Breaking News

ವ್ಯಾಪಾರಸ್ಥರ ಘೋಳು ಕೇಳುವವರಾರು ?…

Who listens to business people?

ಜಾಹೀರಾತು


ಉಗಾರ ಖುರ್ಧ : ವ್ಯಾಪಾರಸ್ಥರು ಗ್ರಾಹಕರಿಂದ ತೆರಿಗೆ ಸಂಗ್ರಹಿಸಿ ಸರಕಾರದ ಖಜಾನೆಗೆ ತುಂಬುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ, ಸರಕಾರ ನಡೆಯಬೇಕಾದರೆ ವ್ಯಾಪಾರಸ್ಥರ ಪಾತ್ರ ಅತೀ ಮಹತ್ವದ್ದಾಗಿದೆ ಎಂದು ಉಗಾರ ಖುರ್ಧ ಪಟ್ಟಣದ ಗಣ್ಯ ವ್ಯಾಪಾರಸ್ಥರಾದ ಉಜ್ವಲಾ ಶೆಟ್ಟಿ ಇವರು ಪತ್ರಿಕೆಗೆ ತಿಳಿಸಿದ್ದಾರೆ, ಪತ್ರಕರ್ತರೊಂದಿಗೆ ಮಾತನಾಡುತ್ತ, ಸರಕಾರ ಎಲ್ಲ ವರ್ಗದ ಜನರಿಗೆ ಒಂದಿಲ್ಲಾ ಒಂದು ಯೋಜನೆಗಳನ್ನು ರೂಪಿಸಿ ಸಹಾಯ ಮಾಡುತ್ತಿದೆ, ಇದು ಸ್ವಾಗತಾರ್ಹವಾಗಿದೆ, ಆದರೆ ಇಲ್ಲಿಯವರೆಗೆ ಸರಕಾರದ ಪರವಾಗಿ ತೆರಿಗೆ ಸಂಗ್ರಹಿಸಿ ಭರಣಾ ಮಾಡುತ್ತಿರುವ, ಮದ್ಯಮ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಯಾವುದೇ ತರದ ಸಹಾಯ ನೀಡುವ ಯೋಜನೆಗಳು ಸರಕಾರದಲ್ಲಿ ಜಾರಿಯಲ್ಲಿರುವುದಿಲ್ಲ, ಉದ್ಯಮಿಗಳಿಗೆ ಸಾಕಷ್ಟು ರಿಯಾಯರಿಗಳು ದೊರೆಯುತ್ತಲಿವೆ, ಒಬ್ಬ ಮದ್ಯಮ ಅಥವಾ ಸಣ್ಣ ವ್ಯಾಪಾರಿಗಳು ಸಾಲ ಮಾಡಿ ಹಗಲಿರುಳು ಅನ್ನದೇ ತನ್ನ ಪರಿವಾರದೊಂದಿಗೆ ಕಷ್ಟಪಟ್ಟು ದುಡಿಯುತ್ತಾರೆ, ಒಮ್ಮೊಮ್ಮೆ ಅಪಘಾತ, ಬೆಂಕಿ ಅನಾಹುತ, ಸಾಲದ ಶೂಲ, ಅನಾರೋಗ್ಯ ಹೀಗೆ ಆಗುವ ಅವಘಡಗಳಿಂದ ವ್ಯಾಪಾರಸ್ಥ ತತ್ತರಿಸಿ ಹೋಗುತ್ತಾನೆ, ಇಂತಹ ಸಮಯದಲ್ಲಿ ಆತನಿಗೆ ಯಾವುದೇ ತರದ ಆಧಾರ ಇರುವುದಿಲ್ಲ, ಅಂತಹ ಸಮಯದಲ್ಲಿ ಬದುಕು ಕಟ್ಟುವುದು ಅಸಾಧ್ಯ ಆಗುತ್ತದೆ, ಇಂತಹ ಕಠಿಣ ಪರಿಸ್ಥಿಯನ್ನು ಎದುರಿಸಲಿಕ್ಕೆ ಆಗದೇ ಕೆಲವೊಮ್ಮೆ ಆತ್ಮಹತ್ಯೆಯ ದಾರಿ ಹಿಡಿದ ಎಷ್ಟೋ ಉದಾಹರನೆಗಳಿವೆ. ಪ್ರತಿಯೊಬ್ಬ ಮದ್ಯಮ ಹಾಗೂ ಸಣ್ಣ ವ್ಯಾಪಾರಿಯ ಜೀವನ ಹಸಿರಾಗಬೇಕಾದರೆ, ಸರಕಾರದಿಂದ ಏನಾದರೂ ಸಹಾಯ-ಸಹಕಾರ ದೊರೆಯಬೇಕು, ಸರ್ವರ ಲೇಸನ್ನು ಬಯಸುವ ಕರ್ನಾಟಕ ಸರಕಾರ ಈ ವಿಷಯದ ಬಗ್ಗೆ ವಿಚಾರ ಮಾಡಿ, ಆಪತ್ಕಾಲದಲ್ಲಿರುವ ವ್ಯಾಪಾರಸ್ಥರ ಅನುಕೂಲಕ್ಕಾಗಿ, ಕರ್ನಾಟಕದ ಮುಖ್ಯ ಮಂತ್ರಿಯವರಾದ ಗೌರವಾನ್ವಿತ ಸಿದ್ಧರಾಮಯ್ಯ ಸಾಹೇಬರು ಮದ್ಯಮ ಹಾಗೂ ಸಣ್ಣ ವ್ಯಾಪಾರಸ್ಥರ ಅನುಕೂಲಕ್ಕಾಗಿ ಯೋಜನೆಗಳನ್ನು ರೂಪಿಸಬೇಕೆಂದು ಉಗಾರ ಖುರ್ಧ ಪಟ್ಟಣದ ಗಣ್ಯ ವ್ಯಾಪಾರಸ್ಥರು ಆದ ಉಜ್ವಲಾ ಶೆಟ್ಟಿ ಇವರು ಒತ್ತಾಯಿಸಿದ್ದಾರೆ.

About Mallikarjun

Check Also

ಮತದಾರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಿಕೊಳ್ಳಿ,ಶಿರಸ್ತೇದಾರ ರವಿಕುಮಾರ್ ನಾಯಕವಾಡಿ ಸಲಹೆ

Include the name in the voter list, Chief Ravikumar suggested ಜಿಎಚ್ ಎನ್ ಕಾಲೇಜಿನಲ್ಲಿ ಮತದಾರ ಪಟ್ಟಿಯ …

Leave a Reply

Your email address will not be published. Required fields are marked *

ಈ ಸುದ್ದಿಯನ್ನು ನಕಲು ಅಥವಾ ಕದಿಯುವುದನ್ನು ನಿರ್ಬಂಧಿಸಲಾಗಿದೆ. ಇದು ಶಿಕ್ಷಾರ್ಹ ಅಪರಾಧವಾಗಿದ್ದು ಇದು ಎಚ್ಚರಿಕೆಯ ಸಂದೇಶ.