Moka Hospital: Tuberculosis Free Village PANA: TB Free GP Certification, Validation Team.

ಮೋಕಾ: ಫೆ.09: ಇಂದು ಮೋಕಾ ಗ್ರಾಮದಲ್ಲಿ ಆಯೋಜಿಸಿದ ಆಸ್ಪತ್ರೆಯ ಕ್ಷಯ ಮುಕ್ತ ಗ್ರಾಮವಾಗಿದೆಂದು ಟಿಬಿ ಮುಕ್ತ ಜಿಪಿ ಸರ್ಟಿಫಿಕೇಷನ್, ವ್ಯಾಲಿಡೇಷನ್ ತಂಡ ಹೇಳಿದೆ.
ನಂತರ ಇಂದು ಮೋಕಾ ಆಸ್ಪತ್ರೆಗೆ ಕ್ಷಯ ಮುಕ್ತ ಗ್ರಾಮ ಪಂಚಾಯತಿ ಪ್ರಾಮಾಣಿಕರಣ,ಮೌಲ್ಯಾಂಕನ ತಂಡ ಭೇಟಿ ನೀಡಿದ್ದು, ಕ್ಷಯ ರೋಗಕ್ಕೆ ಸಂಬಂಧ ಪಟ್ಟ ಧಾಖಲಾತಿ ಪರಿಶೀಲಿಸಲಾಯಿತು, ಪ್ರಯೋಗಶಾಲಾ ದಾಖಲಾತಿ, ಫಾರ್ಮಸಿ ದಾಖಲಾತಿ ಹಾಗು ಮಾಹಿತಿ ಶಿಕ್ಷಣ ಸಂಪರ್ಕ ವಿಭಾಗ ಮಾಹಿತಿ ದಾಖಲಾತಿ ಪರಿಶೀಲಿಸಿ ನಡಿಸಿ ಉತ್ತಮ ಪ್ರತಿಕ್ರಿಯೆ ತಿಳಿಸಿದರ.
ಇನ್ನು ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷರು ಹಾಗು ಹಾಲಿ ಸದಸ್ಯರಾದ ರಾಮಣ್ಣವರ ಜತೆಯಲ್ಲಿ ಕ್ಷಯ ಮುಕ್ತ ಗ್ರಾಮ ಪಂಚಾಯತ ಬಗ್ಗೆ ತಮ್ಮ ಗ್ರಾಮ ಪಂಚಾಯತಿಯಲ್ಲಿ ಏನು ಕಾರ್ಯಕ್ರಮ ಹಮ್ಮಿಕೊಂಡಿದ್ದೀರಾ ಎಂದು ಕೇಳಿದಾಗ ಮಾಸಿಕ ಗ್ರಾಮ ಪಂಚಾಯತಿ ಸಾಮನ್ಯ ಸಭೆಯಲ್ಲಿ ಕ್ಷಯ ರೋಗದ ಬಗ್ಗೆ ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ಹಾಗು ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ಮಾಹಿತಿ ನೀಡುತ್ತಾರೆ, ಜನ ಜಾಗೃತಿ ಕಾರ್ಯಕ್ರಮ ನಡೆಸುತ್ತಾರೆ ಎಂದು ಮಾಹಿತಿ ತಿಳಿಸಿದರು.
ಸಮುದಾಯ ಅರೋಗ್ಯ ಅಧಿಕಾರಿಗೆ ಇವರಿಗೆ ಯಾವ ರೀತಿ ಪ್ರಕರಣ ಕಂಡುಹಿಡಿದು ರೆಫರ್ ಮಾಡಬೇಕು ಎಂದು ಸಲಹೆ ಸೂಚನೆ ನೀಡಿದರು,
ಕಾರ್ಯಕ್ರಮದಲ್ಲಿ ಡಾ. ನೀತಾ ಪಿ ಏನ್, ಡಾ. ಪಾಂಡುರಂಗ ಸ್ವಾಮಿ
ಡಾ. ನಂದನ ಶರ್ಮ ಮತ್ತು ಡಾ ನಿತೇಶ್ ಕೆ, ಹಾಗೂ ಡಿ ಟಿ ಓ ಕಚೇರಿ ಮೇಲ್ವಿಚಾರಕರಾದ ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿಗಳಾದ ಪಂಪಪತಿ ಹಾಗು ಎಸ್.ಟಿ ಎಸ್ ಎಂ ಒಬುಳರೆಡ್ಡಿ,ಮತ್ತು ಬಸವರಾಜ್ ಎಸ್ ಟಿ ಎಲ್ ಎಸ್,ಮೋಕಾ ಆಸ್ಪತ್ರೆಯ ಕ್ಷೇತ್ರ ಅರೋಗ್ಯ ಶಿಕ್ಷಣ ಅಧಿಕಾರಿ ಖುರ್ಶಿದ್ ಬೇಗಮ್, ಹಿರಿಯ ಅರೋಗ್ಯ ನಿರೀಕ್ಷಣಾ ಅಧಿಕಾರಿ ಬಸವರಾಜ್, ಫಾರ್ಮಸಿ ಅಧಿಕಾರಿ ಜಾಲಜಾಕ್ಷಿ, ಪ್ರಯೋಗ ಶಾಲಾ ತಂತ್ರಜ್ಞಾರಾದ ಉಮಾದೇವಿ,ಹನುಮ ಗೌಡ,ಸ್ವಾತಿ, ಪ್ರಾ ಸು ಆ ಎರ್ರಮ್ಮ, ಸಿ ಹೆಚ್ ಓ ತ್ರಿಪುನ್ ಕುಮಾರ್,ಮತ್ತು ಆಸ್ಪತ್ರೆ ಸಿಬ್ಬಂದಿ ಮತ್ತಿತರರು ಉಪಸ್ಥಿತರಿದ್ದರು.