Pulwama attack is a dark day
ಗಂಗಾವತಿ:ಅಖಿಲ ಕರ್ನಾಟಕ ಆರಕ್ಷಕರ ಅಭಿಮಾನಿಗಳ ಬಳಗ ಗಂಗಾವತಿ ವತಿಯಿಂದ ಫೆಬ್ರುವರಿ 14, 2019 ರಂದು ನಡೆದ ಜಮ್ಮು ಕಾಶ್ಮೀರದ ಪುಲ್ವಾಮದಲ್ಲಿ 40 ಸಿಆರ್ ಪಿ ಯೋಧರು ಹುತಾತ್ಮರಾದರು, ಹುತಾತ್ಮರಾದ ಭಾರತದ ಸೈನಿಕರ ಸಾವನ್ನು ಕರಾಳದಿನ ಎಂದುಕೊಂಡು ಆಚರಿಸಲಾಗುತ್ತದೆ. ನಗರದ ಕೋರ್ಟ್ ಮುಂಭಾಗದಲ್ಲಿ ಇರುವ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸಂಜೆ ವೇಳೆಯಲ್ಲಿ ನಗರ ಪೊಲೀಸ್ ಠಾಣೆ ಪಿ.ಐ.ಪ್ರಕಾಶ ಮಾಳಿಯವರು ಹುತಾತ್ಮ ಸೈನಿಕರಿಗೆ ಕ್ಯಾಂಡಲ್ ಗಳನ್ನು ಹಚ್ಚುವ ಮೂಲಕ ಚಾಲನೆ ನೀಡಿ, ಮಾತನಾಡಿದವರು ಹುತಾತ್ಮರಾದ ಸೈನಿಕರಿಗೆ ಮತ್ತು ದೇಶಕ್ಕೆ ಸದಾ ಶಾಂತಿ ಸಿಗಲೆಂದು ಹೇಳಿದರು. ಸಂಚಾರಿ ಪೊಲೀಸ್ ಠಾಣೆ ಪಿಎಸ್ಐ ಗುರುಚಂದ್ರ ಯಾದವ್, ನಿವೃತ್ತ ಪಿಎಸ್ಐ ಯಲ್ಲಪ್ಪ,ಗಂಗಾವತಿ ಆರಕ್ಷಕ ಅಭಿಮಾನಿಗಳ ಸಂಘದ ಅಧ್ಯಕ್ಷ ಈಶ್ವರ, ಎಂ,ಶರಣಯ್ಯಸ್ವಾಮಿ, ಅಜಯಕುಮಾರ ಛಲವಾದಿ, ಯಮನೂರಿ, ಮುತ್ತುರಾಜ, ವೆಂಕಟೇಶ ಉಪ್ಪಾರ , ಈರಣ್ಣ ನಾಗಲಿಕರ್, ಸೇರಿದಂತೆ ಇತರರು ಇದ್ದರು.