Dharani in front of Chikkodi Zilla Panchayat office

ಚಿಕ್ಕೋಡಿ: ರಕಾರದ ಅನುದಾನದಲ್ಲಿ ನಿರ್ಮಿಸಿದ ಕಾಮಗಾರಿಗಳ ಮೇಲೆ ಯಾವುದೇ ಜನಪ್ರತಿನಿಧಿಗಳ ಭಾವ ಚಿತ್ರಗಳನ್ನು ಹಾಕಬಾರದು ಎಂಬ ನ್ಯಾಯಾಲಯದ ಆದೇಶವಿದೆ, ಚಿಕ್ಕೋಡಿ ಉಪವಿಭಾಗದಲ್ಲಿಯ ಬಸ್ ಸೆಲ್ಟರಗಳ ಮೇಲೆ ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಹಾಕಿರುವ ಕುರಿತು ಮಾನ್ಯ ಬೆಳಗಾವಿ ಜಿಲ್ಲಾಧಿಕಾರಿಗಳಿಗೆ ಬಾಳಾಸಾಹೇಬ ರಾವ್ ವಕೀಲರು, ದೂರು ಸಲ್ಲಿಸಿದ್ದು, ಚಿಕ್ಕೋಡಿಯ ಜಿಲ್ಲಾ ಪಂಚಾಯತ ಅಧಿಕಾರಿಗಳಿಗೆ, ಜನಪ್ರತಿನಿಧಿಗಳ ಭಾವಚಿತ್ರಗಳನ್ನು ಮೂರು ದಿವಸಗಳಲ್ಲಿ ತೆರುವುಗೊಳಿಸುವಂತೆ ಬೆಳಗಾವಿ ಜಿಲ್ಲಾಧಿಕಾರಿಗಳು ಅಕ್ಟೋಬರ 2023 ರಲ್ಲಿ ಆದೇಶಿಸಿದ್ದಾರೆ, ಆದರೆ ಜಿಲ್ಲಾ ಪಂಚಾಯತ ಅಧಿಕಾರಿಗಳು ನ್ಯಾಯಾಲಯದ ಹಾಗೂ ಜಿಲ್ಲಾಧಿಕಾರಿಗಳ ಆದೇಶವನ್ನು ಪಾಲನೆ ಮಾಡದೇ ಕರ್ತವ್ಯಲೋಪವೆಸಗಿದ್ದಾರೆ, ಈ ಕಾರಣಕ್ಕೆ ಬಾಳಾಸಾಹೇಬ ರಾವ್ ವಕೀಲರ ಜೊತೆಗೆ ಚಿಕ್ಕೋಡಿಯ ಜಿಲ್ಲಾ ಪಂಚಾಯತ ಕಚೇರಿಯ ಮುಂದೆ ಧರಣಿ ಮಾಡಿದರು.