದ್ಯಾರ್ಥಿಗಳು ಶಾಲೆಗೆ ಹೋಗುವುದಿಲ್ಲ ಎಂದು ಪೋಷಕರ ಎದುರು ಕಣ್ಣೀರಾಗುತ್ತಿದ್ದಾರೆ.ಎಂಬ ವಿಚಾರವಾಗಿ ಈ ಬಗ್ಗೆ ಶಾಲಾ ಶಿಕ್ಷಣದ ಆವರಣದಲ್ಲಿ ಪ್ರತಿಭಟನೆ ನಡೆಸಿದ್ದೇವೆ ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಬಸವರಾಜ್,ಜಯಣ್ಣ, ವಸಂತಕುಮಾರ್,ಪುನೀತ್, ರುದ್ರೇಶ್,ಕುಮಾರ್,ರಾಕೇಶ್ ಮತ್ತು ನವೀನ್ ಕುಮಾರ್ ಸೇರಿದಂತೆ ಗ್ರಾಮದ ಮುಖಂಡರುಗಳು ಹಾಜರಿದ್ದರು.